ಸೊರಬದಲ್ಲಿಯೂ ಅತಂತ್ರ
ಸೊರಬ: ಪಪಂ ಚುನಾವಣೆ ಫಲಿತಾಂಶದಿಂದ ಮುಂದಿನ ಆಡಳಿತ ಅತಂತ್ರ ಸ್ಥಿತಿ ನಿಚ್ಚಳವಾಗಿದೆ. 11ವಾರ್ಡ್‌ಗಳಲ್ಲಿ ತಲಾ ಮೂರು ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಹಂಚಿಕೊಂಡಿದ್ದರೆ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.
ಸತತ 5 ನೇ ಬಾರಿ ಆಯ್ಕೆಗೊಂಡಿರುವ ಪಕ್ಷೇತರ ಅಭ್ಯರ್ಥಿ ಡಿ.ಆರ್.ಶ್ರೀಧರ್ ಈ ಬಾರಿ ಅವರ ಸೊಸೆಯನ್ನು ಪಕ್ಷೇತರವಾಗಿ ಚುನಾವಣೆ ಕಣದಲ್ಲಿ ಗೆಲ್ಲಿಸಿದ್ದಾರೆ. ಹಿಂದಿನ ಪಪಂ ಉಪಾಧ್ಯಕ್ಷ ಪ್ರಶಾಂತ ಮೇಸ್ತ್ರಿ, ಸದಸ್ಯ ಮಹೇಶ್ ಗೌಳಿ ಪುನರಾಯ್ಕೆಯಾಗಿದ್ದಾರೆ. ಡಿ.ಬಿ. ಜುಲೇಖಾ, ಮೆಹಬೂಬಿ, ಮಂಚಿ ಹನುಮಂತಪ್ಪ ಹಿಂದಿನ ಅವಧಿಯ ಪೂರ್ವದಲ್ಲಿ ಸದಸ್ಯರಾಗಿದ್ದರು.
ಗೆದ್ದ ಅಭ್ಯರ್ಥಿಗಳು
ಕಾಂಗ್ರೆಸ್‌ನ ಮಂಚಿ ಹನುಮಂತಪ್ಪ 7 ನೇ ವಾರ್ಡ್, ಸುಜಾಯತ್ 10ನೇ ವಾರ್ಡ್, ಎಂ.ಡಿ. ಉಮೇಶ್ 4 ನೇ ವಾರ್ಡಿನಿಂದ ಜಯಗಳಿಸಿದ್ದರೆ, ಜೆಡಿಎಸ್‌ನ ಮೆಹೂಬೂಬಿ 3ನೇ ವಾರ್ಡ್, ಪ್ರಶಾಂತ್ ಮೇಸ್ತ್ರಿ 5ನೇ ವಾರ್ಡ್, ಡಿ.ಬಿ. ಜುಲೇಖಾ 9ನೇ ವಾರ್ಡ್, ಕೆಜೆಪಿಯ ಕೆ. ರತ್ನಮ್ಮ 1ನೇ ವಾರ್ಡ್, ಮಹೇಶಗೌಳಿ 6 ನೇ ವಾರ್ಡ್, ಕೆ. ನೇತ್ರಾವತಿ 11 ನೇ ವಾರ್ಡ್, ಪಕ್ಷೇತರ ಅಭ್ಯರ್ಥಿಗಳಾದ ಡಿ.ಆರ್. ಶ್ರೀಧರ್, ಶ್ರೀರಂಜನಿ 2 ಮತ್ತು 8 ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಪ್ರತಿ ಸ್ಪರ್ಧಿಗಳಾಗಿ 8 ವಾರ್ಡಿನಲ್ಲಿ ಕಾಂಗ್ರೆಸ್‌ನವರು ಇದ್ದರೆ, 2 ವಾರ್ಡಿನಲ್ಲಿ ಜೆಡಿಎಸ್ ಹಾಗೂ 1 ಪಕ್ಷೇತರರಿದ್ದಾರೆ.
ಅಭಿನಂದನೆ: ತಮ್ಮ ಪಕ್ಷಗಳ ಅಭ್ಯರ್ಥಿಗಳು ಜಯಸಾಧಿಸಿದ್ದಕ್ಕೆ ಮಾಜಿ ಶಾಸಕರಾದ ಹಾಲಪ್ಪ, ಕುಮಾರ್ ಬಂಗಾರಪ್ಪ, ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಮಧುಬಂಗಾರಪ್ಪ ಅಭಿನಂದನೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

