ಶಿವಮೊಗ್ಗ

ತಬಲಿ ಬಂಗಾರಪ್ಪ ಖಂಡನೆ

Published On :

ಸೊರಬ: ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮಂಜುನಾಥ ಭಂಡಾರಿ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಎಐಸಿಸಿ ಕ್ರಮವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಬಲಿ ಬಂಗಾರಪ್ಪ ತೀವ್ರವಾಗಿ ಖಂಡಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಮುಖಂಡರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಯ ಸಮಗ್ರ ಚಿತ್ರಣ ಹಾಗೂ ತಾಲೂಕಿನ ಜನರಿಗೆ ಪರಿಚಯವಿಲ್ಲದ ಮಂಜುನಾಥ ಭಂಡಾರಿ ಅವರನ್ನು ಚುನಾವಣಾ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಎಐಸಿಸಿ, ಕೆಪಿಸಿಸಿ ಹಾಗೂ ಜಿಲ್ಲಾ ಸಮಿತಿಯ ನಿರ್ಧಾರದಿಂದಾಗಿ ನಿಷ್ಟಾವಂತ ಕಾರ್ಯಕರ್ತರನ್ನು ಆತಂಕಕ್ಕೆ ಈಡು ಮಾಡಿದಂತಾಗಿದೆ ಎಂದರು.
ಸಾಮೂಹಿಕ ರಾಜಿನಾಮೆ ಎಚ್ಚರಿಕೆ:  ಶುಕ್ರವಾರ ರಾತ್ರಿ ಸೊರಬ ಹಾಗೂ ಆನವಟ್ಟಿ ಬ್ಲಾಕ್ ಸಮಿತಿಯ ನೂರಾರು ಮುಖಂಡರು ಬೆಂಗಳೂರಿಗೆ ತೆರಳಿ ಮಂಜುನಾಥ ಭಂಡಾರಿ ಅವರ ಘೋಷಣೆ ಹಿಂಪಡೆಯುವಂತೆ, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಈ ಒತ್ತಡಕ್ಕೆ ಅವರು ಮಣಿಯದಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಮಂಜುನಾಥ ಭಂಡಾರಿ ಪರ ಮತ ಯಾಚನೆ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಮುಂದಿನ ದಿನಗಳಲ್ಲಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಮುಖಂಡರು, ಸಾಮೂಹಿಕ ರಾಜಿನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಆನವಟ್ಟಿ ಬ್ಲಾಕ್ ಅಧ್ಯಕ್ಷ, ಮಲ್ಲಿಕಾರ್ಜುನ ಗುತ್ತೆರ್, ಮುಖಂಡರಾದ ಕೆ.ಅಜ್ಜಪ್ಪ, ಜೆ.ಶಿವಾನಂದಪ್ಪ, ಮಾಜಿ ಜಿಪಂ ಸದಸ್ಯ ಪ್ರಶಾಂತ್, ಎಂ.ಡಿ. ಉಮೇಶ್, ಟಿ.ಆರ್. ಸುರೇಶ್, ಬಂದಿಗೆ ಬಸವರಾಜ್, ಯೂಸೂಫ್ ಸಾಬ್, ರೇವಣಪ್ಪ, ಕೆ.ಜಿ. ಬಸವರಾಜ, ಅಹಮ್ಮದ್ ಷರೀಫ್, ನಿಂಗಪ್ಪ, ವಿನಾಯಕ, ಶಬ್ಬೀರ್ ಆನವಟ್ಟಿ, ಹುಚ್ಚಪ್ಪ ಹೊಸೂರು, ಕೃಷ್ಣಪ್ಪ ಶಿಗ್ಗಾ, ಷಣ್ಮುಖಪ್ಪ ಶಿಗ್ಗಾ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.