'ವನ್ಯಜೀವಿ ಛಾಯಾಗ್ರಹಣಕ್ಕೆ ಹೆಚ್ಚಿದ ಆದ್ಯತೆ'
ಕನ್ನಡಪ್ರಭ ವಾರ್ತೆ, ಸಾಗರ, ಮಾ.24
ಇತ್ತೀಚಿನ ದಿನಗಳಲ್ಲಿ ಭಾವಾಭಿವ್ಯಕ್ತಿತ್ವವನ್ನು ಸೆರೆ ಹಿಡಿಯುವ ಛಾಯಾಚಿತ್ರಗಾರರ ಸಂಖ್ಯೆ ಕಡಿಮೆಯಾಗಿದ್ದು, ವನ್ಯಜೀವಿ ಛಾಯಾಗ್ರಹಣಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಇದರಿಂದಾಗಿ ಛಾಯಾಚಿತ್ರ ಕ್ಷೇತ್ರ ತನ್ನ ಗಂಭೀರತೆ ಕಳೆದುಕೊಳ್ಳುತ್ತಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಯಾಚಿತ್ರಗಾರ ಬೆಂಗಳೂರಿನ ಬಿ. ಶ್ರೀನಿವಾಸ್ ಹೇಳಿದರು.
ತಾಲೂಕಿನ ಹೆಗ್ಗೋಡಿನ ನೀನಾಸಂ ರಂಗಮಂದಿರದಲ್ಲಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ಹಮ್ಮಿಕೊಂಡಿದ್ದ 'ಫೋಟೋ- ಮಾತು' ಕಾರ್ಯಕ್ರಮದಲ್ಲಿ ಮಾತನಾಡಿದರು.
ಛಾಯಾಚಿತ್ರ ಕ್ಷೇತ್ರವನ್ನು ಆಧುನಿಕ ತಂತ್ರಜ್ಞಾನ ಸ್ಪರ್ಶಿಸದ ಕಾಲಘಟ್ಟದಲ್ಲಿಯೆ ಡಾ. ಡಿ.ವಿ. ರಾವ್ರಂಥವರು ಭಾವಾಭಿವ್ಯಕ್ತಿತ್ವ ಸೆರೆ ಹಿಡಿದು, ಛಾಯಾಚಿತ್ರ ಲೋಕದ ಅಸ್ತಿತ್ವ ಉಳಿಸುವ ಕೆಲಸ ಮಾಡಿದ್ದರು. ಗುರುಗಳ ಮಾರ್ಗದರ್ಶನವಿಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿದ್ದುಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು ಎಂದರು.
ಬದಲಾದ ಕಾಲಘಟ್ಟದಲ್ಲಿ ಯುವ ಛಾಯಾಚಿತ್ರಗಾರರಿಗೆ ನುರಿತ ಛಾಯಾಗ್ರಾಹಕರಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಸಲಾನ್ ಫೋಟೋ ಸ್ಪರ್ಧೆ ಮಾಡಿದ ದಾಖಲೆ ಇಲ್ಲ. ಆದರೆ ಸಾಗರ ಫೋಟೋಗ್ರಾಫಿಕ್ ಸೊಸೈಟಿ ಸಲಾನ್ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ ಎಂದರು.
ಪಕ್ಷಿಗಳ ಛಾಯಾಚಿತ್ರಗಾರ ಎ.ಕೆ. ರಾಜು ಮಾತನಾಡಿ, ಹೊಸದಾಗಿ ಛಾಯಾಚಿತ್ರ ಕ್ಷೇತ್ರ ಪ್ರವೇಶಿಸುವ ಯುವಜನಾಂಗ ಆರಂಭದಲ್ಲಿಯೆ ದೊಡ್ಡಮಟ್ಟದ ಹೆಸರು ತಂದುಕೊಡುವ ಛಾಯಾಚಿತ್ರ ಸೆರೆಹಿಡಿಯುವ ಸಾಹಸಕ್ಕೆ ಕೈಹಾಕದೆ, ಸ್ಥಳೀಯವಾಗಿ ಸಿಗುವ ಪ್ರಾಣಿ, ಪಕ್ಷಿ, ಉದ್ಯಾನವನ ಸೇರಿದಂತೆ ಕ್ರಿಯಾಶೀಲ ಛಾಯಾಚಿತ್ರ ಸೆರೆ ಹಿಡಿಯುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಎಲ್ಲಾ ಕಡೆ ಸೂರ್ಯೋದಯ, ಸೂರ್ಯಾಸ್ತವಾಗುತ್ತದೆ. ಎಲ್ಲ ಕಡೆ ಆಗುವ ಪ್ರಕೃತಿಯ ಈ ಸಹಜ ಚಿತ್ರಣವನ್ನು ಬೇರೆ- ಬೇರೆ ದೃಷ್ಟಿಕೋನದಲ್ಲಿ ಸೆರೆಹಿಡಿಯುವ ಸೃಜನಶೀಲತೆ ಛಾಯಾಚಿತ್ರಗಾರರಿಗೆ ಇರಬೇಕು ಎಂದರು.
ವನ್ಯಜೀವಿ ಛಾಯಾಗ್ರಾಹಕ ಎಚ್.ವಿ. ಪ್ರವೀಣಕುಮಾರ್, ನರಸಿಂಹ ಪ್ರಕಾಶ್, ಎ.ಜಿ. ಲಕ್ಷ್ಮೀನಾರಾಯಣ್, ಉಲ್ಲಾಸ ಶ್ಯಾನಭಾಗ್, ಚಂದ್ರಶೇಖರ್ ಕೆ., ಸತೀಶ್ ಆರ್. ಕೆ.ಎಸ್. ರಾಜಾರಾಮ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

