ಕಾಯಿ ಸುಲಿಯಲು ಕ್ಷಣ
ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವ್ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ಮಾಡೆಲ್‌ಗಳನ್ನು ಗುರುವಾರ ಪ್ರದರ್ಶನಕ್ಕಿಡಲಾಗಿತ್ತು.
ಬಯೋಗ್ಯಾಸನ್ನು ಮೆಥೆನಾಲ್ ಆಗಿ ಪರಿವರ್ತಿಸಿ ಬಯೋಫ್ಯೂಯಲ್ ಮಾಡಿ ಅದನ್ನು ಎಂಜಿನ್‌ಗಳಿಗೆ ಬಳಸಿ ಓಡಿಸುವ ವಾಹನ ಗಮನ ಸೆಳೆಯುತ್ತಿತ್ತು. ಅದರ ಎಂಜಿನ್‌ಗೆ ಶೇ.30ರಷ್ಟು ಬಯೋಗ್ಯಾಸ್ ಮಿಶ್ರಣವನ್ನು ಪೆಟ್ರೋಲ್‌ಗೆ ಹಾಕಿದ್ದಲ್ಲಿ 20 ಕಿಮೀ ಜಾಸ್ತಿ ಮೈಲೇಜ್ ಕೊಡುತ್ತದೆ. ಮಾತ್ರವಲ್ಲ ಕಾರ್ಬನ್ ಮೊನಾಕ್ಸೈಡ್ ಕೂಡ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ವಿದ್ಯಾರ್ಥಿಗಳಾದ ಗುರುಪ್ರಸಾದ್ ಭಟ್, ದರ್ಶನ್ ಶೆಟ್ಟಿ, ಪಿ.ಎ. ಮಾರುತಿ, ಅಭಿಜಿತ್ ಮಾಹಿತಿ ನೀಡಿದರು. ಪ್ರೊ. ಶ್ರೀಪತಿ ಇದನ್ನು ತಯಾರಿಸಲು ಮಾರ್ಗದರ್ಶನ ಮಾಡಿದ್ದರು.
ಎಚ್.ಜೆ. ಅಭಿಷೇಕ್, ಅಮಿತ್ ಗುಪ್ತಾ, ಎಂ.ಎಚ್. ಉಮೇಶ್ ಕುಮಾರ್, ಎಸ್.ಪಿ. ಕಾರ್ತಿಕ್ ತಂಡದವರು ರೋಡ್ ಡಸ್ಟರ್ ಕ್ಲೀನಿಂಗ್ ಯಂತ್ರ ಕಸ ಸಮಸ್ಯೆಗೆ ಪರಿಹಾರ ನೀಡುವಂತಿದೆ.
ಕ್ಷಣಮಾತ್ರದಲ್ಲಿ ತೆಂಗಿನ ಕಾಯಿ ಸುಲಿಯುವ ಮೋಟರ್ ಚಾಲಿತ ಯಂತ್ರವನ್ನು ಭರತ್, ಅನಿಲ್, ಚೇತನ್, ವಿಜಯರಾಜ್ ತಂಡ ರೂಪಿಸಿದೆ. ಈ ಯಂತ್ರ 5 ಸೆಕೆಂಡ್‌ಗಳಲ್ಲಿ ಒಂದು ಕಾಯಿ ಸುಲಿಯುವ ಶಕ್ತಿಯನ್ನು ಹೊಂದಿದೆ.
ಪ್ರದರ್ಶನದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಹೈಬ್ರಿಡ್ ಕಾರು. ಎಲೆಕ್ಟ್ರಿಕ್ ಮೋಟರ್ ಮತ್ತು ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರನ್ನು ಪ್ರಣವ್ ಶಾಸ್ತ್ರಿ, ಮಯೂರ್ ಶೆಣೈ, ಅವಿನಾಶ್ ಶೆಟ್ಟಿ, ಎನ್.ವಿ. ಕಿಶನ್ ತಂಡದವರು ಈ ರೂಪಿಸಿದ್ದಾರೆ. ಇಷ್ಟೇ ಅಲ್ಲದೇ ಸುಲಭವಾಗಿ ಔಷಧ ಸಿಂಪಡಿಸುವ ಯಂತ್ರ, ಫ್ಯಾಬ್ರಿಕೇಷನ್ ಆಫ್ ಶೀಟ್ ಬೆಂಡಿಂಗ್ ಯಂತ್ರ ಸೇರಿ ಹಲವು ಮಾಡೆಲ್‌ಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

