ಚಿನ್ನದ ಒಡವೆ ಕಳ್ಳತನ
ಕನ್ನಡ ಪ್ರಭ ವಾರ್ತೆ, ಭದ್ರಾವತಿ, ಮಾ.2
ಮಗನಿಗೆ ಆರೋಗ್ಯ ಸರಿಯಿಲ್ಲದ ಕಾರಣ ವೈದ್ಯರಲ್ಲಿ ತೋರಿಸಲು ಸರ್ಕಾರಿ ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾಗ ಜಯಲಕ್ಷ್ಮಿ ಎಂಬ ಮಹಿಳೆಯ ವ್ಯಾನಿಟಿ ಬ್ಯಾಗಿನಲ್ಲಿದ್ದ ಸುಮಾರು 20,000 ಮೌಲ್ಯದ ಬಂಗಾರದ ಒಡವೆಯನ್ನು ಕಳವಾಗಿದ್ದು ಈ ಬಗ್ಗೆ ಜಯಲಕ್ಷ್ಮಿ ಅವರು ಹಳೇನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಲೆಯಲ್ಲಿ ಮುಳುಗಿ ಸಾವು: ಭದ್ರಾವತಿ ತಾಲೂಕಿನ ರೆಡ್ಡಿ ಕ್ಯಾಂಪ್ ಹತ್ತಿರ ಸಂತೋಷ್ ಕುಮಾರ್ (27) ಎಂಬ ಯುವಕ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಕ್ಕು ನೀರಿನಲ್ಲಿ ಮುಳುಗಿ ಫೆ.28ರಂದು ಮರಣ ಹೊಂದಿದ್ದಾನೆ. ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ಸೀಗೆಬಾಗಿ ಅಂಬೇಡ್ಕರ್ ಕಾಲೋನಿಯಲ್ಲಿ ಸಾಕಮ್ಮ ಎಂಬುವರ ಮನೆಯಲ್ಲಿ ಸೈಯದ್ ಗೌಸ್ ಮತದಾರರಿಗೆ ಹಣದ ಆಮಿಷವೊಡ್ಡಿ ಪ್ರಚೋದನೆ ಮಾಡುತ್ತಿದ್ದ ಬಗ್ಗೆ ತಹಸೀಲ್ದಾರ್ ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೇನಗರ ಪೊಲೀಸರು ದಾಳಿಮಾಡಿ 12,050 ನಗದು, ಮೂರು ಮೊಬೈಲ್ ಫೋನ್, ಒಂದು ಟಾಟಾ ಸಫಾರಿ ವ್ಯಾನ್, ಎರಡು ಮೋಟಾರ್ ಬೈಕ್ ಹಾಗೂ ನಾಲ್ಕು ಜೆಡಿ (ಎಸ್) ಗುರುತಿರುವ ಶಾಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮತದಾರರಿಗೆ ಹಂಚುತ್ತಿದ್ದ ಶಾಲು ವಶ: ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್. ಬಾಬು ಅವರಿಗೆ ಮತ ಹಾಕಲು ಪಕ್ಷದ ಚಿನ್ಹೆಯುಳ್ಳ ಶಾಲುಗಳನ್ನು ಹಂಚುತ್ತಿದ್ದ ಬಗ್ಗೆಯೂ ಹಳೇನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

