ಶಿವಮೊಗ್ಗ

ಇಂದು ಬೀಜ ದಿನಾಚರಣೆ

Published On :

ಶಿವಮೊಗ್ಗ: ಸಹ್ಯಾದ್ರಿವಿಜ್ಞಾನ ಕಾಲೇಜಿನ ಬೀಜ ತಂತ್ರಜ್ಞಾನ ಮತ್ತು ಸಸ್ಯ ಶಾಸ್ತ್ರ ವಿಭಾಗವು ಮಾ.28ರಂದು ಬೀಜ ದಿನಾಚರಣೆ ಹಮ್ಮಿಕೊಂಡಿದೆ.
ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಎಂ. ಕೃಷ್ಣಪ್ಪ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಪ್ರಗತಿಪರ ರೈತ ಅಗಳಿ ಎ.ಪಿ. ನಾಗೇಶ ರಾವ್, ಉಪ ಕುಲಸಚಿವ ಡಾ. ಎಚ್.ಎನ್. ರಮೇಶ್ ಬಾಬು ಪಾಲ್ಗೊಳ್ಳುವರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಕುಂತಲ ಜಿ. ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಲೇಜಿನ ಬೀಜ ತಂತ್ರಜ್ಞಾನ ಪ್ರಯೋಗಾಲಯದಲ್ಲಿ ಬೆಳಿಗ್ಗೆ 11.30ರಿಂದ 5.30ರ ವರೆಗೆ ಬೀಜ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇಲ್ಲಿ 200 ಬಗೆಯ ನಮೂನೆಯ ಬೀಜಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಮುಖ್ಯವಾಗಿ ವಿವಿಧ ಧಾನ್ಯಗಳು, ಕಾಳುಗಳು, ಎಣ್ಣೆಕಾಳುಗಳು, ಮರದ ಬೀಜಗಳು, ಕಳೆ ಬೀಜಗಳೊಂದಿಗೆ ವಿವಿಧ ರೀತಿಯ ಬೀಜಗಳ ಮೊಳಕೆ ಮಾದರಿಗಳು ಹಾಗೂ ರೋಗದ ಮಾದರಿ ಪ್ರದರ್ಶಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೂ ಆಹ್ವಾನ ನೀಡಲಾಗಿದೆ. ವಿಶೇಷವಾಗಿ ರೈತ ಬಾಂಧವರು ಹಾಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಡಾ. ಎನ್. ರಾಜೇಶ್ವರಿ ತಿಳಿಸಿದ್ದಾರೆ.
ಆರ್‌ಎಂಎಂ ರಾಜಿನಾಮೆ ನೀಡಲಿ
ಹೊಸನಗರ: ಸ್ತ್ರೀಶಕ್ತಿ ಸಂಘಗಳಿಗೆ ಇಲ್ಲದ ಆಮಿಷ ನೀಡುತ್ತಾ ಶಾಸಕರಾಗುವ ಕನಸು ಕಾಣುತ್ತಿರುವ ಆರ್.ಎಂ. ಮಂಜುನಾಥಗೌಡ ಅಪೆಕ್ಸ್ ಅಧ್ಯಕ್ಷಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಹಾಲಗದ್ದೆ ಉಮೇಶ ಸವಾಲು ಹಾಕಿದ್ದಾರೆ.
ಸ್ತ್ರೀಶಕ್ತಿ ಸ್ವಸಹಾಯ ಸಂಘದ ಕಾರ್ಯಕರ್ತರನ್ನು ದಿಕ್ಕು ತಪ್ಪಿಸಿ ಪ್ರಜ್ಞಾವಂತ ತೀರ್ಥಹಳ್ಳಿ ಕ್ಷೇತ್ರದಲ್ಲಿ ಅನೈತಿಕ ರಾಜಕೀಯ ಮಾಡುತ್ತಾ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.