ಕಸ ವಿಲೇವಾರಿಗೆ ಆಗ್ರಹ
ಸೊರಬ:ಪಪಂ ಚುನಾವಣೆ ನಡೆದು ಕೆಲವು ತಿಂಗಳಾದರೂ ಆಡಳಿತ ಮಂಡಳಿ ಘೋಷಣೆ ಆಗದಿರುವ ಹಿನ್ನೆಲೆಯಲ್ಲಿ ಪಟ್ಟಣ ಜೀವನ ಹೈರಾಣಾಗಿದೆ.
ಒಂದೆಡೆ ಕುಡಿಯುವ ನೀರಿಗೆ ಪರದಾಟ, ಇನ್ನೊಂದೆಡೆ ಕಸದ ವಿವೇವಾರಿ ಆಗದೆ ಕೊಳೆತು ನಾರುತ್ತಿರುವ ಚರಂಡಿ ದುರ್ನಾತದ ಸೇವನೆಯೊಂದಿಗೆ, ಸಾಂಕ್ರಮಿಕ ರೋಗದ ಭೀತಿ. ಸಾಲದೆಂಬಂತೆ ಪಟ್ಟಣದ ಕೆಲವೆಡೆ ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಡೆಂಘೀ, ಕಾಲರಾ ಬಗ್ಗೆ ಆತಂಕಪಡುವಂತಾಗಿದೆ.
ಸಾಂಕ್ರಮಿಕ ರೋಗ ಹರಡುವ ಭೀತಿಯಿಂದ ನಿದ್ರೆ ಇಲ್ಲದಂತಾಗಿದೆ. ಕೂಡಲೇ ತ್ಯಾಜ್ಯ ತೆಗೆದು ನೆಮ್ಮದಿ ಒದಗಿಸಿಕೊಡಿ ಎಂದು ಪಪಂ ಸಾರ್ವಜನಿಕರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಸಮರ್ಪಕ ಬಾಕ್ಸ್ ಚರಂಡಿ: ಪಟ್ಟಣದ ಮುಖ್ಯರಸ್ತೆ ಹಾಗೂ 10 ನೇ ವಾರ್ಡ್ನಲ್ಲಿ ಬಹಳಷ್ಟು ಮಾಂಸಹಾರಿ, ಸಸ್ಯಹಾರಿ ಹೋಟೆಲ್ಗಳಿದ್ದು, ಇಲ್ಲಿನ ನಿರುಪಯುಕ್ತ ವಸ್ತುಗಳು ನೇರ ಚಿಕ್ಕಪೇಟೆ ಹಳೇಪೋಸ್ಟ್ ಆಫೀಸ್ ಬಳಿಯ ಚರಂಡಿಗೆ ಸೇರುತ್ತಿರುತ್ತಿದೆ. ಕಳೆದ ಸಾಲಿನಲ್ಲಿ ಅಸಮರ್ಪಕ ಬಾಕ್ಸ್ ಚರಂಡಿ ನಿರ್ಮಾಣದಿಂದಾಗಿ ಅಲ್ಲಿ ಕೊಳಚೆಗಟ್ಟಿ ದುರ್ನಾತ ಬೀರುತ್ತಿದೆ. ಪಪಂ ಆರೋಗ್ಯಾಧಿಕಾರಿಗಳು ಕೂಡ ಇತ್ತ ತಲೆಹಾಕಿಲ್ಲ, ಗಟ್ಟಿಯಾಗಿ ಕೇಳಿದರೆ ಚರಂಡಿ ವ್ಯವಸ್ಥೆ ಪೂರ್ಣಗೊಳ್ಳಲಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದಿರುವ ಅಲ್ಲಿನ ನಿವಾಸಿಗಳು ಬೇಸರಿಸಿದ್ದಾರೆ.
ದುರ್ವಾಸನೆ: ಈಚೆಗೆ ಇಲ್ಲಿನ ಕುಡಿಯುವ ನೀರಿನ ನಲ್ಲಿಯಲ್ಲಿಯೂ ದುರ್ವಾಸನೆ ಕಾಣಿಸಿಕೊಳ್ಳುತ್ತಿದೆ, ಸ್ನಾನ ಮಾಡಿದ ಬಳಿಕ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತಿದೆ, ಜನಪ್ರತಿನಿಧಿಗಳು ತಮಗೂ, ಪಟ್ಟಣದ ಸ್ವಚ್ಛತೆಗೂ ಏನೂ ಸಂಬಂಧವೆ ಇಲ್ಲ ಎನ್ನುವಂತೆ ನಿರುಮ್ಮಳರಾಗಿದ್ದಾರೆ ಎಂದು ಆಕ್ಷೇಪಿಸಿರುವ ಅವರು, ಕೂಡಲೆ ಸ್ವಚ್ಚತೆಗೆ ನಿಗಾವಹಿಸದೆ ಇದ್ದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

