ಬಾಲಕ ಸಾವು: 6 ಲಾರಿಗೆ ಬೆಂಕಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 23
ತೀರ್ಥಹಳ್ಳಿ ರಸ್ತೆಯಲ್ಲಿ ಮರಳು ಲಾರಿಗಳ ಓಡಾಟದ ಅಬ್ಬರಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆರು ಲಾರಿಗಳಿಗೆ ಬೆಂಕಿ ಇಟ್ಟು, 15ಕ್ಕೂ ಹೆಚ್ಚು ಲಾರಿಗಳಿಗೆ ಹಾನಿ ಮಾಡಿರುವ ಪ್ರಸಂಗ ಗುರುವಾರ ರಾತ್ರಿ ಗಾಜನೂರು ಬಳಿ ನಡೆದಿದೆ.
ತೀರ್ಥಹಳ್ಳಿ ರಸ್ತೆಯಲ್ಲಿ ಅತಿ ವೇಗದಲ್ಲಿ ಚಲಿಸುತ್ತಿದ್ದ ಮರಳು ಲಾರಿಯೊಂದು, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿ ಸಾಗುತ್ತಿದ್ದ ಓರ್ವ ಮೃತಪಟ್ಟಿದ್ದಾನೆ, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ರಿಜ್ವಾನ್ (13) ಮೃತಪಟ್ಟವರಾಗಿದ್ದು, ಇವರ ತಂದೆ ಹಮೀದ್ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿದೆ.
ಈ ನಡುವೆ ಅಪಘಾತ ಮಾಡಿದ ಲಾರಿಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.
ಜೊತೆಗೆ 15ಕ್ಕೂ ಹೆಚ್ಚು ಲಾರಿಗಳನ್ನು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಲಾರಿಗಳು ಧ್ವಂಸ: ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ, ಆರಕ್ಕೂ ಅಧಿಕ ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಕೆಲ ಲಾರಿಗಳನ್ನ ಧ್ವಂಸಗೊಳಿಸಿದ್ದಾರೆ. ಒಟ್ಟಾರೆ ಮಂಡಗದ್ದೆಯಿಂದ ಶಿವಮೊಗ್ಗ ಕಡೆ ಸಾಗುತ್ತಿದ್ದ ಹದಿನೆಂಟು ಲಾರಿಗಳು ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದವು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಆಕ್ರೋಶ ಭರಿತ ಗ್ರಾಮಸ್ಥರ ಮನವೊಲಿಸುವಲ್ಲಿ ಸಫಲರಾದರು. ಹಾಗೆಯೇ ಎರಡು ತಾಸಿನಿಂದ ಅಸ್ತವ್ಯಸ್ತವಾಗಿದ್ದ ತೀರ್ಥಹಳ್ಳಿ- ಶಿವಮೊಗ್ಗ ರಸ್ತೆ ಸಂಚಾರವನ್ನು ಸರಿಪಡಿಸಿದರು.
ಪರಿಸ್ಥಿತಿ ಗಂಭೀರ: ಗಾಜನೂರಿನಲ್ಲಿ ವಾರಕ್ಕೆ ಇಂತಹದೊಂದು ಅಪಘಾತ ಆಗುತ್ತಲೆ ಇರುತ್ತದೆ, ಸಾಲದಕ್ಕೆ ಇದುವರೆಗೂ ನಡೆದ ಬಹುತೇಕ ಅಪಘಾತಗಳು ಮರಳು ಲಾರಿಯಿಂದಲೆ ಆಗಿವೆ. ಮೇಲಾಗಿ ಅಪಘಾತದಂತಹ ಘಟನೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೂ, ಲಾರಿ ಮಾಲೀಕರ ನಿರ್ಲಕ್ಷ್ಯದಿಂದ ಪರಿಹಾರ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪ.
ಕನಿಷ್ಟ ಮಾನವೀಯತೆ ತೋರಿಸದ ಲಾರಿ ಚಾಲಕರು ಅಪಘಾತ ಸ್ಥಳದಲ್ಲಿ ನಿಲ್ಲದೆ ಬೇಕಾಬಿಟ್ಟಿಯಾಗಿ ಗಾಡಿಗಳನ್ನ ಓಡಿಸುತ್ತಾರೆ. ಇದರಿಂದ ಮೊದಲೇ ಬೇಸತ್ತಿರುವ ಗ್ರಾಮಸ್ಥರು, ಈ ಘಟನೆಯಿಂದ ಮತ್ತಷ್ಟು ಆಕ್ರೊಶಗೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಯಾರ ಮಾತನ್ನೂ ಕೇಳದ ಲಾರಿ ಚಾಲಕರಿಗೆ ಬುದ್ಧಿ ಕಲಿಸುವ ಉದ್ದೇಶದಿಂದಲೇ ಲಾರಿಗಳ ಡಿಸೇಲಲ್ಟ್ಯಾಂಕ್ಗೆ ಬೆಂಕಿ ಇಟ್ಟು ಸಿಟ್ಟು ತೋರಿಸಿಕೊಂಡಿದ್ದಾರೆ. ಮತ್ತೊಂದೆಡೆ ಲಾರಿಗಳ ಸಂಚಾರವನ್ನು ನಿಷೇಧಿಸುವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವ ಗ್ರಾಮಸ್ಥರು ಇಲ್ಲವಾದಲ್ಲಿ ಯಾವ ಮರಳು ಲಾರಿಯನ್ನು ಸಹ ಬಿಡೋದಿಲ್ಲ ಎಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಸದ್ಯ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಎಸ್ಪಿ ಬಸವರಾಜ್, ಲಾರಿ ಸಂಚಾರ ನಿಷೇಧಕ್ಕೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಸದ್ಯಕ್ಕಂತು ಮರಳು ಲಾರಿಗಳ ಇಂತಹ ಅವಾಂತರಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

