ಸ್ವರ್ಣಗೌರಿ ವ್ರತ ಆಚರಣೆ
ಶಿರಾಳಕೊಪ್ಪ: ಗಣೇಶ ಹಬ್ಬದ ಸಿದ್ಧತೆ ಭರದಿಂದ ನಡೆಯುತ್ತಿರುವ ಮುನ್ನಾದಿನವಾದ ಭಾನುವಾರ ಮಹಿಳೆಯರು ಶ್ರೇಷ್ಠ ವ್ರತವಾದ ಸ್ವರ್ಣಗೌರಿ ವ್ರತವನ್ನು ಅತ್ಯಂತ ಸಂತಸ ಮತ್ತು ಭಕ್ತಿಯಿಂದ ಆಚರಣೆ ಮಾಡಿದರು.
ಹಲವಾರು ಮನೆಗಳಲ್ಲಿ ಇದೊಂದು ಪದ್ದತಿ ಇದ್ದರೆ, ಇನ್ನು ಹೆಚ್ಚಿನ ಮಹಿಳೆಯರು ಈ ವ್ರತವನ್ನು ಮಾಡವದರಿಂದ ಸುಮಂಗಲೀತನ ಶಾಶ್ವತ ವಾಗಿರಲಿ, ತಮ್ಮ ಸಂಕಷ್ಟ ಪರಿಹಾರ, ಇಷ್ಷಾರ್ಥ ಸಿದ್ದಿ ಮತ್ತು ಶ್ರೇಯಸ್ಸು ದೊರೆಯುತ್ತದೆ ಎಂಬ ವಿಶ್ವಾಸದಿಂದ ಆಚರಣೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಬಾಗಿಣ ವಿನಿಮಯ: ಮಹಿಳೆಯರು ತಮ್ಮ ಪದ್ಧತಿಯಂತೆ ಪುರೋಹಿತರಿಂದ ಪೂಜೆಯನ್ನು ಮಾಡಿ ಬಾಗಿಣ ಅರ್ಪಣೆ ಕೆಲವರು ಪರಸ್ಪರ ಬಾಗಿಣ ವಿನಿಮಯ ಮಾಡಿಕೊಂಡು ನಂತರ ಗುರುಹಿರಿಯರಿಗೆ ವಂದಿಸಿ ಆರ್ಶೀವಾದ ಪಡೆಯುತ್ತಾರೆ.
ವಿಸರ್ಜನೆ: ಸ್ವರ್ಣಗೌರಿಯ ಪೂಜೆ ಮಾಡಿ ಪ್ರತಿಷ್ಠಾಪನೆ ಮಾಡಿದ ಮೇಲೆ ಗಣೇಶನನ್ನು ವಿಸರ್ಜನೆ ಮಾಡುವಾಗಲೇ ಸ್ವರ್ಣಗೌರಿಯನ್ನು ವಿಸರ್ಜನೆ ಮಾಡುವ ಪದ್ಧತಿಯನ್ನು ಹಲವರು, ಹಾಗೆಯೇ ಗೌರಿವ್ರತವನ್ನು ಆಚರಣೆ ಮಾಡುವವರು ತಮ್ಮ ಪದ್ದತಿಯಂತೆ ಸ್ವರ್ಣಗೌರಿಯನ್ನು ವಿಸರ್ಜನೆ ಮಾಡುತ್ತಾರೆ. ಇಂತಹ ವಿಶೇಷವಾದ ಪೂಜಾ ಪದ್ದತಿಗಳು ಎಲ್ಲಕಡೆ ಪ್ರಚಲಿತ ವಾಗಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಸಾಮೂಹಿಕವಾಗಿ ಆಚರಣೆ ಮಾಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

