ಶಿವಮೊಗ್ಗ

ಅಕ್ರಮ ಸೀರೆ ಬಂಡಲ್ ವಶ

Published On :

ಹೊಸನಗರ: ಪಕ್ಷವೊಂದರ ವತಿಯಿಂದ ಸೀರೆ ಹಂಚಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಸೀರೆ ಬಂಡಲ್‌ನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಕೋಟೆತಾರಿಗದಲ್ಲಿ ನಡೆದಿದೆ.
 ಸಾರ್ವಜನಿಕ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಂದರ್ಭದಲ್ಲಿ ಕೋಟೆತಾರಿಗದ ಮನೆಯೊಂದ ಪಕ್ಕದಲ್ಲಿ ಬಂಡಲ್‌ಮೊಂದು ಬಿದ್ದಿದ್ದು, ಅದನ್ನು ರಿಪ್ಪನಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಹಸೀಲ್ದಾರ್ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಆರೋಪ
ಕೋಟೆತಾರಿಗದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಿಂದ ಕೆಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿಯೊಬ್ಬರು ಸೀರೆ ಹಂಚುವ ಕೆಲಸ ಮಾಡಿದ್ದು, ಕೋಟೆತಾರಿಗದಲ್ಲಿ ಕೂಡ ಈ ಕೃತ್ಯವನ್ನು ಅವರೇ ಎಸಗಿರುವ ಸಂಶಯವಿದೆ ಎಂದು ಕಾಂಗ್ರೆಸ್ ಪ್ರಮುಖರಾದ ಜ್ಯೋತಿ ಚಂದ್ರಮೌಳಿ, ಕುನ್ನೂರು ಮಂಜಪ್ಪ, ಬಿ.ಜಿ. ಚಂದ್ರಮೌಳಿ, ಹಾಲಗದ್ದೆ ಉಮೇಶ ಆರೋಪಿಸಿದ್ದಾರೆ.
 ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಲ್ಲದೆ ಚುನಾವಣಾ ಅಕ್ರಮ ಎಗ್ಗಿಲ್ಲದೆ ನಡೆಯುತ್ತಿದ್ದು ಚುನಾವಣ ಆಯೋಗ ಕಟ್ಟೆಚ್ಚರ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
31ಕ್ಕೆ ಕುಟುಂಬ ಸಮ್ಮಿಲನ
ಜೋಗ್‌ಫಾಲ್ಸ್: 31ರಂದು ಕಾರ್ಗಲ್‌ನ ಶ್ರೀ ರಾಮಮಂದಿರದಲ್ಲಿ ವಿಪ್ರರ ಕುಟುಂಬ ಸಮ್ಮಿಲನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
     31ರಂದು ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಸುಮಾರು 115ಕ್ಕೂ ಹೆಚ್ಚು ಕುಟುಂಬಗಳು ಭಾಗವಹಿಸಲಿವೆ.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್.ಕೆ. ಹೆಗಡೆ ವಹಿಸಿಕೊಳ್ಳಲಿದ್ದು, ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ 25 ವರ್ಷ ದಾಂಪತ್ಯ ಜೀವನ  ಪೂರೈಸಿದ ದಂಪತಿಗಳನ್ನು ಅಂದು ಸನ್ಮಾನಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.