20ರಿಂದ ಇಷ್ಟಲಿಂಗ ಪೂಜೆ
ಕ.ಪ್ರ.ವಾರ್ತೆ, ಶಿಕಾರಿಪುರ, ಜ.5
ಪಟ್ಟಣದ ಮಂಗಳಭವನದಲ್ಲಿ ಲೋಕಲ್ಯಾಣಾರ್ಥ ಜ.20ರಿಂದ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಹಾಗೂ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ ಎಂದು ಭದ್ರಾ ಕಾಡಾ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ, ತಾಲೂಕು ವೀರಶೈವ ಸಮಾಜದ ಮುಖಂಡ ಕೆ.ಶೇಖರಪ್ಪ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಕೇದಾರದ ಶ್ರೀಹಿಮವತ್ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳ ಪುರಪ್ರವೇಶ, ಅಡ್ಡಪಲ್ಲಕ್ಕಿ ಉತ್ಸವ, ಮಧ್ಯಾಹ್ನ 1 ಗಂಟೆಗೆ ಧರ್ಮಸಭೆ ಮಂಗಳವಾರ ಹಾಗೂ ಬುಧವಾರ ಸಂಗೀತಯುಕ್ತ ರುದ್ರಾಭಿಷೇಕದೊಂದಿಗೆ ಇಷ್ಟಲಿಂಗ ಮಹಾ ಪೂಜೆ, ಭಕ್ತರಿಗೆ ದರ್ಶನಾಶೀರ್ವಾದ, ಧರ್ಮಸಭೆ ಹಮ್ಮಿಕೊಳ್ಳಲಾಗಿದೆ.
ಕಡ್ಡಾಯ: ಜಾತಿ, ಧರ್ಮ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನತೆ ಪೂಜೆ, ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು ಪೂಜೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಇಷ್ಟಲಿಂಗಧಾರಿಗಳು ಶುಚಿರ್ಭೂತರಾಗಿ ಮಡಿಬಟ್ಟೆ ಧರಿಸಿ ಪುರುಷರು ಮಡಿಪಂಚೆ ಹಾಗೂ ಶಲ್ಯ ಧರಿಸುವಿಕೆ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಶ್ರೀಗಳ ಧಾರ್ಮಿಕ ಕಾರ್ಯದ ಯಶಸ್ಸಿಗೆ ಎಲ್ಲಾ ವರ್ಗದ ಜನತೆ ಸಹಕರಿಸುವಂತೆ ಮನವಿ ಮಾಡಿದ ಅವರು ಆನೂಚಾನವಾಗಿ ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯದನ್ವಯ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಮೆರವಣಿಗೆ ಧಾರ್ಮಿಕ ಸಭೆ ಮತ್ತಿತರ ಕಾರ್ಯಕ್ರಮಗಳು ವಿವಾದತೀತವಾಗಿ ನೆರವೇರಿಸಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಮನವಿ: ಮಹಾಪೂಜಾ ಸೇವಾ ಸಮಿತಿಯ ಖಜಾಂಚಿ ರುದ್ರಪ್ಪಯ್ಯ ಪಟೇಲ್ ಮಾತನಾಡಿ, ಪಟ್ಟಣದ ಮಂಗಳಭವನದ ಹಿಂಭಾಗದ ವಿಶಾಲ ಮೈದಾನದಲ್ಲಿ ಕೇದಾರನಾಥನ ಜ್ಯೋತಿರ್ಲಿಂಗವನ್ನು ಸಾಕ್ಷಾತ್ ಪೂಜಿಸುವ ಶ್ರೀ ಹಿಮವತ್ಕೇದಾರ ಭೀಮಾಶಂಕರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಜರುಗಲಿದೆ.
ಶ್ರೀಗಳ 40ಕ್ಕೂ ಅಧಿಕ ಶಿಷ್ಯರು ಶಿವನ ನಾಮಾವಳಿ ಜಪಿಸುವ ವಿಶೇಷ ಪೂಜೆಗೆ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಕೃಪೆಗೆ ಪಾತ್ರರಾಗುವ ಜತೆಗೆ ಅಪರೂಪದ ಬಹು ದೊಡ್ಡ ಧಾರ್ಮಿಕ ಕಾರ್ಯಕ್ರಮವನ್ನು ಕಣ್ಣಾರೆ ವೀಕ್ಷಿಸುವ ಅವಕಾಶದ ಸದುಪಯೋಗಕ್ಕೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಪ್ರಭುಸ್ವಾಮಿ ಕಾನಳ್ಳಿ, ಸದಸ್ಯ ಪರಮೇಶ್ವರಪ್ಪ, ದೇವರಾಜ್, ದಾನಯ್ಯ, ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

