ಮತಗಳ ಬೆಲೆ ಗೊತ್ತಾಗೋದು ಯಾವಾಗ?
ಕಪ್ರ ವಾರ್ತೆ, ಶಿವಮೊಗ್ಗ, ಮಾ.11
ಒಂದು ಮತಕ್ಕೆ ಇರುವ ಬೆಲೆ ಎಷ್ಟು ಎಂಬುದು ಜಿಲ್ಲೆಯ ಈ ನಾಲ್ಕು ವಾರ್ಡ್ಗಳಲ್ಲಿ ಗೆದ್ದ-ಸೋತ ಅಭ್ಯರ್ಥಿಗಳಿಗೆ ಖಂಡಿತಾ ಅರಿಗೆ ಬಂದಿರುತ್ತದೆ. ಏಕೆಂದರೆ ಇವರ ಗೆಲವಿನ ಅಂತರ 1 ಮತ ಮಾತ್ರ.
ಭದ್ರಾವತಿ ನಗರಸಭೆಯ 28ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಎಸ್. ಲಕ್ಷ್ಮೀದೇವಿ ಅವರು 793 ಮತಗಳನ್ನು ಪಡೆದರೆ ತಮ್ಮ ಪ್ರತಿ ಸ್ವರ್ಧಿ ಜೆಡಿಎಸ್ 792 ಮತ ಪಡೆದು ಕೇವಲ 1 ಮತದಿಂದ ಸೋತಿದ್ದಾರೆ.
ಶಿರಾಳಕೊಪ್ಪದ ಪಟ್ಟಣ ಪಂಚಾಯಿತಿ 12ನೇ ವಾರ್ಡ್ನಿಂದ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಮುಹಿಬುಲ್ಲಾ 162 ಮತ, ಪ್ರತಿ ಸ್ಪರ್ಧಿ ಕೆಜೆಪಿಯ ಅಬ್ದುಲ್ ಆಸಿಫ್ 161 ಮತ ಪಡೆದರು.
ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ 10ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಸವಿತಾ ಅವರು 176 ಮತ, ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಜಯ 175 ಮತ ಪಡೆದು ಕೇವಲ ಒಂದು ಮತಗಳಿಂದ ಸೊಲುಂಡಿದ್ದಾರೆ.
ಸೊರಬ ಪಟ್ಟಣ ಪಂಚಾಯ್ತಿಯ 1ನೇ ವಾರ್ಡ್ನ ಸ್ಪರ್ಧಿ ಕೆಜೆಪಿಯ ಕೆ. ರತ್ನಮ್ಮ 173 ಮತ ಪಡೆದುಕೊಂಡರೇ ಕಾಂಗ್ರೆಸ್ನ ಅಭ್ಯರ್ಥಿ 172 ಮತ ಪಡೆಯುವ ಮೂಲಕ 1 ಮತದಿಂದ ಸೋಲು ಒಪ್ಪಿಕೊಂಡಿದ್ದಾರೆ.
2 ಮತಗಳ ಅಂತರ: ಶಿರಾಳಕೊಪ್ಪದ 13ನೇ ವಾರ್ಡ್ನ ಜೆಡಿಎಸ್ ಅಭ್ಯರ್ಥಿ ರಷೀದ ಬೇಗಂ 255 ಮತ ಪಡೆದರೆ, ಪ್ರತಿಸ್ಪರ್ಧಿ ಕೆಜೆಪಿ ಅಭ್ಯರ್ಥಿ ರೇಷ್ಮಾ ಎಸ್. ಕುಮಾರ್ 253 ಮತ ಪಡೆದು 2 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇದೇ ಸ್ಥಳೀಯ ಸಂಸ್ಥೆಯ 5ನೇ ವಾರ್ಡ್ ಅಭ್ಯರ್ಥಿ ನೂರ್ ಜಾನ್ ಅವರಿಗೆ ಪ್ರತಿಸ್ಪರ್ಧಿಗಳಿಲ್ಲದೇ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸೊರಬ ಪಟ್ಟಣ ಪಂಚಾಯ್ತಿಯ ಇನ್ನೂ 11ನೇ ವಾರ್ಡ್ನ ಕೆಜೆಪಿ ಅಭ್ಯರ್ಥಿ ಕೆ. ನೇತ್ರಾವತಿ 202 ಮತ, ಜೆಡಿಎಸ್ನ ಪುಷ್ಪ 195 ಮತ ಪಡೆದು 7 ಮತಗಳಿಂದ ಪರಾಭವಗೊಂಡಿದ್ದಾರೆ.
ಹೊಸನಗರ ಪಟ್ಟಣ ಪಂಚಾಯ್ತಿಯ ಇಲ್ಲಿನ 4ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಬಿ. ಕೃಷ್ಣವೇಣಿ 78 ಮತ ಪಡೆದರೆ, ಕೆಜೆಪಿ ಅಭ್ಯರ್ಥಿ ಗೌರಮ್ಮ 68 ಮತ ಪಡೆದು 10 ಮತಗಳಿಂದ ಸೋಲು ಕಂಡರು. 9ನೇ ವಾರ್ಡ್ನ ಜೆಡಿಎಸ್ ಅಭ್ಯರ್ಥಿ ಚಂದ್ರಪ್ಪ 115, ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ. ಸತೀಶ್ಕುಮಾರ್ 105 ಪಡೆದಿದ್ದು, 10 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಈ ವಾರ್ಡ್ನಲ್ಲಿರುವುದೇ 78 ಮತಗಳು. ಚಲಾವಣೆಯಾಗಿದ್ದು 58 ಮಾತ್ರ. ವಿಜೇತ ಅಭ್ಯರ್ಥಿಯ ಮತಗಳ ಅಂತರ 8. ಇದು ಶಿಕಾರಿಪುರದ 18ನೇ ವಾರ್ಡ್ನ ವಿಶೇಷ. ಇಲ್ಲಿ ಸ್ಪರ್ಧಿಸಿದ್ದ ಸಾಲೇಶ್ವರ ನಿಜಲಿಂಗಪ್ಪ ಅವರು 32 ಮತ ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಸ್. ಸುರೇಶ್ 24 ಮತ ಪಡೆದರು. ಮತಗಳ ಅಂತರ 8 ಮಾತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

