ಶಿವಮೊಗ್ಗ

ಚರಂಡಿ ಸ್ವಚ್ಛಗೊಳಿಸಿ

Published On :

ಶಿವಮೊಗ್ಗ ರಾಗಿಗುಡ್ಡ ಬಲಭಾಗದಲ್ಲಿ ನಿರಂತರವಾಗಿ ಚರಂಡಿ ಸ್ವಚ್ಛಗೊಳ್ಳುತ್ತಿಲ್ಲ. ಇದರಿಂದ ಸ್ವಚ್ಛತೆ ತಲೆದೋರಿದ್ದು, ರೋಗ- ರುಜಿನ ಹರಡುತ್ತಿದೆ. ರಾಗಿಗುಡ್ಡದ ಎಡ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ನಗರಸಭೆ ಪೌರ ಕಾರ್ಮಿಕರು ಬಲ ಭಾಗದ ಪ್ರದೇಶಕ್ಕೆ ಬರುವುದೇ ಇಲ್ಲ. ಹೀಗಾಗಿ ಚರಂಡಿಗಳು ಕೊಳೆತು ನಾರುತ್ತಿವೆ. ಇಲ್ಲಿರುವ ನಾಗರಿಕರನ್ನು ಏಕೆ ಕಡೆಗಣಿಸುವುದು ಎಷ್ಟು ಸರಿ, ಇಲ್ಲಿರುವವರಿಂದ ತೆರಿಗೆ ಸಂಗ್ರಹಿಸುವುದಿಲ್ಲವೇ. ಈ ಕೂಡಲೇ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಲಿ. ಸಾರ್ವಜನಿಕರು ಹೋರಾಟಕ್ಕಿಳಿಯುವ ಮುನ್ನ ಎಚ್ಚರಿಕೆ ವಹಿಸಿದರೆ ಸೂಕ್ತ.
- ಪ್ರಕಾಶ್, ರಾಗಿಗುಡ್ಡ

ಆಶ್ರಯ ಮನೆ ನೀಡಿ
ನಗರದ ಹೊನ್ನಾಳಿ ಮಾರ್ಗದಲ್ಲಿರುವ ಚೌಡೇಶ್ವರಿ ಕಾಲೋನಿಯಲ್ಲಿ ಮೂಲ ಸೌಕರ್ಯ ಇಲ್ಲದೇ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇರುವ ಮನೆಗಳನ್ನು ರೇಲ್ವೆ ಅಧಿಕಾರಿಗಳು ಕೆಡವಿ ನಮ್ಮನ್ನು ಒಕ್ಕಲೆಬ್ಬಿಸಿದರು. ನಗರಸಭೆಯವರು ತಾತ್ಕಾಲಿಕವಾಗಿ ಜಾಗ ನೀಡಿದೆ. ಅದು ಕೂಡ ಸರಿಯಾಗಿಲ್ಲ. ಅಲ್ಲಿಯೇ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದೆವೆ. ಇದೀಗ ಬೇಸಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮುಂದೆ ಮಳೆಗಾಲ ಬಂದರೆ ಬಹಳ ಸಮಸ್ಯೆ ಆಗುತ್ತದೆ. ಶಾಸಕರು ಹಾಗೂ ನಗರಸಭೆ ಸದಸ್ಯರು ಆಶ್ರಯ ಮನೆಗಳನ್ನು ನೀಡುವ ಭರವಸೆ ನೀಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಮಗೆ ಮನೆಗಳನ್ನು ನಿರ್ಮಿಸಿಕೊಡಬೇಕು.
- ನಾಗರಾಜ್, ಸ್ಥಳೀಯರು

ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಿ
ಆಯನೂರು ಬಸ್ ನಿಲ್ದಾಣದ ಆವರಣದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಆಗಿದ್ಗಾಂಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಉಂಡೆಗಳು ಬೀಳುತ್ತಿರುತ್ತವೆ. ಇದರ ಕೆಳಭಾಗದಲ್ಲಿ ಬಸ್‌ಗಳು ಬಂದು ನಿಲ್ಲುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಬಸ್ ಮೇಲ್ಭಾಗದಲ್ಲಿ ಚೀಲಗಳನ್ನು ಹಾಕುವಾಗ ತಲೆಗೆ ತಾಗುವಂತೆ ವಿದ್ಯುತ್ ತಂತಿಗಳಿವೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ಕೇಳಲು ಹೋದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಇದನ್ನು ಬೇರೆಡೆ ಸ್ಥಳಾಂತರಿಸಿ ಎಂದು ಅಧಿಕಾರಿಗಳನ್ನು ಕೋರಿದರೆ ಇದಕ್ಕೆ ಸುಮಾರು 30- 40 ಸಾವಿರ ವೆಚ್ಚ ತಗುಲುತ್ತದೆ. ಇದನ್ನು ಯಾರಾದರೂ ಭರಿಸಿದರೆ ಸ್ಥಳಾಂತರಿಸುತ್ತೇವೆ ಎನ್ನುತ್ತಾರೆ. ಮುಂದೆ ಏನ್ನಾದರೂ ಅನಾಹುತ ಆಗುವ ಮೊದಲು ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಟ್ರಾನ್ಸ್‌ಫಾರ್ಮರ್ ಬೇರೆಡೆ ಸ್ಥಳಾಂತರಿಸಬೇಕು.
-ಚಂದ್ರಪ್ಪ, ಆಯನೂರು ಗ್ರಾಪಂ ಸದಸ್ಯ

ರಸ್ತೆ ಸರಿಪಡಿಸಲು ನಿವಾಸಿಗಳ ಆಗ್ರಹ
ಸಾಗರ ತಾಲೂಕಿನ ಮುಖ್ಯ ರಸ್ತೆಯ ಅಂಜನೇಯ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನಗಳವರೆಗೆ ರಸ್ತೆಯಲ್ಲಿ ವಿಪರೀತ ಧೂಳು ತುಂಬಿಕೊಂಡಿದೆ.
ಮಾರ್ಕೆಟ್ ರಸ್ತೆಯಿಂದ ಹರಿದು ಬರುವ ನೀರು ತ್ಯಾಜ್ಯ ವಸ್ತುಗಳು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಅಲ್ಲದೆ, ರಸ್ತೆ ಮಧ್ಯದಲ್ಲಿರುವ ಡಕ್ ಸ್ಲ್ಯಾಬ್ ಕುಸಿದಿರುವುದರಿಂದ ಮಕ್ಕಳು, ಜಾನುವಾರುಗಳ ಸಂಚರಿಸುವುದು ಕಷ್ಟಕರ. ರಾತ್ರಿ ವೇಳೆ ಓಡಾಡಲು ಬಹಳ ತೊಂದರೆಯಾಗುತ್ತಿದೆ. 5 ವರ್ಷಗಳ ಹಿಂದೆ ನಿರ್ಮಿಸಿರುವ ಅವೈಜ್ಞಾನಿಕ ಡಕ್ ಸ್ಲ್ಯಾಬ್ ಉಪಯೋಗಕ್ಕೆ ಬಾರದಂತಾಗಿದೆ. ಸೆಂಟ್ರಿಂಗ್ ತೆಗೆಯದ ಕಾರಣ ನೀರು ನಿಂತಿದೆ. ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಚುನಾಯಿತಿ ಪ್ರತಿನಿಧಿಗಳ ಗಮನಕ್ಕೆ ಬಂದರೂ ಪ್ರಯೋಜನವಾಗಿಲ್ಲ. ವಾರ್ಡ್‌ನ ಜನಪ್ರತಿನಿಧಿಗಳಿಗೆ ಕೇಳಿದರೆ ಚರಂಡಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉದಾಸೀನದ ಮಾತುಗಳನ್ನಾಡುತ್ತಾರೆ. ಕೂಡಲೇ ಸ್ಥಳೀಯ ಆಡಳಿತ ಮಂಡಳಿಯವರು ಅಗತ್ಯ ಕ್ರಮ ಕೈಗೊಳ್ಳಬೇಕು.
-ದತ್ತಾತ್ರೇಯ, ಸ್ಥಳೀಯ ನಿವಾಸಿ

ಬಸ್ ಸೌಕರ್ಯ ಕಲ್ಪಿಸಿ
ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಮಾರುಕಟ್ಟೆಗೆ ಪ್ರತಿ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಹೀಗಾಗಿ ಬಸ್ ನಿಲ್ದಾಣದಿಂದ ಇಲ್ಲಿಗೆ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಲಿ. ಎಪಿಎಂಸಿಯ ಜೊತೆಗೆ ಲಯನ್ ಸಫಾರಿ ಮಾರ್ಗವಾಗಿ ಬಸ್ ಓಡಿಸಿದರೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ, ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಭಾಗದಲ್ಲಿ ಆಟೋದವರ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನ ಹಣಕ್ಕಾಗಿ ಸುಲಿಗೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಹಾಗೂ ಆಲ್ಕೊಳ, ವಿವೇಕಾನಂದ ಬಡಾವಣೆ, ಗಾಡಿಕೊಪ್ಪ, ಶ್ರೀರಾಂಪುರ ಭಾಗದ ಜನರ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವುದೊಳಿತು.
- ಸ್ವಾತಿ, ಗೋಪಾಲಗೌಡ ಬಡಾವಣೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.