ಶಿವಮೊಗ್ಗ

ಅಹಂಕಾರ ಅಪಾಯ: ದಿಲೀಪ್

Published On :

ತರೀಕೆರೆ: ಅಹಂಕಾರ ಎನ್ನುವುದು ಅಪಾಯ. ಅದನ್ನು ಕಳೆದುಕೊಳ್ಳಲು ಆತ್ಮಜ್ಞಾನ, ಬ್ರಹ್ಮನಿಷ್ಠೆ ಮತ್ತು ಚಿತ್ತಶುದ್ಧಿಯಿಂದ ಸಾಧ್ಯ ಎಂದು ಬೆಂಗಳೂರು ಕಲ್ಚರಲ್ ಇಂಡಿಯಾ ಫೌಂಡೇಷನ್ ಸಂಚಾಲಕ ದಿಲೀಪ್ ಬೆಳ್ಳಾವೆ ತಿಳಿಸಿದ್ದಾರೆ. ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರ ದೇವಾಲಯದ ಆವರಣದಲ್ಲಿ ನಡೆದ ಶಂಕರ ಜಯಂತಿ ವಿಶೇಷ ಉಪನ್ಯಾಸದಲ್ಲಿ ಶುದ್ಧ ಶಾಂಕರ ಪ್ರಕ್ರಿಯೆ ಕುರಿತು ಮಾತನಾಡಿದರು. ಶಂಕರರು ವೇದಾಂತ ತತ್ವವನ್ನು ಅತ್ಯಂತ ಸರಳ ರೀತಿಯಲ್ಲಿ ಜನರಿಗೆ ತಲುಪಿಸಿದರು. ಉತ್ತರ ಮೀಮಾಂಸದ ಚಿಂತನೆಗಳನ್ನು ಬಹಳ ಸ್ಪಷ್ಟವಾಗಿ ಎಲ್ಲರಿಗೂ ಆನಂದವಾಗುವಂತೆ ಜನರಿಗೆ ಕೊಟ್ಟಿದ್ದೆ ಶಂಕರರು. ಅದು ಅದ್ಭುತ ಸಾಧನೆ. ಶಂಕರರು ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನ ಬರೆದರು. ದುಃಖ ಶೋಕ ಪ್ರತಿಯೊಬ್ಬರಿಗೂ ಇದೆ. ಮೋಹದಿಂದ ದುಃಖ, ಅದರಿಂದ ಶೋಕ ಎಂದು ತಿಳಿಸಿದ ಅವರು ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನೇ ನೋಡಬೇಕು ಎಂದರು. ಸೂರ್ಯನಾರಾಯಣ ಶರ್ಮ ಮಾತನಾಡಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಅವರು ಉಪಸ್ಥಿತರಿದ್ದರು. ಶ್ರೀವತ್ಸ ಭಜನಾ ಮಂಡಳಿ ವತಿಯಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಮತ್ತು ಜಿ. ನಾರಾಯಣಸ್ವಾಮಿ ಅವರಿಂದ ಶಂಕರ ವಿಜಯ ಪಾರಾಯಣ ಏರ್ಪಡಿಸಲಾಗಿತ್ತು.

ಶಂಕರರಿಂದ ಧರ್ಮ ಪುನರುಜ್ಜೀವನ

ಚಿಕ್ಕಮಗಳೂರು: ಅದ್ವೈತ ಪ್ರತಿಪಾದಕ ಜಗದ್ಗುರು ಶ್ರೀಶಂಕರಚಾರ್ಯರ ಜಯಂತಿ ಮತ್ತು ತತ್ವಜ್ಞಾನಿಗಳ ದಿನಾಚರಣೆ ಮೂರು ದಿನಗಳ ಕಾರ್ಯಕ್ರಮಕ್ಕೆ ನಗರದ ಶಂಕರಮಠದಲ್ಲಿ ಶುಕ್ರವಾರ ಆರಂಭಗೊಂಡಿತು. ಜಯಂತಿ ಅಂಗವಾಗಿ ಬೆಳಗ್ಗೆ ಶ್ರೀ ಶಂಕರಾಚಾರ್ಯರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು. ಸಂಜೆ ನಡೆದ ಸರಳ ಸಮಾರಂಭದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ಗಿರಿಜಾ ರಾಮಸ್ವಾಮಿ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಪ್ರ ನೌಕರರ ಸಂಘದ ಅಧ್ಯಕ್ಷ ಎ.ವಿ. ಅನಂತರಾಮಯ್ಯ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾದಾರ್ಶನಿಕರು ಶ್ರೀ ಶಂಕರ ಭಗವತ್ಪಾದರು ಎಂದರು. ಶ್ರೀ ಶಂಕರಾಚಾರ್ಯರ ಬದುಕು ಮತ್ತು ಸಂದೇಶಗಳ ಕುರಿತು ಶಿಲ್ಪಿ ಜಯಣ್ಣಾಚಾರ್ ಮಾತನಾಡಿದರು. ನಿವೃತ್ತ ಶಿಕ್ಷಕಿ ವಿಜಯಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು. ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೆ.ಆರ್. ದತ್ತಾತ್ರಿ ಸ್ವಾಗತಿಸಿದರು. ಶಂಕರಮಠದ ಆಡಳಿತಾಧಿಕಾರಿ ಅನಂತರಾಮು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.