ಶಿವಮೊಗ್ಗ

ಜೀವಣ್ಣ ಜೆಡಿಎಸ್ಗೆ

Published On :

ಸೊರಬ: ರಾಜಕೀಯ ಪಕ್ಷಗಳಲ್ಲಿ ಪ್ರಾಮಾಣಿಕತೆ ಇಲ್ಲ. ನನ್ನದು ವ್ಯಕ್ತಿ ನಿಷ್ಠೆಯೇ ಹೊರತು ಪಕ್ಷ ನಿಷ್ಠೆಯಲ್ಲ. ಮೂಲತಃ ಜೆಡಿಎಸ್ನವನಾದ ನಾನು ಜಾತ್ಯತೀತ ಮನೋಭಾವದವನು. ಯಾರದೇ ಋಣದಲ್ಲಿ ಇಲ್ಲದ ನಾನು, ಕುಮಾರ್ ಬಂಗಾರಪ್ಪನವರ ನಾಯಕತ್ವದಲ್ಲಿ ಈವರೆಗೆ ಸಕ್ರಿಯ ರಾಜಕಾರಣದಲ್ಲಿ ಇದ್ದೆ ಎಂದು ಕಾಂಗ್ರೇಸ್ನ ಕಿಸಾನ್ ಸೆಲ್ ಅಧ್ಯಕ್ಷ ಹಾಗೂ ಮಡಿವಾಳ ಸಮಾಜದ ಮುಖಂಡ ನಿಟ್ಟಕ್ಕಿ ಜೀವಣ್ಣ ತಿಳಿಸಿದರು.  ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


'ಹೇಳಿಕೆ ವೈಯಕ್ತಿಕ'
ಸೊರಬ: ಬಿಜೆಪಿಯ ಈಶ್ವರಪ್ಪ ಚನ್ನಪಟ್ಟಣ ಹೇಳಿಕೆ ವೈಯಕ್ತಿಕವಾದುದು. ಸಮಾಜಕ್ಕೂ ಇವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಮಡಿವಾಳ ಸಮಾಜದ ನಿದೇರ್ಶಕ  ಮಹಾಬಲಗಿರಿ ಕೆರೆಕೊಪ್ಪ ಸ್ಪಷ್ಟಪಡಿಸಿದರು. ಬುಧವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಇದ್ದಾಗ ಈಶ್ವರಪ್ಪನವರು ಬಗರ್ ಹುಕುಂ ಸಮಿತಿ ಸದಸ್ಯರಾಗಿ ನೇಮಕವಾಗಿದ್ದು, ಇವರಿಂದ ಸಮಾಜದ ಯಾರೊಬ್ಬರಿಗೂ ಸಹಾಯವಾಗಲಿಲ್ಲ ಎಂದರು.


ಜೆಡಿಎಸ್ಗೆ ಬೆಂಬಲ
ಭದ್ರಾವತಿ: ತಾಲೂಕಿನ ತೆಲುಗು ಕ್ರಿಶ್ಚಿಯನ್ನರು ಕಳೆದ ವಿಧಾಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಜೆ.ಅಪ್ಪಾಜಿ ಅವರನ್ನು ಬೆಂಬಲಿಸಿದ್ದರು. ಅಂತೆಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಗೀತಾ ಶಿವರಾಜ್ಕುಮಾರ್ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆಂದು ತೆಲುಗು ಕ್ರಿಶ್ಚಿಯನ್ ಆಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೆ. ಭಾಸ್ಕರ್ ಬಾಬು) ಮತ್ತು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಡಿ. ಸೈಮನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.