ಮಿತಿ ಮೀರಿದ ಹಂದಿಕಾಟ
ಶಿವಮೊಗ್ಗ ನಗರದಾದ್ಯಂತ ಘನತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣ ಹಂದಿಕಾಟ ಮಿತಿ ಮೀರಿದೆ. ನಗರಸಭೆ ಜೀವಂತವಾಗಿದೆಯೋ ಇಲ್ಲವೋ ಎಂಬಂತಾಗಿದೆ. ಎಲ್ಲೆ ನೋಡಿದರೂ ಅಲ್ಲಿ ಹಂದಿಗಳು ಓಡಾಡುತ್ತಿರುವುದು ಕಂಡುಬರುತ್ತಿದೆ. ಶಿವಮೊಗ್ಗ ನಗರದ ರಸ್ತೆಗಳು ಅಭಿವೃದ್ಧಿಯಾದರೆ, ಸರ್ಕಾರಿ ಕಟ್ಟಡಗಳು ಚೆಂದವಾದರೆ ಸಾಲದು ಎಂಬುದನ್ನು ನಗರದ ಜನಪ್ರತಿನಿಧಿಗಳು ಅರಿಯಬೇಕು. ಮೊದಲು ಸ್ವಚ್:್ತೆಗೆ ಆದ್ಯತೆ ಕೊಡಲು ಕ್ರಮಕೈಗೊಳ್ಳಬೇಕು. ವಿಪರೀತವಾಗಿ ಹೆಚ್ಚಿಕೊಂಡಿರುವ ಹಂದಿಗಳು ನಗರದ ಆರೋಗ್ಯ ಹಾಳುಗೆಡುವ ಜೊತೆಗೆ ನಗರದ ಘನತೆಯನ್ನು ಹಾಳು ಮಾಡುತ್ತವೆ. ತಕ್ಷಣವೇ ನಗರಸಭೆ ಹಾಗೂ ಜನಪ್ರತಿನಿಧಿಗಳು ಹಂದಿಕಾಟವನ್ನು ನಿಯಂತ್ರಿಸಲು ಅಗತ್ಯಕ್ರಮಕೈಗೊಳ್ಳಬೇಕು.
ಟಿ ತೀರ್ಥರಾಜ್, ಶಿವಮೊಗ್ಗ
ಸಾರಿಗೆ ಸಿಬ್ಬಂದಿಗೆ ಸೌಜನ್ಯ ಬೇಕು
ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್ ಗಳು ನಿಯಮ ಮೀರಿ ಸಂಚರಿಸುತ್ತಿವೆ. ಅತಿ ವೇಗದಲ್ಲಿ ಸಂಚರಿಸುವ ಬಸ್ಸುಗಳಿಂದ ಪ್ರಯಾಣಿಕರಿಗೂ ಸಂಕಟ, ರಸ್ತೆಯಲ್ಲಿ ಓಡಾಡುವ ಪಾದಚಾರಿ, ವಾಹನ ಸವಾರರೂ ಸಂಕಷ್ಟಪಡುವಂತಾಗಿದೆ. ಅತಿ ವೇಗದ ಜೊತೆಗೆ ಕರ್ಕಷ ಹಾರನ್, ರಾತ್ರಿ ವೇಳೆ ಲೈಟ್ ಡಿಮ್ ಡಿಪ್ ಮಾಡದಿರುವುದು ಸೇರಿದಂತೆ ಅನೇಕ ಕಿರಿಕಿರಿ ಉಂಟಾಗುತ್ತಿದೆ. ಸಾರ್ವಜನಿಕರು ಸಿಡಿದೆದ್ದು ಅನಾಹುತ ಸಂಭವಿಸುವ ಮುನ್ನ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲೀಕರು ತಮ್ಮ ಸಿಬ್ಬಂದಿಯ ವರ್ತನೆ ಬದಲಿಸಲು ಕ್ರಮ ಕೈಗೊಳ್ಳುವುದು ಒಳಿತು.
ಟಿ ಸಿದ್ಧಾರ್ಥ, ಸಾಗರ
ವಾಹನ ಪಾರ್ಕಿಂಗ್ ಬೇಡ
ಶಿವಮೊಗ್ಗ ಶಂಕರಮಠ ರಸ್ತೆ ಅಭಿವೃದ್ಧಿಯಾಯಿತು. ಆದರೆ, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿ ಇಲ್ಲದ ಕಾರಣ ಸಂಚಾರ ಅಸ್ತವ್ಯಸ್ತವಾಗುತ್ತಲೇ ಇರುತ್ತದೆ. ಕೆಲವು ಶೋರೂಂನವರು ಹೊಸ ವಾಹನಗಳನ್ನು ರಸ್ತೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಆ ಜಾಗ ತಮಗೆ ಸೇರಿದ್ದು ಎಂಬಂತೆ ಮಾಡುತ್ತಿದ್ದಾರೆ. ಶೂರೂಂ ಒಳಗೆ ಜಾಗವಿದ್ದರೂ ಶೋರೂಂಗೆ ಬರುವವರ ವಾಹನಗಳನ್ನು ರಸ್ತೆಯಲ್ಲಿ, ಫುಟ್ಪಾತ್ನಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರು, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ತುರ್ತು ನಿಗಾ ವಹಿಸುವ ಅಗತ್ಯವಿದೆ.
ಟಿ ಜಮೀರ್ ಅಹ್ಮದ್, ಟ್ಯಾಂಕ್ ಮೊಹಲ್ಲಾ
ಮಂಡ್ಯ ಪಿಇಎಸ್ಗೆ ವಿಟಿಯು ಕಪ್
ಶಿವಮೊಗ್ಗ: ಇಲ್ಲಿನ ಜೆಎನ್ಎನ್ಸಿಇ ಕ್ರೀಡಾಂಗಣದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯ ಫೈನಲ್ನಲ್ಲಿ ಮಂಡ್ಯದ ಪಿಇಎಸ್ ತಂಡ ವಿಜಯಿಯಾಯಿತು. ಅಂತಿಮ ಪಂದ್ಯದಲ್ಲಿ ಮಂಡ್ಯ ತಂಡವು ಬೆಳಗಾವಿಯ ಜಿಐಟಿ ತಂಡವನ್ನು 16 ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮಂಡ್ಯ ನಿಗದಿತ 30 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ತಂಡದ ಪರ ಎ.ಎಂ. ಕಿರಣ್ (41), ಎಚ್.ಆರ್. ಕಿರಣ್ (28) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಬೆಳಗಾವಿ ತಂಡದ ಪರ ಗೌರವ್ ಥೋರಡ್ 25 ರನ್ ನೀಡಿ 3 ವಿಕೆಟ್ ಪಡೆದರು. ಮಂಡ್ಯ ತಂಡ ನೀಡಿದ ಗುರಿ ಬೆನ್ನಟ್ಟಿದ ಬೆಳಗಾವಿ ತಂಡ 28.3 ಓವರ್ಗಳಲ್ಲಿ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಎ. ಪಾಂಡೆ (40) ಉತ್ತಮ ಆಟ ಪ್ರದರ್ಶಿಸಿದರು. ಮೂರು ವಿಕೆಟ್ ಪಡೆದ ಮಂಡ್ಯದ ಶಮಂತ್ ಯಶಸ್ವಿ ಬೌಲರ್ ಎನಿಸಿದರು. ಮೂರನೇ ಸ್ಥಾನಕ್ಕಾಗಿ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಚಿಕ್ಕಮಗಳೂರು ತಂಡವನ್ನು ಬೆಂಗಳೂರಿನ ಎಂಎಸ್ಆರ್ಐಟಿ ತಂಡ 4 ವಿಕೆಟ್ಗಳಿಂದ ಮಣಿಸಿತು.
ಅರ್ಜಿ ಆಹ್ವಾನ
ಸಾಗರ: ಧಾರವಾಡದ ವಿದ್ಯಾಪೋಷಕ್ ಸಂಸ್ಥೆ 10ನೇ ತರಗತಿ ನಂತರದ ಶಿಕ್ಷಣದ ಮುಂದುವರಿಕೆಗಾಗಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು 2014ರಲ್ಲಿ ಬರೆದಿರುವ, ಕುಟುಂಬದ ವಾರ್ಷಿಕ ವರಮಾನ 70 ಸಾವಿರಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳಬಹುದು. ಅಂತರ್ಜಾಲದ ಅರ್ಜಿಯು ಎಸ್.ಎಸ್.ಎಲ್.ಸಿ. ಪರೀಕ್ಷೆ ಘೋಷಣೆಯಾದ ನಂತರದ ಏಳು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾನ್ಲೆ ಛತ್ರದ ಗ್ರಂಥಾಲಯದಲ್ಲಿ ಪಡೆದುಕೊಳ್ಳಬಹುದು. ಆಸಕ್ತರು ಕೆ.ಎನ್.ಭಟ್ ಮೊ- 9448238679) ಗಣಪತಿ ಹೆನಗೆರೆ- 9449616267, ಕವಲಕೋಡು ವೆಂಕಟೇಶ್ (9844277772) ಇವರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

