ಶಿವಮೊಗ್ಗ

17ರಂದು ಕೂಡಲಿ ರಥೋತ್ಸವ

Published On :

ಶಿವಮೊಗ್ಗ: ಕೂಡಲಿ ಶ್ರೀ ಚಿಂತಾಮಣಿ ನರಸಿಂಹಸ್ವಾಮಿ ರಥೋತ್ಸವವು ನವೆಂಬರ್ 17ರಂದು ನಡೆಯಲಿದೆ. ಬೆಳಗ್ಗೆ 11ಕ್ಕೆ ರಥಾರೋಹಣ ನಡೆಯಲಿದ್ದು, ಕೂಡಲಿ ಕ್ಷೇತ್ರದಲ್ಲಿರುವ ದ್ವೈತ, ಅದ್ವೈತ ಮಠಗಳಲ್ಲಿರುವ ಶ್ರೀ ಗುರುವರ್ಯರು ಈ ಸಂದರ್ಭದಲ್ಲಿ ಹಾಜರಿರುವರು. ರಥೋತ್ಸವ ಅಂಗವಾಗ 16ರಂದು ಪುಣ್ಯಾಹವಾಚನ, ಧ್ವಜಾರೋಹಣ, ರಕ್ಷಾಬಂಧನ, ಯಾಗಶಾಲಾ ಪ್ರವೇಶ ನಡೆಯಲಿದೆ. 17ರಂದು ಮಹಾಪೂಜ, ರಥಾರೋಹಣ, ಅನ್ನಸಂತರ್ಪಣೆ ನಡೆಯುವುದು. 18ರಂದು ಅವಭೃಥೋತ್ಸವ, ಪೂರ್ಣಾಹುತಿ ನಡೆಯಲಿದೆ.
ಇಂದಿನಿಂದ ಲೇಸರ್ ಚಿಕಿತ್ಸೆ
ಶಿವಮೊಗ್ಗ: ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ವೆರಿಕೋಸ್ ವೈನ್ಸ್ಗೆ ಲೇಸರ್ ಚಿಕಿತ್ಸಾ ಶಿಬಿರವನ್ನು ನ.11ರಿಂದ ಆರಂಭಿಸಿದ್ದು ನ.20ರವರೆಗೆ ನಡೆಯಲಿದೆ. ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆಯುವ ಶಿಬಿರದಲ್ಲಿ ವೆರಿಕೋಸ್ ವೈನ್ಸ್ ಡೋಪ್ಲರ್ ತಪಾಸಣೆಗೆ ಶೇ.50ರಷ್ಟು ರಿಯಾಯಿತಿ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ನಿರ್ದೇಶಕ ಶ್ರೀನಿವಾಸ ಖರೆ ಕೋರಿದ್ದಾರೆ. ಮಾಹಿತಿಗೆ 08182 221566.
ಶಿವಾನುಭವ ಗೋಷ್ಠಿ
ಶಿವಮೊಗ್ಗ: 406ನೇ ಮಾಸಿಕ ಶಿವಾನುಭವ ಗೋಷ್ಠಿಯು ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ನ.17ರಂದು ಸಂಜೆ 6.30ಕ್ಕೆ ನಡೆಯಲಿದೆ. ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಷಡಾಕ್ಷರಿ ಉಪಸ್ಥಿತರಿರಲಿದ್ದು, ಸಮಕಾಲೀನ ಕನ್ನಡ ನಾಡು ಚಿಂತನೆ ವಿಚಾರವಾಗಿ ಡಾ. ರಾಜೇಂದ್ರ ಬುರಡಿಕಟ್ಟಿ ಉಪನ್ಯಾಸ ನೀಡುವರು. ಆರ್.ಪಿ. ದಿವ್ಯ ಕನ್ನಡ ಗೀತೆಗಳ ಗಾಯನ ನಡೆಸಿಕೊಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.