ಶಿವಮೊಗ್ಗ

ಮಧುಗೆ ಅನುಕಂಪದ ಪೂರ್ಣ ಲಾಭ

Published On :

ಸೊರಬ: ಅಮ್ಮನ ಅರಿಕೆಯಿಂದ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ವಿಜಯ ಸಾಧಿಸಿದ್ದಾರೆ.
2008ರ ಚುನಾವಣೆಯಲ್ಲಿ ತಮ್ಮ ಸಹೋದರ ಕುಮಾರ್ ಬಂಗಾರಪ್ಪನವರ ವಿರುದ್ಧ ಪೈಪೋಟಿಗೆ ಬಿದ್ದಿದ್ದ ಮಧು ಬಂಗಾರಪ್ಪ, ಹರತಾಳು ಹಾಲಪ್ಪನವರ ಗೆಲವಿಗೆ ಕಾರಣವಾಗಿದ್ದರು. ಆದರೆ ಈ ಚುನಾವಣೆಯಲ್ಲಿ ಹಿಂದಿನ ತಪ್ಪುಗಳನ್ನೆಲ್ಲಾ ಸರಿಪಡಿಸಿಕೊಂಡು ರಾಜಕೀಯ ತಂತ್ರಗಾರಿಕೆ ನಡೆಸಿ ಗೆಲವು ಪಡೆದುಕೊಂಡಿದ್ದಾರೆ.
21,225 ಮತಗಳ ಅಂತರದಿಂದ ಮಧು ಬಂಗಾರಪ್ಪನವರು ಕೆಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರನ್ನು ಸೋಲಿಸಿದರು. ಮತ್ತೊಬ್ಬ ಎದುರಾಳಿ ಸಹೋದರ ಕುಮಾರ್ ಬಂಗಾರಪ್ಪನವರು 33,176 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಮಧು ಬಂಗಾರಪ್ಪ ಗೆಲವಿಗೆ ಅನುಕಂಪವೂ ಕೆಲಸ ಮಾಡಿದೆ. ಎರಡು ಬಾರಿಯ ಸೋಲುಕೂಡ ಅನುಕಂಪಕ್ಕೆ ಕಾರಣ. ಅದೇ ರೀತಿ ಪ್ರತಿಪಕ್ಷದ ಇಬ್ಬರು ಅಭ್ಯರ್ಥಿಗಳ ಅತಿಯಾದ ಆತ್ಮವಿಶ್ವಾಸವೂ ಜೆಡಿಎಸ್ ಗೆಲವು ಸುಲಭವಾಗಲು ಕಾರಣವಾಯಿತು.
ಕುಟುಂಬ ಪ್ರಚಾರ: ಇದೆಲ್ಲಕ್ಕಿಂತ ಪ್ರಮುಖ ಕಾರಣವಾಗಿದ್ದು, ಬಂಗಾರಪ್ಪನವರ ಪತ್ನಿ ಶಕುಂತಲಾ ಹಾಗೂ ಕುಟುಂಬದವರು. ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಿದ ಶಕುಂತಲಮ್ಮ, ಮಧು ಗೆಲುವು ಬಂಗಾರಪ್ಪನವರ ಕೊನೆಯ  ಆಸೆ. ಅದನ್ನು ನೆರವೇರಿಸಿಕೊಡಿ ಎಂದು ಮತದಾರರಲ್ಲಿ ಅರಿಕೆ ಮಾಡಿಕೊಂಡಿದ್ದು ಸಫಲವಾಯಿತೆನ್ನಬಹುದು.
ಸವಾಲುಗಳು: ಬಗರ್ ಹುಕುಂ ಸಾಗುವಳಿದಾರರು ಅತಂತ್ರದಲ್ಲಿದ್ದಾರೆ. ಅದೇ ರೀತಿ ದಂಡಾವತಿಗೆ ಪರ್ಯಾಯವಾಗಿ ಆನವಟ್ಟಿ, ಜಡೆ ಭಾಗಕ್ಕೆ ನೀರಾವರಿ ಕಲ್ಪಿಸುವುದು, ಮಾಜಿ ಶಾಸಕರ ಕಲ್ಪನೆಯ ಬಾಕಿ ಉಳಿದ ಕಾಮಗಾರಿ ಅನುಷ್ಠಾನ ಆಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.