ಶಿವಮೊಗ್ಗ

ಬಸ್ ನಿಲುಗಡೆ ಸಮಸ್ಯೆ

Published On :

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಅಚ್ಚುಕಟ್ಟಾಗಿ ನಿರ್ಮಾಣವಾಯಿತು. ಅದರ ಪಕ್ಕದ ಗೋಪಾಳ ಸಂಪರ್ಕ ರಸ್ತೆಯನ್ನೂ ಕೂಡ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಯಿತು. ಆದರೆ, ಸುತ್ತಮುತ್ತಲ ವಾತಾವರಣ ಮಾತ್ರ ಸುಧಾರಿಸಲೇ ಇಲ್ಲ. ಗೋಪಾಳ ಸಂಪರ್ಕದ ದ್ವಿಪತ್ರ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ ಬಸ್‌ಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೀರಾ ಅಡಚಣೆಯಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸಾಕಷ್ಟು ತೊಂದರೆಗೆ ಸಿಲುಕುತ್ತಿದ್ದಾರೆ. ಸಂಚಾರಿ ಪೊಲೀಸರು ಇದನ್ನು ನೋಡಿಕೊಂಡು ಸುಮ್ಮನೆ ಓಡಾಡುತ್ತಾರೆ ವಿನ- ಬಸ್‌ಗಳನ್ನು ನಿರ್ದಿಷ್ಟ ಸ್ಥಳಕ್ಕೆ ಕಳುಹಿಸುತ್ತಿಲ್ಲ. ಖಾಸಗಿ ಬಸ್ ವಿನಾಕಾರಣ ಅಲ್ಲಿ ನಿಲ್ಲಿಸುವ ಕಾರಣ ಅಪಘಾತಕ್ಕೂ ಕಾರಣವಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಈ ಬಗ್ಗೆ ಖುದ್ದು ವೀಕ್ಷಣೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಅಪಘಾತ ನಡೆದು ಜೀವಹಾನಿಯಾಗುವ ಮುನ್ನ ಅಥವಾ ಸಾರ್ವಜನಿಕರು ತಿರುಗಿ ಬೀಳುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು.
-ಹರೀಶ್, ಕೆ.ಆರ್. ಪುರಂ

ಕಸ ವಿಲೇವಾರಿ ಸರಿಯಿಲ್ಲ
ಶಿವಮೊಗ್ಗ ಬಿಬಿ ರಸ್ತೆಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿ ಕಸ ಸಂಗ್ರಹಿಸುವ ಜವಾಬ್ದಾರಿ ಹೊತ್ತ ವಾಹನವು ವ್ಯವಸ್ಥಿತವಾಗಿ ಕಸ ಸಂಗ್ರಹಿಸುವುದೇ ಇಲ್ಲ. ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಹಾಗೂ ಬಂದರೂ ಬೇಕಾಬಿಟ್ಟಿಯಾಗಿ ವೇಗವಾಗಿ ವಾಹನ ಚಲಿಸಿಬಿಡುತ್ತದೆ. ಹೀಗಾಗಿ ಈ ಭಾಗದ ಜನರು ಕಸವನ್ನು ಅನಿವಾರ್ಯವಾಗಿ ತುಂಗಾ ನದಿಗೆ ಎಸೆಯಬೇಕಾದ ಪರಿಸ್ಥಿತಿ ಇದೆ. ಕಸ ಸಂಗ್ರಹ ಪ್ರದೇಶ ಕೂಡ ಈ ಭಾಗದಲ್ಲಿ ಗುರುತು ಮಾಡಿರದ ಕಾರಣ ಸ್ಥಳೀಯರು ಕಸವನ್ನು ಹೊಳೆ ದಂಡೆಯಲ್ಲಿ ಎಸೆಯುತ್ತಿದ್ದಾರೆ. ನಗರಸಭಾ ಅಧಿಕಾರಿಗಳು ಈ ಬಗ್ಗೆ ಒಮ್ಮೆ ಗಮನಿಸುವುದು ಒಳಿತು. ಅಲ್ಲದೆ, ನಿಯಮಿತವಾಗಿ ನಗರದಲ್ಲಿ ಸಂಚರಿಸುವ ಕಸ ಸಂಗ್ರಹಿಸುವ ವಾಹನಗಳನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ.
-ಪ್ರಸಾದ್, ಬಿಬಿ ರಸ್ತೆ

ಶಾಲೆ ರಸ್ತೆಯಲ್ಲಿ ಬಾರ್
ಶಿವಮೊಗ್ಗ ನಗರದ ಕುಂಬಾರ ಗುಂಡಿ ಜೆಪಿಎನ್ ಶಾಲಾ ಆವರಣದ ಸುತ್ತಮುತ್ತ ಶಾಲಾ ಕಾಲೇಜುಗಳಿವೆ. ಆದರೆ, ಇಲ್ಲೇ ಸಮೀಪದಲ್ಲಿ ಒಂದು ಬಾರ್ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು ಅಚ್ಚರಿ ಮೂಡಿಸುತ್ತದೆ.
ಬಿಬಿ ರಸ್ತೆ ಸರ್ಕಾರಿ ಶಾಲೆ, ಜೆಪಿಎನ್ ಪ್ರೌಢಶಾಲೆ, ಜೆಪಿಎನ್ ಕಾಲೇಜು, ಆಜಾದ್ ಪ್ರೌಢಶಾಲೆ ಕಾಲೇಜು ಸಹ ಇಲ್ಲಿದೆ. ಸಾವಿರಾರು ಮಕ್ಕಳು ಪ್ರತಿದಿನ ಇದೇ ರಸ್ತೆಯಲ್ಲಿ ಬಂದು ಹೋಗುತ್ತಾರೆ. ಬಾರ್ ಮುಂಭಾಗದಲ್ಲಿ ಈ ಮಕ್ಕಳು ಹಾದುಹೋಗಬೇಕು. ಶಾಲೆಯ ಆವರಣದಿಂದ ಹೊರಗೆ ಕಾಲಿಟ್ಟರೆ ಸಿಗುವುದೇ ಬಾರ್ ಆವರಣ ಎಂಬಂತಹ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿ.
-ನೊಂದ ವಿದ್ಯಾರ್ಥಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.