ಆಂಗ್ಲ ಮಾಧ್ಯಮದ ಭ್ರಮೆ ಬೇಡ'
ಕ.ಪ್ರ.ವಾರ್ತೆ, ಹೊಸನಗರ, ಫೆ.11
ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಮಾತ್ರ ಬುದ್ದಿವಂತರು ಎಂಬ ಭ್ರಮೆ ಬೇಡ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಇರಲಿ ಎಂದು ಚಲನಚಿತ್ರ ಸಾಹಿತಿ ಕವಿರಾಜ್ ಸಲಹೆ ನೀಡಿದರು.
ತಾಲ್ಲೂಕಿನ ಸುಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೂಲದಮಕ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಸಮೀಪದ ಯಡೂರು ಸರ್ಕಾರಿ ಕನ್ನಡ ಮಧ್ಯಮದಲ್ಲಿ ತಾವು ಕಲಿತಿದ್ದು ಈಗ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆ ಮಾಡಲು ದಾರಿದೀಪವಾಗಿದೆ ಎಂದರು.
ಗ್ರಾಮದ ಹಿರಿಯ ಯಡೂರು ಅನಂತ ಜೋಯ್ಸ್ ಸಮಾರಂಭ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸುವರ್ಣ ಮೋಹತ್ಸವ ಸಮಿತಿ ಅಧ್ಯಕ್ಷ ಹೊಳೆಯಪ್ಪ ವಹಿಸಿ, ಶಾಲೆ ನಡೆದು 50 ವಸಂತಗಳ ನೆನಪುಗಳನ್ನು ಮೆಲಕು ಹಾಕಿದರು.
ಜಿಪಂ ಸದಸ್ಯರಾದ ಶುಭಾ ಕೃಷ್ಣಮೂರ್ತಿ, ತಾಪಂ ಸದಸ್ಯ ಬಿ.ಇ. ಮಂಜುನಾಥ ಗೌಡ, ಗ್ರಾಪಂ ಅಧ್ಯಕ್ಷೆ ವಿನುತಾ ಜಗದೀಶ್, ಉಪಾಧ್ಯಕ್ಷೆ ಕಲಾವತಿ ಧರ್ಮರಾವ್ ಸದಸ್ಯ ರತ್ನಾಕರ ಗೌಡ, ಸುವರ್ಣ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ, ಗ್ರಾಮದ ಹಿರಿಯ ಸುಬ್ಬೇಗೌಡ, ಹಳೆ ವಿದ್ಯಾರ್ಥಿ ಪಾಂಡೇಶ್, ಕೆ.ಆರ್. ರಮೇಶ್, ಪ್ರಭಾಕರ್, ಕೃಷ್ಣಪ್ಪ ನಾಯ್ಕ್ ಮೊದಲಾದವರು ಹಾಜರಿದ್ದರು. ಶಿಕ್ಷಕ ಸಂತೋಷ್ ಸ್ವಾಗತಿಸಿದರು. ಮಮತಾ ನಿರೂಪಿಸಿದರು.
ಇಂದು ಯಕ್ಷಗಾನ
ಶಿವಮೊಗ್ಗ: ಯಕ್ಷಕುಟೀರ ಸಂಸ್ಥೆ ನಗರದ ಕುವೆಂಪು ರಂಗಮಂದಿರದಲ್ಲಿ 12ರ ಸಂಜೆ 5.30ಕ್ಕೆ 'ರತಿ ಕಲ್ಯಾಣ' ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ. ನೃತ್ಯಗುರು ಸಾಗರದ ಪುರಪ್ಪೆಮನೆ ಎ.ಆರ್. ಗಣಪತಿ ಅವರ ಮಾರ್ಗದರ್ಶನವಿದೆ. ಭಾಗವತರಾಗಿ ರವೀಂದ್ರ ಭಟ್ ಅಚವೆ, ಮೃದಂಗದಲ್ಲಿ ನಾಗಭೂಷಣ ಕೇಡಲಸರ, ಚಂಡೆಯಲ್ಲಿ ಭಾರ್ಗವ ಸಹಕಾರವಿದೆ. ಉಚಿತ ಪ್ರವೇಶವಿದ್ದು, ಮಕ್ಕಳನ್ನು ಪ್ರೋತ್ಸಾಹಿಸುವಂತೆ ಯಕ್ಷಕುಟೀರ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

