ಭದ್ರಾವತಿಯಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತ
ಕ.ಪ್ರ ವಾರ್ತೆ, ಭದ್ರಾವತಿ, ಮಾ.11
ಭದ್ರಾವತಿ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ನಿಚ್ಚಳ ಬಹುಮತ ಸಾಧಿಸಿದೆ. ಸೋಮವಾರ ನಡೆದ ಮತ ಎಣಿಕೆಯಲ್ಲಿ ಒಟ್ಟು 35 ವಾರ್ಡ್ಗಳಲ್ಲಿ ಜೆಡಿಎಸ್ 23 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಿದೆ. ಕಾಂಗ್ರೆಸ್ 6 ಸ್ಥಾನಗಳನ್ನು, ಕೆಜೆಪಿ ಎರಡು ಸ್ಥಾನಗಳನ್ನು, ಬಿಜೆಪಿ ಒಂದು ಸ್ಥಾನ ಗಳಿಸಿವೆ. ಮೂವರು ಪಕ್ಷೇತರರು ಸಹ ಆಯ್ಕೆಯಾಗಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯಕ್ರಮ ಪಟ್ಟಣದ ಸರ್ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾರಂಭವಾಗಿ 11.30ರ ಹೊತ್ತಿಗೆ ಎಲ್ಲಾ ವಾರ್ಡುಗಳ ಫಲಿತಾಂಶಗಳು ಹೊರಬಿದ್ದವು. ಕಳೆದ ಬಾರಿಯ ನಗರಸಭೆ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದ ಜೆಡಿಎಸ್ ಈ ಬಾರಿ 23 ಸ್ಥಾನಗಳನ್ನು ಗಳಿಸಿ 8 ಸ್ಥಾನಗಳನ್ನು ನಗರಸಭೆಯಲ್ಲಿ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಮಾತ್ರ ಗೆದ್ದು ಕಳೆದ ಬಾರಿಯ ಹೋಲಿಕೆಯಲ್ಲಿ 10 ಸ್ಥಾನಗಳನ್ನು ಕಳೆದುಕೊಂಡಿದೆ. ಸೋಮವಾರದ ಮತ ಎಣಿಕೆಯಲ್ಲಿ ಜಯ ಗಳಿಸಿದವರು ಮತ್ತು ಅವರ ಸಮೀಪ ಪ್ರತಿಸ್ಪರ್ಧಿಗಳ ವಿವರ ಕೆಳಕಂಡಂತಿದೆ.
ವಾರ್ಡ್ 1 - ಎಂ.ಎ.ಅಜಿತ್ (ಜೆಡಿಎಸ್) 1598 ಮತಗಳು,
ವಾರ್ಡ್ 2 - ಕೆ.ಎನ್. ಭೈರಪ್ಪಗೌಡ (ಕೆಜೆಪಿ) 676 ಮತಗಳು,
ವಾರ್ಡ್ 3 - ಎಸ್. ಮೀನಾಕ್ಷಿ (ಜೆಡಿಎಸ್) 823 ಮತಗಳು
ವಾರ್ಡ್ 4 - ವಿದ್ಯಾಶ್ರೀ ಕೆ.ಎನ್ (ಜೆಡಿಎಸ್) 666 ಮತಗಳು,
ವಾರ್ಡ್ 5 - ಮುರ್ತುಜಾ ಖಾನ್ (ಕಾಂಗ್ರೆಸ್) 1114 ಮತಗಳು.
ವಾರ್ಡ್ 6 - ಶಿವರಾಜ್ (ಜೆಡಿಎಸ್) 768 ಮತಗಳು
ವಾರ್ಡ್ 7 - ಟಿಪ್ಪು ಸುಲ್ತಾನ್ (ಪಕ್ಷೇತರ) 857 ಮತಗಳು,
ವಾರ್ಡ್ 8 - ವಿ.ಮಹಮದ್ ಕೌಸರ್ (ಜೆಡಿಎಸ್) 1089 ಮತಗಳು
ವಾರ್ಡ್ 9 - ಆನಂದ್ ಎಚ್ (ಜೆಡಿಎಸ್) 1355 ಮತಗಳು.
ವಾರ್ಡ್ 10 - ಎಸ್. ಹಾಲಮ್ಮ (ಜೆಡಿಎಸ್) 1048 ಮತಗಳು.
ವಾರ್ಡ್ 11 - ಮಣಿ (ಪಕ್ಷೇತರ) 1430 ಮತಗಳು.
ವಾರ್ಡ್ 12 - ಜಿ. ಆನಂದಕುಮಾರ್ (ಬಿಜೆಪಿ) 840 ಮತಗಳು.
ವಾರ್ಡ್ 13 - ವಿ. ಕದಿರೇಶ್ (ಕೆಜೆಪಿ) 1299 ಮತಗಳು.
ವಾರ್ಡ್ 14 - ಸಕ್ಕೂಬಾಯಿ (ಕಾಂಗ್ರೆಸ್) 817 ಮತಗಳು.
ವಾರ್ಡ್ 15 - ಕೆ.ಎಸ್. ಶಾಂಭವಿ (ಜೆಡಿಎಸ್) 996 ಮತಗಳು.
ವಾರ್ಡ್ 16 - ವಿಶಾಲಾಕ್ಷಿ (ಜೆಡಿಎಸ್) 738 ಮತಗಳು.
ವಾರ್ಡ್ 17 - ವಿ.ನರಸಿಂಹನ್ (ಜೆಡಿಎಸ್) 1063 ಮತಗಳು.
ವಾರ್ಡ್ 18 - ಆರ್. ಕರುಣಾಮೂರ್ತಿ (ಜೆಡಿಎಸ್) 1050 ಮತಗಳು.
ವಾರ್ಡ್ 19 - ಆರ್. ಮಹೇಶ್ (ಕಾಂಗ್ರೆಸ್) 531 ಮತಗಳು.
ವಾರ್ಡ್ 20- ಕೆ.ಆರ್. ಭಾಗ್ಯಮ್ಮ (ಕಾಂಗ್ರೆಸ್) 804 ಮತಗಳು.
ವಾರ್ಡ್ 21 - ಬದರಿನಾರಾಯಣ (ಜೆಡಿಎಸ್) 1495 ಮತಗಳು.
ವಾರ್ಡ್ 22 - ವೆಂಕಟಯ್ಯ (ಕಾಂಗ್ರೆಸ್) 1059 ಮತಗಳು.
ವಾರ್ಡ್ 23- ಮಹಾದೇವಿ (ಜೆಡಿಎಸ್) 1448 ಮತಗಳು.
ವಾರ್ಡ್ 24 - ಮಹಬೂಬ್ ಸಾಬ್ (ಜೆಡಿಎಸ್) 938 ಮತಗಳು.
ವಾರ್ಡ್ 25 - ಎಂ. ರಾಜು (ಜೆಡಿಎಸ್) 1190 ಮತಗಳು.
ವಾರ್ಡ್ 26 - ಅಂಜನಪ್ಪ (ಪಕ್ಷೇತರ) 345 ಮತಗಳು.
ವಾರ್ಡ್ 27 - ಗುಣಶೇಖರ್ (ಜೆಡಿಎಸ್) 970 ಮತಗಳು.
ವಾರ್ಡ್ 28 - ಎಸ್. ಲಕ್ಷ್ಮಿದೇವಿ (ಕಾಂಗ್ರೆಸ್) 793 ಮತಗಳು.
ವಾರ್ಡ್ 29 - ಅನಿಲ್ಕುಮಾರ್ (ಜೆಡಿಎಸ್) 845 ಮತಗಳು.
ವಾರ್ಡ್ 30 - ಲೀಲಾವತಿ (ಜೆಡಿಎಸ್) 1041 ಮತಗಳು.
ವಾರ್ಡ್ 31 - ಜೆ. ರಾಮಕೃಷ್ಣೇಗೌಡ (ಜೆಡಿಎಸ್) 1539 ಮತಗಳು.
ವಾರ್ಡ್ 32 - ಜಿ.ಡಿ. ನಟರಾಜ್ (ಜೆಡಿಎಸ್) 1033 ಮತಗಳು.
ವಾರ್ಡ್ 33 - ಎಂ.ಎಸ್. ಸುಧಾಮಣಿ (ಜೆಡಿಎಸ್) 825 ಮತಗಳು.
ವಾರ್ಡ್ 34 - ಎಚ್.ಬಿ. ರವಿಕುಮಾರ್ (ಜೆಡಿಎಸ್) 1649 ಮತಗಳು. ವಾರ್ಡ್ 35 - ಜೆ. ಭಾಗ್ಯ 1133 ಮತಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

