'ಯುವಶಕ್ತಿ ಸದ್ಬಳಕೆಯಾಗಲಿ'
ಸಾಗರ: ಇತ್ತೀಚಿನ ದಿನಗಳಲ್ಲಿ ಯುವಶಕ್ತಿ ಸದ್ಬಳಕೆ ಆಗುತ್ತಿಲ್ಲ. ಯುವಜನರನ್ನು ಸರಿದಾರಿಗೆ ತರುವಲ್ಲಿ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ರಾಮಚಂದ್ರಪುರ ಮಠದ ಶ್ರೀರಾಘವೇಶ್ವರಭಾರತಿ ಸ್ವಾಮಿಗಳು ಹೇಳಿದರು.
ಪಟ್ಟಣದ ಗಾಂಧಿನಗರದಲ್ಲಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿವಿಧ ಆಕರ್ಷಣೆಗೆ ಗುರಿಯಾಗಿ ಯುವಶಕ್ತಿ ದಾರಿತಪ್ಪುತ್ತಿದೆ. ಹೀಗೆ ಹಾದಿ ತಪ್ಪುತ್ತಿರುವ ಯುವಜನತೆಯನ್ನು ತಿದ್ದಿ ಸರಿದಾರಿಯಲ್ಲಿ ಸಾಗುವಂತೆ ರೂಪಿಸಿ ಹುರಿದುಂಬಿಸುವ ಕೆಲಸ ಆಗಬೇಕು. ಕೆಟ್ಟದ್ದಕ್ಕೆ ಹಾಗೂ ಕೆಟ್ಟವರಿಗೆ ಪ್ರೋತ್ಸಾಹ ಹಾಗೂ ಸಹಾಯ ಮಾಡುವುದರಿಂದ ಸಮಾಜದಲ್ಲಿ ದುಷ್ಟಶಕ್ತಿಗಳು ಇನ್ನಷ್ಟು ವಿಜೃಂಭಿಸುವ ಅಪಾಯ ಇದೆ. ಒಳ್ಳೆಯವರಿಗೆ, ಸತ್ಕಾರ್ಯಗಳ ಮೂಲಕ ಸಮಾಜ ಕಟ್ಟುವವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಸಹಾಯ ಮಾಡುವುದರಿಂದ ಸಮಾಜವು ಇನ್ನಷ್ಟು ಮಾದರಿಯಾಗಿ ರೂಪುಗೊಳ್ಳುತ್ತದೆ ಎಂದರು.
ಸಹಕಾರ ಅಗತ್ಯ: ಜೀವನದಲ್ಲಿ ನೆಮ್ಮದಿಯ ಬದುಕಿಗೆ ದೇವರ ಸನ್ನಿಧಿ, ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ. ದೇವಸ್ಥಾನ ನೆಮ್ಮದಿಯ ಸಂಕೇತವಾಗಿದೆ. ದೇವಸ್ಥಾನಗಳ ನಿರ್ಮಾಣದ ಜೊತೆಗೆ ಸ್ಥಳೀಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವವರಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ದೇಗುಲ ಪಾತ್ರ ಮುಖ್ಯ: ದಾನಿ ಎ.ಎನ್. ವೆಂಕಟಕೃಷ್ಣ ಮಾತನಾಡಿ, ಶ್ರೀರಾಘವೇಶ್ವರ ಭಾರತಿ ಸ್ವಾಮಿಗಳು ರಾಮಕಥಾ, ವಿಶ್ವಗೋ ಸಮ್ಮೇಳನ, ರಾಮಸತ್ರ, ಮಹಾಶಿವ ಸತ್ರದಂತಹ ಧಾರ್ಮಿಕ ಕಾರ್ಯಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಮನೋಭಾವ ತುಂಬುವ ಕೆಲಸ ಮಾಡುತ್ತಿದ್ದಾರೆ. ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ದೇವಸ್ಥಾನಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್. ನಾಗಭೂಷಣ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದೇಶ್ವರಪ್ರಸಾದ್, ದಾನಿ ಜಯಮ್ಮ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

