ಯಡಿಯೂರಪ್ಪ ಆಸ್ತಿ ವಿವರ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2013 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರ ಬಳಿ ಒಂದು ಟಯೋಟ ಫಾರ್ಚೂನರ್ ವಾಹನ ಇತ್ತು. ಈ ಬಾರಿ ಲೋಕಸಭೆ ಚುನಾವಣೆ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಬಗ್ಗೆ ಮಾಹಿತಿ ಇಲ್ಲ.
ವಿಧಾನಸಭೆ ಚುನಾವಣೆ ವೇಳೆ ಈ ವಾಹನಕ್ಕಾಗಿ ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ನಲ್ಲಿ ಸಾಲ ಮಾಡಿದ್ದು, ರು. 10.89 ಲಕ್ಷ ಬಾಕಿ ಇದೆ ಎಂದು ತೋರಿಸಿದ್ದರು. ಈ ಬಾರಿ ಸಾಲವೂ ಇಲ್ಲ, ವಾಹನವೂ ಇಲ್ಲವಾಗಿದೆ.
ಗಮನಾರ್ಹ ಬದಲಾವಣೆ ಇಲ್ಲ: ಕರ್ನಾಟಕ ಜನತಾ ಪಕ್ಷವನ್ನು ಕಟ್ಟಿ, ರಾಜ್ಯಾದ್ಯಂತ ಪ್ರಚಾರ ನಡೆಸಿ, ತಾವೂ ಸಹ ಚುನಾವಣೆಯಲ್ಲಿ ಸ್ಪರ್ಧಿಸಿ, ಹಲವು ಶಾಸಕರನ್ನು ಗೆಲ್ಲಿಸಿದ್ದರೂ, ಅವರ ಆಸ್ತಿಯಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಬದಲಾಗಿದೆ ಕಳೆದ 11 ತಿಂಗಳಲ್ಲಿ ಅವರ ಆಸ್ತಿ ಮೌಲ್ಯ ರು. 70 ಲಕ್ಷ ಹೆಚ್ಚಾಗಿದೆ. ಅವರೇ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿಕೊಂಡಂತೆ ಅವರ ಸ್ಥಿರಾಸ್ತಿ ಮೌಲ್ಯ 4.19 ಕೋಟಿ ಇತ್ತು. ಈ ಬಾರಿ ಮೌಲ್ಯ 4.89 ಕೋಟಿಗೆ ಏರಿಕೆಯಾಗಿದೆ.
ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಯಡಿಯೂರಪ್ಪ ಅವರು ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರರಿಗೆ ತಲಾ 17 ಲಕ್ಷ ಹಾಗೂ 30 ಲಕ್ಷ ಮುಂಗಡ ನೀಡಿದ್ದಾರೆ. ಬೇರೊಬ್ಬರಿಂದ 5 ಲಕ್ಷ ಸಾಲವನ್ನೂ ಪಡೆದಿದ್ದಾರೆ. ವಿವಿಧ ಬ್ಯಾಂಕುಗಳಲ್ಲಿರುವ ಇವರ ಖಾತೆಗಳಲ್ಲಿ ಒಟ್ಟು 2.07 ಕೋಟಿ ಉಳಿತಾಯ ಮಾಡಿದ್ದಾರೆ.
ಶಿರಾಳಕೊಪ್ಪ, ಗಡ್ಲದಹಳ್ಳಿಯಲ್ಲಿ ಕೃಷಿಯೇತರ ಭೂಮಿ, ಚನ್ನಹಳ್ಳಿಯಲ್ಲಿ ಕೃಷಿ ಭೂಮಿ ಇದೆ. ಬೆಂಗಳೂರು ಹಾಗೂ ಶಿಕಾರಿಪುರದ ಮಾಳೇರಕೇರಿಯಲ್ಲಿ ತಲಾ ಒಂದು ಮನೆ ಇದೆ. ಶಿಕಾರಿಪುರದಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡವೂ ಇದೆ.
ಯಡಿಯೂರಪ್ಪ ಅವರು ಎದುರಿಸುತ್ತಿದ್ದ ಪ್ರಕರಣಗಳಲ್ಲಿ ಬಾಕಿ ಉಳಿದಿರುವುದು 9 ಪ್ರಕರಣಗಳು ಮಾತ್ರ. ಈ ಎಲ್ಲಾ ಪ್ರಕರಣಗಳೂ ಸಹ ಅವರು ಮುಖ್ಯಮಂತ್ರಿಯಾದ ನಂತರ ಹೂಡಿದ ಮೊಕದ್ದಮೆಗಳೇ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

