ಬೂತ್ ಮಟ್ಟದ ಸಮಿತಿ ರಚನೆ
ಸೊರಬ: ಮಾಜಿ ಸಚಿವ ಹಾಲಪ್ಪ ನೇತೃತ್ವದಲ್ಲಿ ಕೆಜೆಪಿ ಪಕ್ಷದ ವಿವಿಧ ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಪಕ್ಷ ಸೇರ್ಪಡೆ ಆನವಟ್ಟಿಯಲ್ಲಿ ನಡೆಯಿತು.
ಹಂಚಿ, ಗಿಣಿವಾಲ, ಭಾರಂಗಿ, ಚಿಕ್ಕ ಇಡಗೋಡು, ಕಮನವಳ್ಳಿ, ಎಣ್ಣೆಕೊಪ್ಪ, ತಲ್ಲೂರು, ಆನವಟ್ಟಿ ಗ್ರಾಮಗಳಲ್ಲಿ ಮುಖಂಡರೊಂದಿಗೆ ಚರ್ಚೆ ನಡೆಸಿ, ಬೂತ್ ಸಮಿತಿ ರಚಿಸಿದರು. ಆಯ್ಕೆಯಾದ ಅಧ್ಯಕ್ಷರಿಗೆ ಕೆಜೆಪಿ ಬಾವುಟ ನೀಡಿದರು. ಆಯ್ಕೆಗೊಂಡ ಸಮಿತಿ ಸದಸ್ಯರು ಪ್ರತಿ ಮನೆಗಳಿಗೆ ತೆರಳಿ ಪಕ್ಷದ ಕರಪತ್ರಗಳೊಂದಿಗೆ, ತಾಲ್ಲೂಕು ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ, ಮತ ಯಾಚಿಸಬೇಕು ಎಂದು ಸೂಚಿಸಿದರು.
ಸೇರ್ಪಡೆ: ಆನವಟ್ಟಿ ಹೋಬಳಿಯ ನೂರ್ ಅಹ್ಮದ್ ಜಂಗಳೆ, ಸಿಖಂದರ್ ಭಾಷ, ಶಾಂತಮ್ಮ, ಬಾಬುಸಾಬ್, ಮೆಹಬೂಬ್ ಆಲಿ, ಹಸೀನಾಬಾನು, ಕುಸುಮಮ್ಮ, ಚೆನ್ನಮ್ಮ, ಇಮಾಮ್ಸಾಬ್, ಮಂಜುನಾಥ್, ಅಬಿದ್ ಪಟೇಲ್, ಆನವಟ್ಟಿ ಆಜಾದ್ ನಗರದ ಇನ್ನೂ ಅನೇಕರು ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಆನವಟ್ಟಿ ಜಿಪಂ ಕ್ಷೇತ್ರದ ಅಧ್ಯಕ್ಷ ಬಿ.ಬಸವರಾಜಪ್ಪ, ಮಲ್ಲಾಪುರ ಬಸವಂತಪ್ಪ, ಬಿ. ಮಲ್ಲಿಕಾರ್ಜುನ, ಶಿವಪ್ಪ ವಕೀಲ್, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಅಜೀಂಸಾಬ್, ನಿರಂಜನ್, ಮಂಜಪ್ಪ ಮರದರ, ರಾಜು ಬಡಿಗೇರಾ, ಬಸವನಗೌಡ, ಲೋಕನಗೌಡ, ಉಮೇಶ್ಗೌಡ, ಉಮೇಶ್ ಉಡುಗಣಿ, ಭೀಮಪ್ಪ ಮೂಡಿ, ಭಾಷಾಸಾಬ್, ಮೆಹಬೂಬ್ ಅಲಿ, ನಂದೀಶ್, ಕೃಷ್ಣಮೂರ್ತಿ, ಕೆರೆಯಪ್ಪ, ಸುಗುಣಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

