ರಾಮಾನುಜಾಚಾರ್ಯರ ಜಯಂತಿ ಇಂದು
ಶಿವಮೊಗ್ಗ: ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಮೇ 4ರಂದು ಬೆಳಗ್ಗೆ 10ಕ್ಕೆ ಭಗವದ್ ಶ್ರೀರಾಮಾನುಜಾಚಾರ್ಯರ ಜಯಂತಿ ಏರ್ಪಡಿಸಲಾಗಿದೆ. ನವುಲೆ ವೆಂಕಟೇಶ್ವರ ದೇವಾಲಯದ ಪ್ರಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮುದ್ರಾ ತರಬೇತಿ ನಾಳೆಯಿಂದ: ಹನುಮಾನ್ ಜಯಂತಿ ಪ್ರಯುಕ್ತ ಕ್ರೀಡಾ ಭಾರತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೇ 5 ರಿಂದ 10 ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಉಚಿತ ಮುದ್ರಾ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಬೆಳಗ್ಗೆ 6.30ರಿಂದ 7.45ರವರೆಗೆ ಶಿಬಿರ ನಡೆಯಲಿದ್ದು, ಯು.ಆರ್.ಶ್ರೀನಿವಾಸಮೂರ್ತಿ ನಡೆಸಿಕೊಡುವರು. ಮಾಹಿತಿಗೆ ಮೊ. 9886040370 ಸಂಪರ್ಕಿಸಬಹುದು.
ಶಿಕ್ಷಕರ ಅರ್ಹತಾ ಪರೀಕ್ಷೆ: ಉಚಿತ ಕಾರ್ಯಾಗಾರ
ಶಿವಮೊಗ್ಗ: ಸಿಎನ್ ಕೋಚಿಂಗ್ ಸೆಂಟರ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಮೇ 4, 5ರಂದು ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗೆ ಮೊ. 9901923273 ಸಂಪರ್ಕಿಸಿ.
ಡಾ.ಅಂಬೇಡ್ಕರ್ ಜಯಂತಿ
ಶಿವಮೊಗ್ಗ: ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕಿನ ನಿದಿಗೆ ಹೋಬಳಿ ಲಕ್ಕಿನಕೊಪ್ಪ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಇತ್ತೀಚೆಗೆ ಆಚರಿಸಲಾಯಿತು. ಜಿಲ್ಲಾ ಸಂಘಟನಾ ಸಂಯೋಜಕ ಚೌಡಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮದ್ ನಾಸಿರ್, ಉಪಾಧ್ಯಕ್ಷರಾದ ಯಶೋದಮ್ಮ ಮುಖ್ಯ ಅತಿಥಿಗಳಾಗಿದ್ದರು ಎಂದು ಸಮಿತಿ ತಿಳಿಸಿದೆ.
ಬೇಸಿಗೆ ಶಿಬಿರ ಮುಕ್ತಾಯ
ಶಿವಮೊಗ್ಗ: ಜ. ದಾರುಕಾಚಾರ್ಯ ಸೇವಾ ಸಮಿತಿ ಹೊಳಲೂರು ಮತ್ತು ಸೂಗೂರಿನಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವನ್ನು ಸೂಗೂರಿನಲ್ಲಿ ಏರ್ಪಡಿಸಿತ್ತು. ಅರಕೆರೆ ಕರಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಸಿ.ಎಂ. ಪಂಚಾಕ್ಷರಯ್ಯ ಮಾತನಾಡಿದರು. ಸೇವಾ ಸಮಿತಿ ಕಾರ್ಯದರ್ಶಿ ಎಸ್.ಎಂ. ಕಾಶಿನಾಥ್ ಸ್ವಾಗತಿಸಿದರು. ಶಿಬಿರ ಸಹಾಯಕಿ ನಾಗರತ್ನ ವಂದಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

