ಬಣ್ಣದ ಕಾರಂಜಿ ಪುನಾರಂಭ
ಜೋಗ್ಫಾಲ್ಸ್: ಜಗದ್ವಿಖ್ಯಾತ ಜೋಗ ಜಲಪಾತವನ್ನು ವೀಕ್ಷಿಸುವುದರೊಂದಿಗೆ, ಪ್ರವಾಸಿಗರನ್ನು ಆಕರ್ಷಿಸಲು ಜೋಗ್ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಲೇಸರ್ ಕಾರಂಜಿ ಪ್ರತಿನಿತ್ಯ ಸಂಜೆ 7.30ರಿಂದ 8.00ರ ವರೆಗೆ ತನ್ನ ವೈಭವದ ಬೆರಗನ್ನು ಪ್ರೇಕ್ಷಕರಿಗೆ ವರ್ಣರಂಜಿತವಾಗಿ ನೀಡುತ್ತಿರುವುದು ಪ್ರವಾಸಿಗರಿಗೆ ಉತ್ತಮ ಆಕರ್ಷಣೀಯ ಮನರಂಜನೆಯಾಗಿದೆ. ವೃದ್ಧರಿಂದ ಚಿಕ್ಕ ಮಕ್ಕಳು ಸಹ ವರ್ಣರಂಜಿತ ಕಾರಂಜಿಯ ಹಾಡಿನೊಂದಿಗೆ ಕುಣಿದಾಡುತ್ತಿರುತ್ತಾರೆ. ಕಳೆದ ಸುಮಾರು 15 ದಿನಗಳಿಂದ ತಾಂತ್ರಿಕ ಅಡಚಣೆಯಿಂದ ಸ್ಥಗಿತಗೊಂಡಿದ್ದ ಕಾರಂಜಿಯಿಂದ ಪ್ರವಾಸಿಗರಿಗೆ ಇತ್ತ ಜಲಪಾತ ದರ್ಶನವಿಲ್ಲದೆ, ಅತ್ತ ಕಾರಂಜಿಯನ್ನು ಕಾಣದೆ ಬಂದ ದಾರಿಗೆ ಸುಂಕವಿಲ್ಲದಂತೆ ಬೇಸರದಿಂದ ಹಿಂತಿರುಗುತ್ತಿದ್ದರು.
ಇದನ್ನು ಅರಿತ ಜೋಗ್ ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಂಡು ಕಾರಂಜಿಯನ್ನು ಪುನಾ ಚಿಮ್ಮುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಾರಂಜಿಯ ಪರೀಕ್ಷಾರ್ಥ ಪ್ರದರ್ಶನವನ್ನು ಮಾಡಲಾಯಿತು. ಮೋಟಾರ್ ಸುಟ್ಟ ಹಿನ್ನಲೆಯಲ್ಲಿ ಹಾಗೂ ನೀರಿನ ಪೂರೈಕೆಯ ವ್ಯತ್ಯಯದಿಂದ ಸಂಗೀತ ಕಾರಂಜಿ ಸ್ಥಗಿತಗೊಂಡಿದ್ದು, ಈಗ ಇದನ್ನು ಸರಿಪಡಿಸಲಾಗಿದೆ. ಪ್ರತಿನಿತ್ಯ ಪ್ರವಾಸಿಗರು ವರ್ಣರಂಜಿತ ಕಾರಂಜಿಯನ್ನು ವೀಕ್ಷಿಸಿಬಹುದಾಗಿದೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

