12ರಂದು ವಿಶೇಷ ಸಮಾರಂಭ
ಶೃಂಗೇರಿ: ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ನೆಮ್ಮಾರಿನಲ್ಲಿರುವ ಸೂಫಿ ಸಂತ ಹಜರತ್ ದಿಲಾವರುಷ ಔಲಿಯಾ ದರ್ಗಾದಲ್ಲಿ 12ರಂದು ವಿಶೇಷ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆಯಿಂದ ಉರೂಸ್ ಅಂಗವಾಗಿ ವಿವಿಧ ಧಾರ್ಮಿಕ ಕ್ರಿಯಾ ವಿಧಿವಿಧಾನಗಳು ನೆರವೇರಲಿದೆ. ಮದ್ಯಾಹ್ನ 2 ಗಂಟೆಯಿಂದ ದಾವತ್-ಇ-ಇಸ್ಲಾಮಿ ತಂಡದವರಿಂದ ವಿಷೇ, ಮತಪ್ರಸಂಗ, ಉರೂಸ್ ಆಚರಣೆ, ನಡೆದು ಬಂದ ದಾರಿ ಕುರಿತು ವಿಶೇಷ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸಂಜೆ 5 ಗಂಟೆಗೆ ದರ್ಗಾದ ಮುಂಭಾಗದಿಂದ ಆಕರ್ಷಕ ಝರಬ್ ಕಾರ್ಯಕ್ರಮದೊಂದಿಗೆ ಸಂದಲ್ ಮೆರವಣಿಗೆ ಹೊರಟು ಮುಖ್ಯ ಬೀದಿಯಲ್ಲಿ ಸಾಗಲಿದೆ. ನಂತರ ಸಂಜೆ 7 ಗಂಟೆಗೆ ದರ್ಗಾದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ನಂತರ ಶಿವಮೊಗ್ಗದ ಮುಭಾಲಿಗಿನ್ ಸುನ್ನಿ ದಾವತೆ ಇಸ್ಲಾಮಿ ತಂಡದವರಿಂದ ನಾಥ್, ಬಯಾನಾಥ್, ತರ್ಬಿಯತ್ ಇಸ್ತಿಮಾ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
14ರಿಂದ ಉತ್ಸವ
ಕೊಪ್ಪ: ಇಲ್ಲಿನ ಬಾಳಗಡಿಯ ಹೊಸಮ್ಮ ಮತ್ತು ಪರಿವಾರ ದೇವತೆಗಳ ಸಮಿತಿ ವತಿಯಿಂದ ಅಬ್ಬಿಗದ್ದೆ ಹೊಸಮ್ಮ ಮತ್ತು ಪರಿವಾರ ದೇವರ ವಾರ್ಷಿಕೋತ್ಸವನ್ನು ಮೇ 14 ರಿಂದ 16ರ ವರಗೆ ಹಮ್ಮಿಕೊಳ್ಳಲಾಗಿದೆ. ಮೇ 14 ರಂದು ಬೆಳಗ್ಗೆ 10 ಗಂಟೆಗೆ ಗಣಪತಿ ಪೂಜೆ ದುರ್ಗಾಹೋಮ ಹಾಗೂ ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ, ಮೇ15 ರ ಬೆಳಗ್ಗೆ 8 ಕೆಂಡದಾರ್ಚನೆ ನಂತರ 9ಗಂಟೆಗೆ ಮಾರಿ ಹರಕೆ ಹಾಗೂ ಪೂಜೆ, ಮೇ 16 ರಂದು ಸಂಪ್ರೋಕ್ಷಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತರು ಸೇರಬೇಕಾಗಿ ಸಮಿತಿ ಮುಖ್ಯಸ್ಥರು ವಿನಂತಿಸಿದ್ದಾರೆ.
ನಾಳೆ ಕೆಂಪು ಹೂವು ನಾಟಕ
ಶಿವಮೊಗ್ಗ: ಎಂ.ಪಿ. ಪ್ರಕಾಶ್ ಆರ್ಟ್ಸ್ ಫೌಂಡೇಶನ್ ಮೇ 11ರಂದು ಕುವೆಂಪು ರಂಗಮಂದಿರದಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏರ್ಪಡಿಸಿದೆ.
ಎಂ.ಪಿ. ಪ್ರಕಾಶ್ ಆರ್ಟ್ಸ್ ಫೌಂಡೇಶನ್ ಸಂಸ್ಥೆ ಕಳೆದ 7 ವರ್ಷಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸಾಮಾಜಿಕ, ಸಂಸ್ಕೃತಿ, ಸದಭಿರುಚಿಯುಳ್ಳ ನಾಟಕ, ಸಂಗೀತ ಕಚೇರಿಗಳನ್ನು ನೀಡುತ್ತಾ ಬರುತ್ತಿದೆ. ಈ ಹಿನ್ನೆಯಲ್ಲಿ 11ರಂದು ಸಂಜೆ 6.30ಕ್ಕೆ ಹಶ್ಮಿರವರ ಕೆಂಪು ಹೂವು ಕಥೆಯನ್ನು ಆಧರಿಸಿ ಪ್ರಸ್ತುತ ಪಡಿಸಿದ, ಕೆ.ಎಂ. ಶಿವಪ್ರಕಾಶ್ ಅವರು ನಿರ್ದೇಶನದ ನಾಟಕದ ಮೂಲಕ ಸಮಾರೋಪ ಸಮಾರಂಭ ಆಚರಿಸಲಿದೆ.
ಅಧಿಕ ಅಂಕಗಳಿಸಲು ಏಕಾಗ್ರತೆ ಅಗತ್ಯ
ಶಿವಮೊಗ್ಗ: ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧಾತ್ಮಕತೆ ಏರ್ಪಟ್ಟಿದ್ದು, ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಅಧಿಕ ಶ್ರಮ ವಹಿಸಬೇಕಿದೆ ಎಂದು ಪೇಸೆಟ್ ಕಾಲೇಜಿನ ಉಪನ್ಯಾಸಕ ಎಚ್.ಆರ್. ಶಂಕರನಾರಾಯಣ ಶಾಸ್ತ್ರೀ ಹೇಳಿದರು.
ಪ್ರಗತಿ ಗ್ರಾಮೀಣ ಬ್ಯಾಂಕ್ ಮತ್ತು ನಮ್ಮ ಕನಸಿನ ಶಿವಮೊಗ್ಗ ಗುರುವಾರ ನಗರದಲ್ಲಿ ಆಯೋಜಿಸಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು, ಪರಿಶ್ರಮದಿಂದ ಮಾತ್ರ ಪ್ರತಿಭೆ ಹೊರಬರಲು ಸಾಧ್ಯ. ವಿದ್ಯಾರ್ಥಿಗಳಿಗೆ ಶಿಸ್ತು, ಏಕಾಗ್ರತೆ, ಛಲ ಮುಖ್ಯವಾಗಿದ್ದು, ಮುಂದಿನ ಗುರಿಗಳ ಬಗ್ಗೆ ದೀರ್ಘವಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪ್ರಮುಖ ಘಟ್ಟ. ಇಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆಯುವುದು ಕಷ್ಟದ ಮಾತು. ಆದರೆ, ಇಲ್ಲಿನ ವಿದ್ಯಾರ್ಥಿಗಳು ಅಂತಹ ಕಷ್ಟಗಳನ್ನು ಮೀರಿ 610, 625 ಅಂಕ ಪಡೆದಿರುವುದು ಸಂತೋಷದ ಸಂಗತಿ ಎಂದರು.
ಎಸ್ಎಸ್ಎಲ್ಎಲ್ಸಿ ನಂತರ ಮುಂದೇನ್ನೂ ಎಂಬ ಪ್ರಶ್ನೆ ಸಾಮಾನ್ಯವಾಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಕಾಡುತ್ತದೆ. ಆದರೆ, ವಿದ್ಯಾರ್ಥಿಗಳು ಯಾರ ಒತ್ತಡಗಳಿಗೂ ಒಳಗಾಗದೇ ನೀವು ಇಷ್ಟ ಪಡುವ ವಿಷಯವನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

