ಯೂತ್ ಹಾಸ್ಟೆಲ್ ಸ್ಥಾಪನೆ
ಶಿವಮೊಗ್ಗ: ಸಾರ್ವಜನಿಕರು, ಯುವಕ- ಯುವತಿಯರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್ ಸ್ಥಾಪನೆ ಮಾಡಲು ಸ್ಥಳಾವಕಾಶ ನೀಡುವುದಾಗಿ ಎಸ್.ಎ. ಬಾರಿ ಭರವಸೆ ನೀಡಿದರು. ಯೂತ್ ಹಾಸ್ಟೆಲ್ ಸದಸ್ಯರು ಕುಲಪತಿ ಅವರನ್ನು ಭೇಟಿಯಾದ ಸಂದರ್ಭ ಭರವಸೆ ಸಿಕ್ಕಿದೆ. ಯೂತ್ ಹಾಸ್ಟೆಲ್ ಸ್ಥಾಪನೆಗೆ ಕಾನೂನು ಹಾಗೂ ಷರತ್ತುಗಳಿಗೆ ಬದ್ಧವಾಗಿ ಪರಿಶೀಲಿಸಿ ಸ್ಥಳ ನೀಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭಭದಲ್ಲಿ ಯೂತ್ ಹಾಸ್ಟೆಲ್ ರಾಜ್ಯಾಧ್ಯಕ್ಷ ಪುರುಷೋತ್ತಮ್, ಯೂತ್ ಹಾಸ್ಟೆಲ್ ಚಟುವಟಿಕೆ ಹಾಗೂ ಸಾರ್ವಜನಿಕರಿಗಾಗುವ ಪ್ರಯೋಜನಗಳು, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಸಿದರು. ಶಿವಮೊಗ್ಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಯೂತ್ ಹಾಸ್ಟೆಲ್ ಸ್ಥಾಪನೆ ಮಾಡುವುದಾಗಿ ತಿಳಿಸಿದರು. ಶಿವಮೊಗ್ಗ ತರುಣೋದಯ ಘಟಕದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಘಟಕದ ಯೂತ್ ಹಾಸ್ಟೆಲ್ ಅಭಿವೃದ್ಧಿ ಸಮಿತಿಯ ಸದಸ್ಯ ಆ.ನಾ.ವಿಜೇಂದ್ರ ರಾವ್, ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ನಿರ್ದೇಶಕ ಜಿ.ವಿಜಯಕುಮಾರ್, ಶಿವಮೊಗ್ಗ ಯೂತ್ಹಾಸ್ಟೆಲ್ ವಾರ್ಡನ್ ಎನ್.ಗೋಪಿನಾಥ್, ನಿಯೋಜಿತ ಕಾರ್ಯದರ್ಶಿ ಧನಂಜಯ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

