ಸವಕಲು ನಾಣ್ಯದಂತಾದ ಸತ್ಯ
ಕ.ಪ್ರ ವಾರ್ತೆ, ಶಿರಾಳಕೊಪ್ಪ, ಮಾ.22
ಜಗತ್ತಿನಲ್ಲಿ ಧರ್ಮ, ಅಧರ್ಮ, ಸತ್ಯ, ಪ್ರೀತಿ ಎಲ್ಲವೂ ಸವಕಲು ನಾಣ್ಯವಾದಂತಾಗಿದೆ. ಅಧರ್ಮವನ್ನು ಧರ್ಮಎಂದು ತಿಳಿದು ವರ್ತಿಸುವುದನ್ನು ನೋಡಿದರೆ ನೋವಾಗುತ್ತದೆ ಎಂದು ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ ಆತಂಕ ವ್ಯಕ್ತಪಡಿಸಿದರು.
ಶಿರಾಳಕೊಪ್ಪ ಹತ್ತಿರದ ತೊಗರ್ಸಿಯಲ್ಲಿ ಚನ್ನಮಲ್ಲಿಕಾರ್ಜುನ ಜಾತ್ರೆ ಅಂಗವಾಗಿ ನಡೆದ 40ನೇ ವರ್ಷದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮನಸ್ಸಿನ ಶಾಂತಿಗಾಗಿ ಚಡಪಡಿಸುತ್ತಿರುವ ನಮಗೆ ಅಕ್ಕಮಹಾದೇವಿ ರೀತಿ ಮಾನವತೆಯಿಂದ ಬಾಳಿದಾಗ ಶಾಂತಿ ದೊರೆಯುತ್ತದೆ ಎಂದರು.
ತೊಗರ್ಸಿ ಮಳೇಮಠದ ಮಹಂತದೇಶೀಕೇಂದ್ರದ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಹಿರೇಮಾಗಡಿಯ ಶಿವಮೂರ್ತಿಮುರಘರಾಜೇಂದ್ರ ಸ್ವಾಮಿಗಳು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತೊಗರ್ಸಿ ಪಂಚವಣ್ಣಿಗೆ ಮಠದ ಚೆನ್ನವೀರ ದೇಶೀಕೇಂದ್ರ ಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವದಿಸಿದರು. ವೇದಿಕೆ ಮೇಲೆ ಕಡೇನಂದೀಹಳ್ಳಿ ಸ್ವಾಮಿಗಳು, ಗಣ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

