ಶಿವಮೊಗ್ಗ

ನಾಳೆ ಕೆಂಪು ಹೂವು ನಾಟಕ

Published On :

ಶಿವಮೊಗ್ಗ: ಎಂ.ಪಿ. ಪ್ರಕಾಶ್ ಆರ್ಟ್ಸ್ ಫೌಂಡೇಶನ್ ಮೇ 11ರಂದು ಕುವೆಂಪು ರಂಗಮಂದಿರದಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏರ್ಪಡಿಸಿದೆ.
ಎಂ.ಪಿ. ಪ್ರಕಾಶ್ ಆರ್ಟ್ಸ್ ಫೌಂಡೇಶನ್ ಸಂಸ್ಥೆ ಕಳೆದ 7 ವರ್ಷಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸಾಮಾಜಿಕ, ಸಂಸ್ಕೃತಿ, ಸದಭಿರುಚಿಯುಳ್ಳ ನಾಟಕ, ಸಂಗೀತ ಕಚೇರಿಗಳನ್ನು ನೀಡುತ್ತಾ ಬರುತ್ತಿದೆ. ಈ ಹಿನ್ನೆಯಲ್ಲಿ 11ರಂದು ಸಂಜೆ 6.30ಕ್ಕೆ ಹಶ್ಮಿರವರ ಕೆಂಪು ಹೂವು ಕಥೆಯನ್ನು ಆಧರಿಸಿ ಪ್ರಸ್ತುತ ಪಡಿಸಿದ, ಕೆ.ಎಂ. ಶಿವಪ್ರಕಾಶ್ ಅವರು ನಿರ್ದೇಶನದ ನಾಟಕದ ಮೂಲಕ ಸಮಾರೋಪ ಸಮಾರಂಭ ಆಚರಿಸಲಿದೆ.
   ಜಾಗತೀಕರಣ, ಅಭಿವೃದ್ಧಿ ಎಂದು ಹೇಳುತ್ತಾ ಮನುಷ್ಯನು ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಅವನ ಮಿತಿಮೀರಿದ ಆಸೆಗಳಿಂದಾಗಿ ಮನುಷ್ಯನ ಬದುಕು ಉಸಿರುಕಟ್ಟಿಸುವ ವಾತಾವರಣದಿಂದ ಕೂಡಿದೆ. ಕಥೆಯಲ್ಲಿ ಬರುವ ಕೆಂಪು ಹೂವಿನ ಸಮಸ್ಯೆಯೊಂದಿಗೆ ಜಾಗತೀಕರಣದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವೇ ಈ ನಾಟಕ. ಆದರಿಂದ ನಾಟಕದ ಎಲ್ಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಬೇಕು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ವಿದ್ಯುತ್‌ವ್ಯತ್ಯಯ
ಶಿವಮೊಗ್ಗ: ಆಲ್ಕೋಳ ವಿದ್ಯುತ್ ಕೇಂದ್ರದಲ್ಲಿನ ಎ.ಎಫ್-8 ಫೀಡರ್‌ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ತುರ್ತು ಮಾರ್ಗದ ನಿರ್ವಾಹಣೆ ಕಾರ್ಯ ಇರುವುದರಿಂದ ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ನಗರದ ಕಾಶಿಪುರ, ಕಲ್ಲಹಳ್ಳಿ ಮತ್ತು ವಿನೋಬನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ವ್ಯತ್ಯಯವಾಗಲಿದೆ. ಆದರಿಂದ ಇಲ್ಲಿನ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ವಿಶೇಷ ಸ್ಫರ್ಧೆ
ಶಿವಮೊಗ್ಗ: ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಮೇ 15ರಿಂದ 21ರವರೆಗೆ ಶ್ರೀ ಶಂಕರ ಜಯಂತಿ ಪ್ರಯುಕ್ತ ವಿಶೇಷ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.15ರಂದು ಮಾತೆಯರಿಗೆ ಮಧ್ಯಾಹ್ನ ರಂಗೋಲಿ ಸ್ಫರ್ಧೆ, 16ರಂದು ಭಜಗೋವಿಂದ ಸ್ತೋತ್ರ ಕಂಠಪಾಠ, 17ರಂದು ರುದ್ರನಮಕ ಚಮಕ ಕಂಠಪಾಠ, 18ರಂದು ಪ್ರಬಂಧ (ಶಂಕರರ ಜೀವನ ಕುರಿತು), 19ರಂದು ಭಗವದ್ಗೀತಾ (15ನೇ ಅಧ್ಯಾಯ), 20ರಂದು ಶಂಕರರ ಬಗ್ಗೆ ಉಪನ್ಯಾಸ, 21ರಂದು ವೇದ ಅಂತ್ಯಾಕ್ಷರಿ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಅ.ಪ. ರಾಮಭಟ್ಟ ತಿಳಿಸಿದ್ದಾರೆ. ವಿವರಗಳಿಗಾಗಿ-08182-276021.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ  ರಾಜಿನಾಮೆ
ಶಿವಮೊಗ್ಗ: ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ಸೋಲಿನ ಹೊಣೆ ಹೊತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಕಳೆದ ಎಂಟು ವರ್ಷದಿಂದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷಕ್ಕೆ ಮರುಹುಟ್ಟು ನೀಡಿದ್ದೇನೆ ಎಂಬ ನಂಬಿಕೆ ನನಗಿದೆ. ಈ ಬಾರಿ ಜಿಲ್ಲೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಮೂರು ಸ್ಥಾನಗಳನ್ನು ಪಕ್ಷ ಗಳಿಸಿದೆ. ಆದರೆ ತಮಗೆ ಆದ ವೈಯಕ್ತಿಕ ಸೋಲಿನಿಂದಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಕಳುಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಎಂಟು ವರ್ಷಗಳ ಕಾಲ ಸಹಕರಿಸಿದ ಮುಖಂಡರು ಕಾರ್ಯಕರ್ತರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.