ಶಿವಮೊಗ್ಗ

ಮಾ.4ರಿಂದ ಮಾರಿಕಾಂಬೆ ಜಾತ್ರೆ

Published On :

ಶಿವಮೊಗ್ಗ: ಶಿವಮೊಗ್ಗ ಮಾರಿಕಾಂಬ ಜಾತ್ರೆ ಮಾ.4ರಿಂದ ಐದು ದಿನ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಜಾತ್ರೆ ಕುರಿತು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹಾಗೂ ಕಾರ್ಯದರ್ಶಿ ಎನ್. ಮಂಜುನಾಥ್ ವಿವರಣೆ ನೀಡಿದರು.
ಮಾ.4ರಂದು ಬೆಳಗ್ಗೆ 5ಗಂಟೆಗೆ ಸಮಿತಿಯಿಂದ ಮಂಗಳ ವಾದ್ಯದೊಂದಿಗೆ ಬಿಬಿ ರಸ್ತೆಯ ನಾಡಿಗ್ ಕುಟುಂಬವನ್ನು ಪೂಜೆಗೆ ಆಹ್ವಾನಿಸಲಾಗುವುದು. ಮುತ್ತೈದೆಯವರು ಗಾಂಧಿ ಬಜಾರ್‌ನ ತವರು ಮನೆಯಲ್ಲಿರುವ  ಮಾರಿಕಾಂಬೆಗೆ ಉಡಿತುಂಬಿ ಪೂಜೆ ಸಲ್ಲಿಸಲಿದ್ದಾರೆ. ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆ ಸಲ್ಲಿಸಲಿದ್ದಾರೆ ಎಂದರು.
ಗಾಂಧಿಬಜಾರ್‌ನಲ್ಲಿ ಪೂಜೆ: ನಂತರ ಗಾಂಧಿ ಬಜಾರ್‌ನಲ್ಲಿ ಒಂದು ದಿನ ಪೂಜೆ ನೆರವೇರಲಿದೆ. ಅಂದು ರಾತ್ರಿ 10 ಗಂಟೆ ನಂತರ ಮಾರಿಕಾಂಬೆಯನ್ನು ರಥದಲ್ಲಿ ಮೆರವಣಿಗೆಯ ಮೂಲಕ ಗದ್ದಿಗೆವರೆಗೂ ಉಪ್ಪಾರ ಸಮಾಜದವರು ತರುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆ ಪೂಜೆಯೊಂದಿಗೆ ಅಮ್ಮವರನ್ನು ಎದುರುಗೊಳ್ಳಲಾಗುತ್ತದೆ.
ಮಾ.5ರ ಬೆಳಗ್ಗೆ 4 ಗಂಟೆಗೆ ಹರಿಜನ ಸಮಾಜದವರು ಬೇವಿನುಡಿಗೆಯೊಂದಿಗೆ ಆಗಮಿಸಿ ದೇವಿಗೆ ಪೂಜೆಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಪ್ರತಿಷ್‌ಠಾಪಿಸಲಾಗುತ್ತದೆ. ನಾಲ್ಕು ದಿನಗಳವರೆಗೆ ಎಲ್ಲಾ ಸಮಾಜದವರು ಪೂಜೆ ಸಲ್ಲಿಸಲಿದ್ದಾರೆ ಎಂದರು.
ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ 5ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗವಿರುತ್ತದೆ. ಪ್ರತಿದಿನ ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮಾ.8ರಂದು ರಾತ್ರಿ 8 ಗಂಟೆಗೆ ರಾಜಬೀದಿ ಉತ್ಸವದೊಂದಿಗೆ ವನಪ್ರವೇಶ ಮಾಡಲಾಗುತ್ತದೆ ಎಂದು ತಿಳಿಸಿದರು.
ಕುಸ್ತಿ ಪಂದ್ಯ: ಸಮಿತಿ ಸಂಚಾಲಕ ಎನ್. ಉಮಾಪತಿ ಮಾತನಾಡಿ, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಭಾಗವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕುಸ್ತಿಪಟುಗಳಿಗೆ ಪ್ರಮಾಣಪತ್ರ ಕೊಡಲಾಗುವುದು. ಇದರಿಂದ ಮಾಸಾಶನ ಪಡೆಯಲು ಅನುಕೂಲವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರಿಕಾಂಬಾ ಸೇವಾ ಸಮಿತಿ ಪ್ರಮುಖರಾದ ರಾಮಪ್ಪ, ಶ್ರೀನಿವಾಸ, ಲೋಕೇಶ್, ಡಿ.ಎಂ. ರಾಮಯ್ಯ, ಸೀತಾರಾಮ್ ನಾಯಕ್, ಈಶ್ವರರಾವ್ ಪವಾರ್, ಎ.ಎಚ್. ಸುನೀಲ್, ಚಂದ್ರಶೇಖರ್, ಪ್ರಭಾಕರ ಗೌಡ, ವಿ.ರಾಜು, ತಿಮ್ಮಪ್ಪ, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.