ಶಿವಮೊಗ್ಗ

10ರಂದು ಪೈಕಾ ಕ್ರೀಡಾಕೂಟ

Published On :

ಸಾಗರ: ಇಲ್ಲಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ 2013- 14ನೇ ಸಾಲಿನ ಕ್ರೀಡಾ ಔರ್ ಖೇಲ್ ಅಭಿಯಾನ್(ಪೈಕಾ) ಕ್ರೀಡಾಕೂಟವನ್ನು 16 ವರ್ಷ ವಯೋವುತಿಯೊಳಗಿನ ಬಾಲಕ ಹಾಗೂ ಬಾಲಕಿಯರಿಗಾಗಿ ನ. 10ರಂದು ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಬಾಲಕ ಬಾಲಕಿಯರು ಆ ದಿನ ಬೆಳಗ್ಗೆ 9ರೊಳಗೆ ನೆಹರೂ ಮೈದಾನದಲ್ಲಿ ಹಾಜರಿರತಕ್ಕದ್ದು. ಅಥ್ಲೆಟಿಕ್ಸ್ ಬಾಲಕರ ವಿಭಾಗದಲ್ಲಿ ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಡಿಸ್ಕಸ್ ಥ್ರೋ, ರನ್ನಿಂಗ್ ರೇಸ್ ಹಾಗೂ ರಿಲೆ ನಡೆಯಲಿದೆ.
ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದಲ್ಲಿ ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಡಿಸ್ಕಸ್ ಥ್ರೋ, ರನ್ನಿಂಗ್ ರೇಸ್ ಹಾಗೂ ರಿಲೆ ನಡೆಯಲಿದೆ. ಗುಂಪು ಆಟಗಳ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಖೋಖೋ, ಕಬಡ್ಡಿ, ವಾಲಿಬಾಲ್, ಹ್ಯಾಂಡ್ಬಾಲ್ ನಡೆಯಲಿದೆ ಎಂದು ಪ್ರಭಾರಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಚ್.ಜಿ. ಸುಬ್ರಹ್ಮಣ್ಯ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭುವನೇಶ್ವರಿ ಅದ್ಧೂರಿ ಮೆರವಣಿಗೆ
ಭದ್ರಾವತಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಬೆಳಗ್ಗೆ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಿದ್ದ ಧ್ವಜಾಜಾರೋಹಣ, ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಹುತ್ತಾ ಬಸ್ ನಿಲ್ದಾಣದಿಂದ ಕನ್ನಡ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಸಿತು.
ಬಿ.ಎಚ್. ರಸ್ತೆ, ಡಾ. ರಾಜ್ಕುಮಾರ್ ರಸ್ತೆ, ಕೋರ್ಟ್ ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ, ಸ್ತಬ್ಧ ಚಿತ್ರ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಾಡಿನ ಮಹಾಪುರುಷರ ವೇಷ- ಭೂಷಣ ಧರಿಸಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ತಹಸೀಲ್ದಾರ್ ಸಿದ್ದಮಲ್ಲಪ್ಪ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು ಶಾಲಾಮಕ್ಕಳು, ಶಿಕ್ಷಕ, ಶಿಕ್ಷಕಿಯರ ಭಾಗವಹಿಸಿದ್ದರು.
ವಕೀಲರ ಸಂಘದಿಂದ: ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಸದಸ್ಯರು ಕನ್ನಡ ರಾಜ್ಯೋತ್ಸವ ಆಚರಿಸಿದರು. ಸಂಘದ ಕಾರ್ಯದರ್ಶಿ ಬಿ.ಜಿ. ಬಸವರಾಜ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ಜಡ್ಜ್ ಜ್ಯೋತಿಶ್ರೀ, ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಿರೀಶ್ ಭಟ್ ಸೇರಿದಂತೆ ಸಂಘದ ಸದಸ್ಯರು ಸಿಬ್ಬಂದಿ ಉಪಸ್ಥಿತರಿದ್ದರು.
ನಾಳೆ ಗ್ರಾಮೀಣ ವಾಲಿಬಾಲ್ ಪಂದ್ಯಾವಳಿ
ಸೊರಬ: ತಾಲೂಕು ಕೋಣನಮನೆ ಗ್ರಾಮದಲ್ಲಿ ನ.5ರ ಮಂಗಳವಾರ ಜಟ್ಟೇಶ್ವರ ಕನ್ನಡಪರ ಯುವಕರ ವಾಲಿಬಾಲ್ ಸಂಘ ಮತ್ತು ಗ್ರಾಮದ ವಿವಿಧ ಸಂಘ, ಸಂಸ್ಥೆ, ಗ್ರಾಮಸ್ಥರು 19ನೇ ವರ್ಷದ ಅಂತರ್ ತಾಲೂಕು ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಿದ್ದಾರೆ.
ಪಂದ್ಯಾವಳಿ ಉದ್ಘಾಟನೆ ಅಂದು ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್, ತಾಪಂ ಸದಸ್ಯೆ ವನಜಾಕ್ಷಿ, ಗ್ರಾಪಂ ಸದಸ್ಯ ಕೆ.ಆರ್. ಸತ್ಯನಾರಾಯಣ ಮೊದಲಾದವರು ಪಾಲ್ಗೊಳ್ಳುತ್ತಾರೆ.
ಬಾಡದಬೈಲು ನಂದೀಶ್ವರ ಶಿವಾಚಾರ್ಯರು ಧ್ವಜಾರೋಹಣ, ಬೆಂಗಳೂರು ಬಿಎಂಟಿಸಿ ತಾಂತ್ರಿಕ ವಿಭಾಗದ ಸಿ.ಕೆ. ಸಂತೋಷ್ಕುಮಾರ್ ಪಾರಿತೋಷಕ ಅನಾವರಣ ನಡೆಸಲಿದ್ದಾರೆ. ಇದೇ ವೇಳೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇತಿಹಾಸ ತಜ್ಞ ಶ್ರೀಪಾದ ಬಿಚ್ಚುಗತ್ತಿ ಅವರಿಗೆ ಗೌರವ ಸನ್ಮಾನ ಇರಿಸಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಸತೀಶ್ಗೌಡ ಮೊ. 9741831244, ಕೆ.ಇ. ಮಂಜುನಾಥ್ ಮೊ. 9535304200 ಅವರನ್ನು ಸಂಪರ್ಕಿಸಲು ಕೋರಿದ್ದಾರೆ.
ಜೆರಾಕ್ಸ್ ಅಂಗಡಿ ಮಾಲೀಕರ ಸಭೆ
ಶಿವಮೊಗ್ಗ: ನ. 5ರಂದು ಸಂಜೆ 5 ಗಂಟೆಗೆ ನಗರದ ಮಥುರಾ ಪ್ಯಾರಡೈಸ್ನಲ್ಲಿ ಜೆರಾಕ್ಸ್ ಅಂಗಡಿ ಮಾಲಿಕರ ಸಭೆ ಕರೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಜೆರಾಕ್ಸ್ ಪೇಪರ್ ಬೆಲೆ, ವಿದ್ಯುತ್ ವೆಚ್ಚ ಇನ್ನಿತರ ಬೆಲೆಗಳು ಏರಿಕೆಯಾಗಿರುತ್ತದೆ. ಆದ್ದರಿಂದ ಜೆರಾಕ್ಸ್ ವ್ಯವಹಾರ ನಡೆಸುವುದು ತುಂಬಾ ಕಷ್ಟದಾಯಕವಾಗಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಚರ್ಚಿಸುವುದಕ್ಕಾಗಿ ನಗರದ ಎಲ್ಲಾ ಜೆರಾಕ್ಸ್ ಅಂಗಡಿ ಮಾಲೀಕರ ಸಭೆಯನ್ನು ಕರೆಯಲಾಗಿದೆ ಎಂದು ಕಾರ್ಯದರ್ಶಿ ಮಂಜಪ್ಪ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ- 99458 91816.
ನಂಜೇಗೌಡರಿಗೆ ಬೀಳ್ಕೊಡುಗೆ
ಶಿವಮೊಗ್ಗ: ಪೊಲೀಸ್ ಇಲಾಖೆಯ ರಾಜ್ಯ ಗುಪ್ತ ವಾರ್ತೆಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ  ಬಿ.ಕೆ.ನಂಜೇಗೌಡ ಅವರನ್ನು ರಾಜ್ಯ ಗುಪ್ತವಾರ್ತೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
 ನಂಜೇಗೌಡ ಅವರು 1979ನೇ ಸಾಲಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2007 ರಲ್ಲಿ ಡಿವೈಎಸ್ಪಿಯಾಗಿ ಬಡ್ತಿ ಪಡೆದು ರಾಜ್ಯ ಗುಪ್ತವಾರ್ತೆಯಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ದಯಾಳ್ ಹಾಗೂ ಗುಪ್ತ ವಾರ್ತೆಯ ಸಿಬ್ಬಂದಿ ಇದ್ದರು.
ಸಂಘಕ್ಕೆ ಆಯ್ಕೆ
ಸೊರಬ: ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಗೌರವಾಧ್ಯಕ್ಷರಾಗಿ ಭೈರಪ್ಪ ಎನ್.ಕೆ. ನಿಸರಾಣಿ, ಅಧ್ಯಕ್ಷರಾಗಿ ತುಕಾರಾಂ ಕೆ.ಎಚ್. ಕಾತುವಳ್ಳಿ, ಉಪಾಧ್ಯಕ್ಷರಾಗಿ ಸೋಮಪ್ಪ ಹಳೆ ಸೊರಬ, ವಿ.ಡಿ. ಜಡೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಎಚ್.ಕೆ. ಹೆಚ್ಚೆ, ಸಹ ಕಾರ್ಯದರ್ಶಿಯಾಗಿ ಕುಮಾರ ತವನಂದಿ, ಖಜಾಂಚಿಯಾಗಿ ಜಗದೀಶ್ ಕೆ.ಎನ್. ಬಿಳುವಾಣಿ, ಸಂಘಟನಾ ಕಾರ್ಯದರ್ಶಿಗಳಾಗಿ ಜಯಾ ಉಳವಿ, ಆನಂದ ಜಿ.ನ್ಯಾರ್ಸಿ, ಸಂಜಯ ಕುಬಟೂರು, ಹಾಲಪ್ಪ ಹುರಳಿ ಅವರು ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ವೇಳೆ ಗ್ರಂಥಾಲಯ ಮೇಲ್ವಿಚಾರಕ ಸಂಘದ ಜಿಲ್ಲಾಧ್ಯಕ್ಷ ಸಿ.ಕೆ.ಬಲೀಂದ್ರಪ್ಪ, ಉಪಾಧ್ಯಕ್ಷೆ ಪ್ರತಿಭಾ ಬೆನೂರು ಇದ್ದರು.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ತಾಲೂಕು ಸಮಿತಿಗೆ ನೂತನವಾಗಿ ಪದಾಧಿಕಾರಿಗಳನು ಆಯ್ಕೆಮಾಡಲಾಗಿದೆ. ಪಕ್ಷದ ತಾಲೂಕು ಅಧ್ಯಕ್ಷ ಎನ್.ಜಿ. ರುದ್ರೇಶಪ್ಪಗೌಡರ ಆದೇಶದ ಮೇರೆಗೆ ನೇಮಕಾತಿಗಳನು ಮಾಡಲಾಗಿದೆ. ತಾಲೂಕು ಮಾಧ್ಯಮ ಪ್ರಮುಖ್ ಆಗಿ ಹೊಳಲೂರಿನ ಜಿ.ಎಸ್.ಮಂಜುನಾಥ್ ಪಟೇಲ್ ಹಾಗೂ  ಹೊಳಲೂರು ಶಕ್ತಿಕೇಂದ್ರಕ್ಕೆ ಕೆ.ಎಸ್. ದೇವರಾಜ್, ಹೊಸೂಡಿ ಶಕ್ತಿ ಕೇಂದ್ರಕ್ಕೆ ಜೆ. ಶಿವನಂಜಪ್ಪ, ಕುಂಸಿ ಶಕ್ತಿಕೇಂದ್ರಕ್ಕೆ ಎಚ್.ಕೆ. ಸಿದ್ಧಪ್ಪ, ಹಾರನಹಳ್ಳಿ ಶಕ್ತಿಕೇಂದ್ರಕ್ಕೆ ಯೋಗೇಂದ್ರಾಚಾರಿ, ಗಾಜನೂರು ಶಕ್ತಿಕೇಂದ್ರಕ್ಕೆ ನೂರ್ ಅಹಮ್ಮದ್ ಅವರನು ಆಯ್ಕೆಮಾಡಲಾಗಿದೆ.
ಮೋರ್ಚಾ ಸದಸ್ಯರು: ಯುವಮೋರ್ಚಾ ಪಿ. ವೇದಾಂತ, ಮಹಿಳಾಮೋರ್ಚಾ ಭಾರತೀ ಸುರೇಶ್, ಎಸ್.ಟಿ. ಮೋರ್ಚಾ ರಾಮರಾವ್ ಕೋರೆ, ರೈತಮೋರ್ಚಾ ಎಚ್. ಈಶ್ವರ್, ಹಿಂದುಳಿದ ವರ್ಗಗಳ ಮೋರ್ಚಾ ಕೆ.ಎಸ್. ದೇವರಾಜ್, ಎಸ್.ಸಿ. ಮೋರ್ಚಾ ಅಕ್ಕಮಹಾದೇವಿ. ತಾಲೂಕು ಸಮಿತಿಯ ವಿಶೇಷ ಆಹ್ವಾನಿತರಾಗಿ ಎಸ್.ಪಿ. ಪಾಟೀಲ್ (ಕೊಮ್ಮನಾಳ್), ಎಚ್.ಆರ್. ಹಾಲೇಶಪ್ಪ (ಹಾರನಹಳ್ಳಿ), ಈಶ್ವರಪ್ಪ (ಯಲವಟ್ಟಿ), ಎಸ್.ಎಸ್. ಗೋಪಾಲ್(ಸಂತೆಕಡೂರು), ಪರಮೇಶ್ವರಪ್ಪ (ಕುಸ್ಕೂರು), ಅನಂತಪದ್ಮನಾಭ ಕಿಣಿ(ಸಿರಿಗೆರೆ).
ತಾಲೂಕು ಸಮಿತಿ ಸದಸ್ಯರು: ಎಚ್. ಪರಮೇಶ್ವರಪ್ಪ (ಮಡಿಕೆಚೀಲೂರು), ಪಾಲಾಕ್ಷಪ್ಪ (ಬಿಕ್ಕೋನಹಳ್ಳಿ), ಹನುಮಂತಪ್ಪ (ಹರಮಗಟ್ಟ), ಶಾಂತಕುಮಾರಿ ಅಣ್ಣಪ್ಪ(ಬನಿಕೆರೆ), ರಾಮಚಂದ್ರಪಟಗಾರ (ದೇವಕಾತಿಕೊಪ್ಪ), ಮಂಜುಳಾಯೋಗೀಶ್ (ಹಾರನಹಳ್ಳಿ), ಶ್ರೀಧರ್ (ರಟ್ಟೆಹಳ್ಳಿ), ನಾಗೇಂದ್ರ (ರಾಮನಗರ), ಜಯಮ್ಮ ಶಿವಪ್ಪ(ಗಾಟಿತವರು), ಭೈರೋಜಿ (ಗೌಳಿಗೆರೆ), ಅಕ್ಕಿಜೀನಪ್ಪ (ಕುಂಸಿ), ರಾಘವೇಂದ್ರ (ಚಿಕ್ಕಾದಾನಂದಿ), ದೀಪಾ ಹಾಲೇಶ್ (ನಿಧಿಗೆ), ಹುಚ್ಚಪ್ಪ (ಕಾಚಿನಕಟ್ಟೆ), ಶಾಂತಯ್ಯ (ಹೊಳೆಬೆಳಗಲು), ಬಸವಂತಪ್ಪ (ಮಾಚೇನಹಳ್ಳಿ), ಮೋಹನ್ಕುಮಾರ್ (ಮಳ್ಕೆರೆ), ಸುರೇಶ್ (ಗಾಜನೂರು), ಗೋಪಾಲ ಶೆಟ್ಟರು(ಉಂಬ್ಳೆಬೈಲು), ರಮೇಶ್ (ಶ್ರೀರಾಮನಗರ) ಇವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಮಗ್ರ ಪ್ರಶಸ್ತಿ
ಸಾಗರ: ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಈಚೆಗೆ ನಡೆದ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿದ್ದಾರೆ. ಕ್ರೀಡಾಕೂಟದಲ್ಲಿ ಸುವರ್ಣ 3 ಚಿನ, ಶಿಲ್ಪ 2 ಚಿನ, ಪಲ್ಲವಿ 1 ಚಿನ, 1ಬೆಳ್ಳಿ, ಸ್ವಾತಿ 1 ಬೆಳ್ಳಿ, 1 ಕಂಚು, ಲಯನ 1 ಬೆಳ್ಳಿ, ರಮ್ಯ 1 ಬೆಳ್ಳಿ, ಪ್ರೇಮ 1ಕಂಚು, ಸಂಗೀತ 1 ಕಂಚು ಹಾಗೂ ರಿಲೇಯ ಎರಡೂ ವಿಭಾಗದಲ್ಲೂ 2 ಚಿನದ ಪದಕ ಗಳಿಸಿ ಕೀರ್ತಿ ತಂದಿದ್ದಾರೆ.
ವಿಶೇಷ ಪೂಜೆ
ಶಿವಮೊಗ್ಗ: ಹೊಳೆಹೊನೂರು ಬಳಿ ಇರುವ ಶ್ರೀ ಕೂಡಲಿ ಕ್ಷೇತ್ರದಲ್ಲಿ ನ.4ರಂದು ಬೆಳಿಗ್ಗೆ ಶ್ರೀ ಶಾರದಾದೇವಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಶ್ರೀದೇವಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ ಏರ್ಪಡಿಸಲಾಗಿದೆ. ಶ್ರೀ ಸಚ್ಚಿದಾನಂದ ವಾಲಕೇಶ್ವರ ಭಾರತೀ ಸ್ವಾಮೀಜಿ ಮತ್ತು ಶ್ರೀ ವಿದ್ಯಾಭಿನವವಿದ್ಯಾರಣ್ಯ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಪ್ರಬಂಧ ಸ್ಪರ್ಧೆ
ಶಿವಮೊಗ್ಗ- ಶಂಕರ ಕಣ್ಣಿನ ಆಸ್ಪತ್ರೆ ಮಕ್ಕಳ ದಿನಾಚರಣೆ ಅಂಗವಾಗಿ ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಕ್ವಿಜಜ್ಸ್ಪರ್ಧೆಯನು ಏರ್ಪಡಿಸಿದೆ. ಪ್ರಬಂಧ ಬರೆದು ವಿದ್ಯಾರ್ಥಿಗಳು ಅಂಚೆ ಮೂಲಕ ಅಥವಾ ಖುದ್ದಾಗಿ ನ.10ರೊಳಗೆ ಶಂಕರ ಕಣ್ಣಿನ ಆಸ್ಪತ್ರೆ ಹರಕರೆ, ತೀರ್ಥಹಳ್ಳಿ ರಸ್ತೆ ಶಿವಮೊಗ್ಗ ಇಲ್ಲಿಗೆ ಕಳುಹಿಸಬೇಕು. ಇದರ ಫಲಿತಾಂಶವನು ನ.14ರಂದು ಪ್ರಕಟಿಸಲಾಗುವುದು. ವಿಜೇತ ವಿದ್ಯಾರ್ಥಿಗಳಿಗೆ 1ನೇ ಬಹುಮಾನ 2 ಸಾವಿರ ರುಪಾಯಿ, 2ನೇ ಬಹುಮಾನ 1 ಸಾವಿರ ರುಪಾಯಿ, 3ನೇ ಬಹುಮಾನ 500 ರುಪಾಯಿ ಹಾಗೂ 10 ಸಮಾಧಾನಕರ ಬಹುಮಾನ ವಿತರಿಸಲಾಗುವುದು. ವಿವರಗಳಿಗಾಗಿ- 08182-222099, 222100.
ಶೇ.10 ರಿಯಾಯಿತಿ
ಶಿವಮೊಗ್ಗ-  ನಗರದ ಬಿ.ಎಚ್. ರಸ್ತೆಯ ಮೈಲಾರೇಶ್ವರ ಸಂಕೀರ್ಣದಲ್ಲಿರುವ ದೇಸಿ ಸಂಸ್ಕೃತಿ ಮಳಿಗೆಯು ದೀಪಾವಳಿ ಹಬ್ಬದ ಪ್ರಯುಕ್ತ ಕೈಮಗ್ಗದ ಉತ್ಪನಗಳನು ಶೇ.10ರಷ್ಟು ರಿಯಾಯಿತಿ ದರದಲ್ಲಿ ನ.8ರವರೆಗೆ ಮಾರಾಟ ಹಮ್ಮಿಕೊಂಡಿದೆ. ಉತ್ತರ ಕರ್ನಾಟಕ ನೇಕಾರರು ನೇಯ್ದ ಶುದ್ಧ ಹತ್ತಿಯ ಅಂಗಿ, ಜುಬ್ಬ ಕೋಟು, ಟವೆಲ್, ಕಸೂತಿ ಸೀರೆ ಇತ್ಯಾದಿ ಕೈಮಗ್ಗದ ಉತ್ಪನಗಳು ದೊರೆಯಲಿವೆ. ವಿವರಗಳಿಗಾಗಿ- 9448780144.
ಅರ್ಜಿ ಆಹ್ವಾನ
ಶಿವಮೊಗ್ಗ-  ಸಂಕಟ ವಿಮೋಚನ ಶ್ರೀ ಶನೈಶ್:್ರಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ವಿಶ್ವಚೇತನ ಎಂಬ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸುವ ಉದ್ದೇಶಿಸಿದೆ. ಭಕ್ತಾಧಿಗಳು, ಲೇಖಕರುಗಳಿಂದ ಧಾರ್ಮಿಕ ವಿಭಾಗಕ್ಕೆ ಸಂಬಂಧಪಟ್ಟಂತೆ ಕಥೆಗಳು, ಕವನಗಳನು ಆಹ್ವಾನಿಸಿದೆ. ಅರ್ಜಿದಾರರು ನ.10ರೊಳಗೆ ಸಂಕಟ ವಿಮೋಚನ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನ, ನವುಲೆ ಇಲ್ಲಿಗೆ ಕಳುಹಿಸಬಹುದು ಎಂದು ಆಡಳಿತ ಮಂಡಳಿಯ ವ್ಯವಸ್ಥಾಪಕರು ತಿಳಿಸಿದ್ದಾರೆ. ವಿವರಗಳಿಗಾಗಿ- 9886198918.
ಸುಬ್ಬಣ್ಣ ಆಯ್ಕೆ
ಶಿವಮೊಗ್ಗ- ಶ್ರೀ ಸರ್ವಸಿದ್ದಿ ವಿನಾಯಕಸ್ವಾಮಿ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಡಿ.ಎಚ್. ಸುಬ್ರಹ್ಮಣ್ಯ (ಸುಬ್ಬಣ್ಣ) ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಸಿ. ಈಶ್ವರ ರಾವ್ಪ್ವಾರ್, ಎಸ್.ಎಲ್. ಶ್ರೀರಂಗರಾಜು ಮತ್ತು ಕೆ.ದೇವೇಂದ್ರಪ್ಪ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಹನುಮಂತಪ್ಪ, ಸಹ ಕಾರ್ಯದರ್ಶಿಯಾಗಿ ಎಂ. ಗಣೇಶ್, ಪಿ.ಸಿ. ಲಿಂಗರಾಜು ಮತ್ತು ಸತ್ಯನಾರಾಯಣ, ಖಜಾಂಚಿಯಾಗಿ ಎನ್. ಶ್ರೀಧರಮೂರ್ತಿ ಅವರನು ನೇಮಕ ಮಾಡಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.