ಶಿವಮೊಗ್ಗ

ಸಾಗರ: ಶೇ. 74 ರಷ್ಟು ಮತದಾನ

Published On :

ಕನ್ನಡಪ್ರಭ ವಾರ್ತೆ, ಸಾಗರ, ಮೇ 5
 ಎರಡು ಸಣ್ಣ ಪುಟ್ಟ ಗಲಾಟೆ, ಹಲ್ಲೆ ಪ್ರಕರಣ ಹೊರತುಪಡಿಸಿ ಉಳಿದಂತೆ ಕ್ಷೇತ್ರದಲ್ಲಿ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿತ್ತು. ಕ್ಷೇತ್ರದಲ್ಲಿ ಶೇ. 74ರಷ್ಟು ಮತದಾನವಾಗಿದೆ.
 ತಾಲ್ಲೂಕಿನ ಸೂರನಗದ್ದೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿ(ಎಸ್)ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದು ಪೊಲೀಸರು ಮದ್ಯಪ್ರವೇಶದಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಪಟ್ಟಣದ ಗಾಂಧಿನಗರದ ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ.ಕೃಷ್ಣಮೂತರ್, ಪಕ್ಷದ ಕಾರ್ಯಕರ್ತರಾದ ಮೋಹನ, ಸುಬ್ರಹ್ಮಣ್ಯ, ಪ್ರೇಮಕುಮಾರ್ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಮೊಕದ್ದಮೆ ದಾಖಲಾಗಿದೆ. ಇದೊಂದು ಪೂರ್ವನಿಯೋಜಿತ ಹಲ್ಲೆ ಎಂದು ಪಕ್ಷ ಹೇಳಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಗುರುತು ಚೀಟಿ ಗೊಂದಲ: ಕೆಲವು ಮತಗಟ್ಟೆಗಳಲ್ಲಿ ಮತದಾರರು ಚುನಾವಣಾ ಆಯೋಗ ನೀಡಿದ ಓಟರ್ಸ್ ಸ್ಲಿಪ್ ಹೊಂದಿದ್ದರೂ ಗುರುತಿನ ಚೀಟಿ ತಂದಿಲ್ಲ ಎನ್ನುವ ಕಾರಣಕ್ಕೆ ಮತಹಾಕಲು ಬಿಡದ ಪ್ರಕರಣಗಳು ನಡೆದಿದೆ. ಆದರೆ ಈ ಬಗ್ಗೆ ಮತದಾರರು, ಚುನಾವಣಾ ಆಯೋಗದ ಸಿಬ್ಬಂದಿಗಳು ತಿಳಿಹೇಳಿದ ಮೇಲೆ ಮತದಾನ ಮಾಡಲು ಅವಕಾಶ ನೀಡಲಾಯಿತು ಎನ್ನಲಾಗಿದೆ.
 ಕಾಂಗ್ರೆಸ್ ಗೆಲವು ಖಚಿತ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮತಹಾಕಿದ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಕ್ಷೇತ್ರದಲ್ಲಿ ಕಾಂಗ್ರೆಸ್ಪ್‌ಕ್ಷದ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು. ಮತದಾರರು ದಾಯಾದಿಗಳಾದ ಕೆಜೆಪಿ ಹಾಗೂ ಬಿಜೆಪಿ ಮೇಲೆ ತೀವ್ರ ಅಸಮಾಧಾನಗೊಂಡಿರುವುದರಿಂದ ಇದು ಕಾಂಗ್ರೆಸ್ಪ್‌ಕ್ಷಕ್ಕೆ ಗೆಲುವು ತಂದುಕೊಡಲಿದೆ ಎಂದರು.
ಯಡಿಯೂರಪ್ಪ ಕಾರ್ಯಕ್ರಮದಿಂದ ಗೆಲುವು  ತಾಲ್ಲೂಕಿನ ಕಲ್ಮನೆ ಗ್ರಾಮದ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಮತದಾನ ಮಾಡಿದ ಕೆಜೆಪಿ ಅಭ್ಯರ್ಥಿ  ಬಿ.ಆರ್.ಜಯಂತ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರ ಕಾರ್ಯಕ್ರಮಗಳು ಜನರ ಮನಸ್ಸನ್ನು ಗೆದ್ದಿದ್ದು ಇದು ತಮಗೆ ಗೆಲುವು ತಂದುಕೊಡಲಿದೆ ಎಂದರು.
ಜಯಂತ್ ವಿಶ್ವಾಸ: ಭ್ರಷ್ಟಾಚಾರದ ವಿರುದ್ಧ ಮತದಾರರೊಂದಿಗೆ ಚರ್ಚೆ ನಡೆಸಿದ್ದು ಇದಕ್ಕೆ ಜನರು ಸ್ಪಂದಿಸಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ತಾವು ಭ್ರಷ್ಟರಲ್ಲ ಎನ್ನುವ ವಿಶ್ವಾಸ ಮತದಾರರಲ್ಲಿದೆ. ಇದಕ್ಕಾಗಿ ತಮಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಅನಾಮಧೇಯ ಕರಪತ್ರದ ಬಗ್ಗೆ ಕೇಳಿದಾಗ ಇದು ತಮ್ಮ ಪಕ್ಷದ ಪಾತ್ರ ಇಲ್ಲ. ಇಂತಹ ಕೀಳಿಮಟ್ಟದ ಪ್ರಚಾರ ತಂತ್ರವನ್ನು ತಾವು ಮಾಡುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ ಎಂದು ಹೇಳಿದರು.
ವಾತಾವರಣ ಬದಲಾಗಿದೆ: ಬೇಳೂರು ಗ್ರಾಮದಲ್ಲಿ ಪತ್ನಿಯೊಂದಿಗೆ ಮತಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ತಾವು ನಾಮಪತ್ರ ಸಲ್ಲಿಸಿದ ನಂತರ ಕ್ಷೇತ್ರದಲ್ಲಿ ವಾತಾವರಣ ಬದಲಾಗಿದ್ದು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಇಡೀ ಜಿಲ್ಲೆಯಲ್ಲಿ ಕೂಡ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದರು.
 ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತಚಲಾಯಿಸಿದ ಬಿಜೆಪಿ ಅಭ್ಯರ್ಥಿ ಶರಾವತಿ ಸಿ.ರಾವ್ ಬಿಜೆಪಿಗೆ ಬಹುತೇಕ ಮಹಿಳಾ ಮತದಾರರು ಬೆಂಬಲಿಸಿದ್ದು ಗೆಲುವು ಖಚಿತ ಎಂದು ಹೇಳಿದರು.
 ಮತದಾನ ಪ್ರಕ್ರಿಯೆ ಬೆಳಿಗ್ಗೆ ಕೊಂಚ ನಿಧಾನಗತಿಯಲ್ಲಿ ಸಾಗಿದರೆ ಸಂಜೆಯಾಗುತ್ತಿದ್ದಂತೆ ಬಿರುಸುಗೊಂಡಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತ ಚಲಾವಣೆಯಾಗಿರುವ ಬಗ್ಗೆ ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.