ಶಿವಮೊಗ್ಗ

ಶಾಲೆ ಜಾಗ ಕಬಳಿಕೆ: ಆರೋಪ

Published On :

ಕ.ಪ್ರ.ವಾರ್ತೆ ್ಣ ಹೊಸನಗರ ್ಣ ಮಾ. 4
ಮೇಲಿನಬೇಸಿಗೆ ಗ್ರಾ.ಪಂ ಅಧ್ಯಕ್ಷೆ ನೆಲ್ಲುಂಡೆ ಲಲಿತಾಇವರು ಸರ್ವೆ ನಂ. 30ರಲ್ಲಿನ ಕ್ರೀಡಾಂಗಣಕ್ಕೆ ಮೀಸಲಾದ ಶಾಲಾ ಜಾಗ ಕಬಳಿಕೆ ಮಾಡಿಕೊಂಡಿದ್ದುಅಲ್ಲದೆ ಶಾಲಾ ಪ್ರಗತಿ ನಿರಂತರವಾಗಿಅಡ್‌ಡಗಾಲಾಗುತ್ತ ಬಂದಿದ್ದಾರೆಎಂದು ಆರೋಪಿಸಿರುವ ಕಾರಣಗಿರಿ ಪ್ರೌಢಶಾಲೆ ಅಭಿವೃದ್ದಿ  ಸಮಿತಿ, ಬುಧವಾರದಂದು ಅಧ್ಯಕ್ಷೆ ಲಲಿತಾ ವಿರುದ್ದ ಮತ್ತು ಅವರು ಮಾಡಿಕೊಂಡ ಒತ್ತುವರಿತೆರವಿಗೆ ಆಗ್ರಹಿಸಿ ರಸ್ತೆತಡೆ ಹಾಗೂ ಪ್ರತಿಭಟನೆಗೆ ಮುಂದಾಗಿದೆ.
 ಕಾರಣಗಿರಿ ಶಾಲೆ 1982ರಲ್ಲಿ ಆರಂಭವಾಗಿದ್ದುಉತ್ತಮ ಪಲಿತಾಂಶ ಪಡೆಯುತ್ತ ಬಣದಿದೆ. ಕಾರಣಗಿರಿಯಲ್ಲಿನ ಸರ್ವೆ ನಂ 30ರಲ್ಲಿ 10 ಎಕರೆಜಾಗವನ್ನು ಸೋನಲೆ ಮಂಡಲ ಪಂಚಾಯಿತಿ 1989ರಲ್ಲಿ ಮಂಜೂರು ಮಾಡಿದೆ.
ಜಾಗ ಒತ್ತುವರಿ: ಶಾಲಾ ಪಕ್ಕದ ನಿವಾಸಿ ಲಲಿತಾ ಶಾಲಾ ಜಾಗವನ್ನು ಅನಧಿಕೃತವಾಗಿ ಕಬಳಿಸಿದ್ದು ಅಲ್ಲದೆ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮೇಲಿನ ಬೇಸಿಗೆ ಗ್ರಾ.ಪಂ ಅಧ್ಯಕ್ಷೆಯಾದ ಇವರು ತಮ್ಮ ಅಧಿಕಾರ ಉಪಯೋಗಿಸಿಕೊಂಡು ಶಾಲೆಗೆ ಯಾವುದೆ ಅನುದಾನ, ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡದೆ ತಮ್ಮ ಸಂಕುಚಿತ ಬುದ್ದಿಯನ್ನುತೋರಿದ್ದಾರೆ ಎಂದು ಶಾಲಾಬಿವೃದ್ಧಿ ಸಮಿತಿಅಧ್ಯಕ್ಷ ಸುರೇಶ್ ಆರೋಪಿಸಿದರು.
ಈಗ ಶಾಲಾ ಕ್ರೀಡಾಂಗಣ ನಿರ್ಮಾಣವನ್ನು ಪೈಕಾ ಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ. ಆದರೆ ಲಲಿತಾ ಕಾಮಗಾರಿ ಮಾಡದಂತೆ ಅಡ್‌ಡಿಪಡಿಸಿ ಪೊಲೀಸರಲ್ಲಿ ದೂರು ನೀಡುವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಪಟ್ಟಭದ್ರ ಅಧ್ಯಕ್ಷೆ ವಿರುದ್ದ ನಾಗರೀಕರು, ಪೋಷಕರು ಸೇರಿ ಶಾಲಾ ಜಾಗ ಉಳಿಸಿ ಎಂದು ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.