ಶಿವಮೊಗ್ಗ

ಪಟ್ಟಣದ ವಿವಿಧೆಡೆ ಕಳವು

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.30 ಪಟ್ಟಣದಲ್ಲಿ ಮಂಗಳವಾರ ಹಗಲು ಮತ್ತು ರಾತ್ರಿ ಸೇರಿದಂತೆ ಒಟ್ಟು 5 ಕಡೆ ಸರಣಿ ಕಳ್ಳತನ ನಡೆದಿದೆ.
ಪಟ್ಟಣದ ಅಕ್ಕೀಪೇಟೆಯಲ್ಲಿ ಇರುವ ಚಿಟ್ಟೂರ ಗ್ರಾಪಂ ಸೆಕ್ರೇಟರಿ ರಾಜಪ್ಪನವರ ಮನೆಯನ್ನು ಕಳ್ಳರು  ಮಧ್ಯಾಹ್ನ 12ರಿಂದ 4ಗಂಟೆ ಮಧ್ಯದ ಸಮಯದಲ್ಲಿ ಕಳ್ಳವು ಮಾಡಿದ್ದಾರೆ. ಲಕ್ಷಾಂತರ ರೂ. ಬೆಲೆಬಾಳುವ  ಬಂಗಾರದ ಆಭರಣ, ಬೆಳ್ಳಿ ಹಾಗೂ ರು. 20,000 ನಗದು ದೋಚಿದ್ದಾರೆ. ಹಾಗೆಯೇ ಮನೆಯಲ್ಲಿ ಕೆಲವು ಬಾಂಡ್‌ಗಳನ್ನು ಹರಿದು ಹಾಕಿ ಎರಡು ಬಾಂಡ್‌ಗಳನ್ನು ತೆಗೆದು ಕೊಂಡು ಹೋಗಿದ್ದಾಗಿ ರಾಜಪ್ಪ ತಿಳಿಸಿದ್ದಾರೆ.
ಪ್ರತಿದಿನದಂತೆ ರಾಜಪ್ಪ 10ಗಂಟೆಗೆ ಶಿರಾಳಕೊಪ್ಪ ಹತ್ತಿರದವಿರುವ ಚಿಟ್ಟೂರಿಗೆ ತಮ್ಮ ಕೆಲಸಕ್ಕೆ ಹೋಗಿದ್ದಾರೆ. ರಜೆ ಸಮಯವಾದ್ದರಿಂದ ಹೆಂಡತಿ ಮಕ್ಕಳು ಊರಿಗೆ ಹೋದಕಾರಣ ಮನೆಗೆ ಬೀಗ ಹಾಕಿ ಹೋಗಿದ್ದ ರಾಜಪ್ಪ ತುರ್ತುಕೆಲಸದ ಕಾರಣ ಸಂಜೆ 4ಗಂಟೆಗೆ ಮನೆಗೆ ಬಂದು ಬಾಗಿಲನ್ನು ತೆಗೆದಾಗ ಒಳಗಡೆ ಬಾಗಿಲುಗಳು ತೆರೆದು ವಸ್ತಗಳು ಚೆಲ್ಲಾಪಿಲ್ಲಿ ಆಗಿತ್ತು.
ರಾಜಪ್ಪ  ಪೋಲಿಸರಿಗೆ ದೂರುಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗಿ ತಿಳಿದಿದೆ.
ಇನ್ನೊಂದು ಪ್ರಕರಣ: ಇನ್ನೊಂದು ಪ್ರಕರಣದಲ್ಲಿ ಪಟ್ಟಣದ ನೆಹರು ಕಾಲೋನಿಯಲ್ಲಿ ಮನೆ ಕಳ್ಳತನವಾಗಿದೆ. ರಾತ್ರಿ ಸಮಯದಲ್ಲಿ ಪಟ್ಟಣದ ಕೆಳಗಿನಕೇರಿಯ ಟಿಡಿ ಉಮೇಶ್, ಹಳೇ ಪೋಸ್ಟಕೇರಿಯ ಕೃಷ್ಣಪ್ಪ ಹಾಗೂ ನೆಹರು ಕಾಲೋನಿಯ ಮತ್ತೊಂದು ಮನೆ ಕಳ್ಳತನವಾಗಿರುವ ಮಾಹಿತಿ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.