'ಧ್ಯಾನದಿಂದ ಸಾಧನೆ ಸಾಧ್ಯ'
ಕ.ಪ್ರ.ವಾರ್ತೆ, ಜೋಗ್ಫಾಲ್ಸ್: ಮಾ.1
ಧ್ಯಾನದಿಂದ ಮಾನವನ ಶ್ರೇಯೋಭಿವೃದ್ಧಿ, ಮಹತ್ಸಾಧನೆ ಸಾಧ್ಯ. ಮಾನವರಲ್ಲಿ ಧಾರ್ಮಿಕ ಪ್ರಜ್ಞೆ, ಗುರು- ಹಿರಿಯರಲ್ಲಿ ಭಕ್ತಿ, ಧರ್ಮದಲ್ಲಿ ನಂಬಿಕೆ ಧೃಡಗೊಂಡಾಗ ಮಾನವನ ಜೀವನ ಪಾವನವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರುಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದರು. ಅವರು ಕಾರ್ಗಲ್ ಸಮೀಪದ ಮಲ್ಲಕ್ಕಿಯ ಶ್ರೀಪಾದ ಭಟ್ ಮನೆಯಲ್ಲಿ ಗುರು ಸೇವಾದಿ ಪೂಜೆಗಳನ್ನು ಸ್ವೀಕರಿಸಿ ನೆರೆದಿದ್ದ ಭಕ್ತಾಧಿಗಳಿಗೆ ಆರ್ಶೀವಚನ ನೀಡಿ ಮಾತನಾಡಿದರು. ಇಂದು ಹಳ್ಳಿಗಳು ನಗರೀಕರಣಗೊಳ್ಳುತ್ತಿರುವುದರ ಜೊತೆಗೆ ಭಾರತೀಯ ಪುರಾತನ ಸನಾತನ ಸಂಸ್ಕೃತಿ ವಿನಾಶದ ಅಂಚಿಗೆ ತಲುಪುವಂತಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಳ್ಳಿಗಳಲ್ಲಿ ನೆಲೆಸಿರುವ ಜನರು ತಮ್ಮ ಮಕ್ಕಳೊಂದಿಗೆ ಪಟ್ಟಣಗಳಿಗೆ ವಲಸೆ ಹೋಗುತ್ತಿರುವುದು. ಇದನ್ನು ತಡೆಯುವ ಮೂಲಕ ಸನಾತನ ಭಾರತೀಯ ಸಂಸ್ಕೃತಿ ಉಳಿಸಬೇಕಾಗಿದೆ ಎಂದರು. ಸಿಗಂದೂರಿನ ಧರ್ಮದರ್ಶಿ ರಾಮಪ್ಪ, ವನತಜ್ಞ ನಾಗೇಂದ್ರ ಭಟ್ ಹತ್ಲಳ್ಳಿ, ಡಾ. ಗಜಾನನ ಶರ್ಮ ಮತ್ತು ಫ್ರಶಾಂತ್ ಮಧ್ಯಸ್ಥರವರನ್ನು ಸ್ವಾಮೀಜಿ ಸನ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

