ಬಿಜೆಪಿ ಸಾಧನೆ ಏನು?
ಶಿವಮೊಗ್ಗ: ಅವತ್ತು ಇಟ್ಟಿಗೆ, ಇವತ್ತು ಕಬ್ಬಿಣ- ಇವೇನು ಹೊಟ್ಟೆಗೆ ಸಂಬಂಧಪಟ್ಟ ವಿಷಯಗಳಲ್ಲ. ಜನರ ಭಾವನೆ ಕೆರಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಭಾಗವಹಿಸದ ಸರ್ಕಾರ ಬರಲು ಸಾಧ್ಯವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು, ದೇಶದ ಸಮಗ್ರತೆಗೆ ಬಿಜೆಪಿ ಕೊಟ್ಟ ಕೊಡುಗೆ ಏನು 1952ರಿಂದ ಈವರೆಗೆ ಜನಸಂಘ-ಬಿಜೆಪಿ ಏನು ಮಾಡಿವೆ ಜನರ ಭಾವನೆ ಕೆರಳಿಸುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ ಎಂದರು.
ಹಣ ಪಾವತಿಸಿದ್ದು ಕಾಂಗ್ರೆಸ್: 5 ವರ್ಷದ ಹಿಂದೆ ರಾಜ್ಯದಲ್ಲಿ ಬಿಜೆಪಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ನಿರುದ್ಯೋಗ ಭತ್ಯೆ ಕೊಡುವುದಾಗಿ ಹೇಳಿತು. ಇದು ಓಟು ಪಡೆಯಲು ಹೇಳಿದ ಸುಳ್ಳು. ದಿನದ 24 ಗಂಟೆ ವಿದ್ಯುತ್ ಕೊಡುವುದಾಗಿ ಹೇಳಿದರು. 5 ವರ್ಷ ಆಡಳಿತ ನಡೆಸಿದರೂ ಸಾಧ್ಯವಾಗಲಿಲ್ಲ. ಪ್ರತಿ ವರ್ಷ 3 ಲಕ್ಷ ಮನೆ ಕೊಡುವುದಾಗಿ ಹೇಳಿದರು. ಆದರೆ ಅಧಿಕಾರದ ಅಂತ್ಯದಲ್ಲಿ ತರಾತುರಿಯಲ್ಲಿ ಒಂದಿಷ್ಟು ಮನೆಗಳನ್ನು ಕೊಟ್ಟರು. ಆದರೆ ಹಣ ಪಾವತಿಸಿದ್ದು ಕಾಂಗ್ರೆಸ್ ಸರ್ಕಾರ. ಇದೇ ರೀತಿ ಬಿಜೆಪಿ ಸರ್ಕಾರವು ತರಾತುರಿಯಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿತು. ಆದರೆ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕರಿಯಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪ ಗೌಡ, ನಗರ ಪಾಲಿಕೆ ಮಹಾಪೌರರಾದ ಖುರ್ಷಿದಾ ಭಾನು, ಮುಖಂಡರಾದ ಬಲ್ಕಿಷ್ ಬಾನು, ಪದ್ಮಾವತಿ ಚಂದ್ರಕುಮಾರ್, ಕಲಗೋಡು ರತ್ನಾಕರ್, ಎನ್. ರಮೇಶ್, ನಗರದ ಮಹದೇವಪ್ಪ, ರುದ್ರೇಶ್, ಎಸ್.ಪಿ. ದಿನೇಶ್, ಎಸ್.ಟಿ. ಹಾಲಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.
ಫ್ಲೆಕ್ಸ್ನಲ್ಲಿ ಫೋಟೋ ಇಲ್ಲದಕ್ಕೆ ಗೊಂದಲ
ವೇದಿಕೆಯ ಹಿಂಭಾಗದಲ್ಲಿ ಹಾಕಿದ್ದ ಫ್ಲೆಕ್ಸ್ನಲ್ಲಿ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರಾದ ಇಸ್ಮಾಯಿಲ್ ಖಾನ್, ಮೀರ್ ಅಜೀಜ್ ಅಹ್ಮದ್, ಖುರ್ಷಿದಾ ಭಾನು ಅವರ ಭಾವಚಿತ್ರ ಇಲ್ಲ. ಆದರೆ ಸಿ.ಎಂ. ಇಬ್ರಾಹಿಂ ಅವರ ಭಾವಚಿತ್ರ ಮಾತ್ರ ಇದೆ ಎಂದು ಕೆಲವು ಕಾರ್ಯಕರ್ತರು ಗದ್ದಲವೆಬ್ಬಿಸಿ ಕೆಲಕಾಲ ಗೊಂದಲ ಮೂಡಿಸಿದರು. ನಂತರ ಭಾಷಣ ಮುಂದುವರಿಸಿದ ಸಚಿವ ಕಿಮ್ಮನೆ ರತ್ನಾಕರ್, ನಮ್ಮ ಮುಂದೆ ಚುನಾವಣೆ ಇದೆ. ಈ ಬಗ್ಗೆ ಯೋಚಿಸೋಣ. ನೂನ್ಯತೆಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದರು.
ಬಾರದ ಕುಮಾರ್ ಬಂಗಾರಪ್ಪ
ಶಿವಮೊಗ್ಗದಲ್ಲಿ ದಿಢೀರನೇ ಪ್ರತ್ಯಕ್ಷವಾಗಿ ಮಧು ಬಂಗಾರಪ್ಪ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಬರಲಿಲ್ಲ. ಸಚಿವ ಕಿಮ್ಮನೆ ಅವರು ತಮ್ಮ ಭಾಷಣದಲ್ಲಿ, ಕುಮಾರ್ ಬಂಗಾರಪ್ಪ ಖಂಡಿತಾ ಪ್ರಚಾರಕ್ಕೆ ಬರುತ್ತಾರೆ. ಅವರು ಈಗ ಮಾಡಿದ ಕೆಲಸವನ್ನು (ಪ್ರತಿಭಟನೆ) 6 ತಿಂಗಳ ಹಿಂದೆ ಮಾಡಬೇಕಿತ್ತು. ಅವರಿಗೆ ಕುಟುಂಬದಲ್ಲಿ ಅನ್ಯಾಯ ಆಗಿದೆ ಎಂಬುದು ಈಗ ಜಗತ್ತಿಗೆ ಗೊತ್ತಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

