ಶಿವಮೊಗ್ಗ

ವ್ಯಕ್ತಿ ಆತ್ಮಹತ್ಯೆ

Published On :

ಶಿವಮೊಗ್ಗ: ನಗರದ ಖಾಸಗಿ ಲಾಡ್ಜ್ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಸುರೇಶ್ (51) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕಳೆದ ಒಂದು ವಾರಗಳ ಹಿಂದೆ ಇಲ್ಲಿನ ಖಾಸಗಿ ಲಾಡ್ಜ್ನಲ್ಲಿ ರೂಂ ಪಡೆದಿದ್ದರು. ಇವರು ಮಾರ್ಚ್ 21ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ಗೆ ನನ್ನ ವಿಳಾಸ ಬರೆಯುವ ವೇಳೆ ತಪ್ಪು ಮಾಹಿತಿ ನೀಡಿದ್ದು, ನಾನು ಬೆಂಗಳೂರಿನ ಗಾರ್ಮೆಂಟ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಜೀವನದಲ್ಲಿ ಜೀಗುಪ್ಸೆಯಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಸಾವಿನ ಪತ್ರ ಬರೆದಿದ್ದಾರೆ. ಇವರು ಲಾಡ್ಜ್ನ ಲೆಡ್ಜರ್ನಲ್ಲಿ ತುಮಕೂರಿನ ವ್ಯಕ್ತಿ ಎಂದು ನಮೂದಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಇತರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಕಲು ರಶೀದಿ ಸೃಷ್ಟಿಸಿ ವಂಚನೆ
ಶಿವಮೊಗ್ಗ:
ಟ್ರಸ್ಟ್ಮೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಲಕ್ಷಾಂತರ ರುಪಾಯಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಮಾನಸಧಾರ ಟ್ರಸ್ಟ್ನ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದಲ್ಲಿನ ಲೆಕ್ಕ ಪರಿಶೋಧಕಿ ಸವಿತಾ ಎಂಬುವರ ವಿರುದ್ಧ ದೂರು ನೀಡಲಾಗಿದೆ.
ಕೇಂದ್ರದಲ್ಲಿ ರೋಗಿಗಳ ವಾರಸುದಾರರಿಂದ ನಗದು ಹಣ ಸ್ವೀಕರಿಸಿ, ಅಸಲು ರಶೀದಿಗೆ ಅವರ ಕೊಟ್ಟ ಹಣದ ಮೊತ್ತ ದಾಖಲಿಸಿ, ನಕಲು ರಶೀದಿಗಳ ಮೇಲೆ ಕಡಿಮೆ ಮೊತ್ತ ದಾಖಲಿಸಿ ಮತ್ತು ರಶೀದಿಗಳನ್ನು ತಿದ್ದುಪಡಿ ಮಾಡಿ ಟ್ರಸ್ಟ್ಗೆ ಸುಮಾರು 9,95, 069 ಲಕ್ಷ ವಂಚಿಸಿದ್ದಾರೆ.
ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.