ಶಿವಮೊಗ್ಗ

ನಾಡು ಕಟ್ಟಲು ಶಿಕ್ಷಣ ಅಗತ್ಯ

Published On :

ಸೊರಬ: ತಾಲೂಕಿನ  ಚಂದ್ರಗುತ್ತಿಪುರದಲ್ಲಿ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಜ್ರ ಮಹೋತ್ಸವ   ಕಾರ್ಯಕ್ರಮವನ್ನು ಜಿಪಂ ಸದಸ್ಯ ಗುರುಕುಮಾರ್ ಎಸ್. ಪಾಟೀಲ್ ಡೊಳ್ಳು ಹೊಡೆಯುವ ಮೂಲಕ ಉದ್ಘಾಟಿಸಿದರು.
ಜ್ಞಾನಾರ್ಜನೆ ಮೂಲಕ ನಾಡು ಕಟ್ಟುವ ಕೆಲಸವಾಗಬೇಕಿದ್ದಲ್ಲಿ ಶಿಕ್ಷಣ ಅಗತ್ಯ, ಪ್ರಸ್ತುತ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚಿನ ಸೌಲಭ್ಯ ಒದಗಿಸಿದ್ದು, ಸದುಪಯೋಗವಾಗಬೇಕಿದೆ. ಈ ನಿಟ್ಟಿನಲ್ಲಿ ಕೇವಲ ಶಾಲೆ, ಶಿಕ್ಷಕ ಎನ್ನದೆ ಮನೆಯೇ ಮೊದದ ಪಾಠಶಾಲೆ ಎನ್ನುವಂತೆ ಪ್ರತಿಯೊಬ್ಬ ಪೋಷಕರೂ ಸಹಾ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ  ನೀಡಬೇಕು. ಬೆಳೆಯುವ ಮಕ್ಕಳಿಗೆ ಸಕಾರಾತ್ಮಕವಾಗಿ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸತದ ವಿಚಾರ: ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಒಂದು ಪ್ರಾಥಮಿಕ ಶಾಲೆ ವಜ್ರ ಮಹೋತ್ಸವ ಆಚರಿಸುತ್ತದೆ ಎಂದರೆ ಅತ್ಯಂತ ಸಂತಸದಾಯಕ ವಿಚಾರ, ಶಾಲೆ ಬೆಳೆಸುವಲ್ಲಿ ಇಲ್ಲಿನ ಎಷ್ಟೋ ಹಿರಿಯ ಜೀವಗಳು ಸಮಾಜಕ್ಕಾಗಿ ತೇಯ್ದಿವೆ, ಎಷ್ಟೋ ಶಿಕ್ಷಕರು ಇಲ್ಲಿ ಅಕ್ಷರ ಕಲಿಸಿ ಗ್ರಾಮದ ಅನೇಕರನ್ನು ತಿದ್ದಿ ತೀಡಿ ನಾಗರೀಕರನ್ನಾಗಿಸಿದ್ದಾರೆ. ಈ ಎಲ್ಲ ಆಯಾಮಗಳ ಮೆಲುಕಿನೊಂದಿಗೆ ಶಾಲೆಯ ಮುಂದಿನ ಉತ್ತಮ ಬೆಳವಣಿಗೆಗೆ ಗ್ರಾಮಸ್ಥರು ಸಹಕರಿಸಿದಲ್ಲಿ ಬಹುಷ- ಹಿರಿಯರಿಗೆ ಗೌರವ ಸಲ್ಲಿಸಿದಂತೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ. ಹೊಳೆಲಿಂಗಪ್ಪ, ಶಿಕ್ಷಣ ಸಂಯೋಜಕ ಬಸವರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಪಾಣಿ, ತಾಪಂ ಸದಸ್ಯೆ ಮಧುರಾ ಶ್ರೀನಿವಾಸ್ ಭಟ್, ಸಿಆರ್‌ಪಿ ಗಣೇಶ್ ನಾಯ್ಕ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.