ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಅರಳಿದ ಕಮಲ

Published On :

ತೀರ್ಥಹಳ್ಳಿ: 11 ಸ್ಥಾನಗಳಲ್ಲಿ ಜಯಗಳಿಸಿದ ಪಕ್ಷದ ಅಭ್ಯರ್ಥಿಗಳು ತೀರ್ಥಹಳ್ಳಿ ಪಪಂನಲ್ಲಿ ಪಕ್ಷದ ಪ್ರಭುತ್ವವನ್ನು ಮತ್ತೆ ಸಾಬೀತುಪಡಿಸಿದರು.
 ಒಟ್ಟು 15 ಸ್ಥಾನಗಳಿಗೆ ನೆಡೆದ ಚುನಾವಣೆಯಲ್ಲಿ 11 ಬಿಜೆಪಿ , 2 ಕಾಂಗ್ರೆಸ್, 1 ಜೆಡಿಎಸ್, 1 ಕೆಜೆಪಿ ಜಯಗಳಿಸಿದ್ದಾರೆ. 7, 8, 10, 11, 12, 14 ನೇ ವಾರ್ಡುಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. 13ನೇ ವಾರ್ಡ್ ಕಾಂಗ್ರೆಸ್ ತನ್ನದಾಗಿಸಿಕೊಂಡಿತು. 9ನೇ ವಾರ್ಡಿನಿಂದ ಕೆಜೆಪಿ ಪಪಂ ಪ್ರವೇಶ ಪಡೆದರೆ 15ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಜಯಶೀಲರಾದರು.
 ಒಂದೇ ಒಂದು ಮತ ನಿರ್ಣಾಯಕವಾಗಿ ಪರಿಣಮಿಸಿ ಬಿಜೆಪಿ ಅಭ್ಯರ್ಥಿ ಸವಿತಾ ಉಮೇಶ್ ಗೆಲುವಿಗೆ ಕಾರಣವಾಯಿತು. ಸವಿತಾ ಉಮೇಶ್  176 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿಜಯ 175  ಮತಗಳನ್ನು ಪಡೆದು ತೀವ್ರ ಸ್ಪರ್ಧೆ ಒಡ್ಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.