'ಮಯೂರನ ಮಾದರಿ ಆಡಳಿತ'
ಸಾಗರ: ಕನ್ನಡ ನಾಡನ್ನು ಸಾಂಸ್ಕೃತಿಕವಾಗಿ ಕಟ್ಟುವಲ್ಲಿ ಅನೇಕ ರಾಜವಂಶದ ಕೊಡುಗೆ ಇದೆ. ಅದರಲ್ಲಿ ಕದಂಬರು ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ ಪ್ರಮುಖರಾಗಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ಜ. 18, 19ರಂದು ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವ ಅಂಗವಾಗಿ ಗುಡ್ನಾಪುರದ ರಾಣಿ ವಿಲಾಸದಿಂದ ಆಗಮಿಸಿದ ಕದಂಬ ಜ್ಯೋತಿಯನ್ನು ಗುರುವಾರ ಸಾಗರ ಪಟ್ಟಣದ ತ್ಯಾಗರ್ತಿ ವೃತ್ತದಲ್ಲಿ ಸ್ವಾಗತಿಸಿ ಮಾತನಾಡಿ, ಕದಂಬರ ದೊರೆ ಮಯೂರವರ್ಮರಂಥವರು ನಾಡಿಗೆ ನೀಡಿದ ಆಡಳಿತ ಮಾದರಿಯಾದದ್ದು ಎಂದರು. ಹಂಪೆ, ಕದಂಬ, ಬನವಾಸಿ, ಕೆಳದಿ ಉತ್ಸವದಂತಹ ಕಾರ್ಯಕ್ರಮಗಳು ನಡೆದಾಗ ನಾಡಿನ ಜನರಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಇತಿಹಾಸ ತಿಳಿದುಕೊಳ್ಳದೆ ಹೋದರೆ ಹೊಸದೊಂದು ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಇತಿಹಾಸ ನಿಂತ ನೀರಾಗಬಾರದು. ಹಿಂದಿನ ಕಾಲದ ಆಡಳಿತ, ಅವರ ವೀರ ಪರಂಪರೆ ಹಾಗೂ ನಾಡಿಗೆ ನೀಡಿದ ಕೊಡುಗೆಗಳ ಕುರಿತು ಕಾಲಕಾಲಕ್ಕೆ ಚರ್ಚೆಗಳಾಬೇಕು. ನಮಗೆ ಅಗತ್ಯವಾದದ್ದನ್ನು ಆಯ್ಕೆ ಮಾಡಿಕೊಂಡು ನಮ್ಮ ನಡೆನುಡಿ, ಆಡಳಿತದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

