ಶಿವಮೊಗ್ಗ

ರಕ್ತದಾನ ಶಿಬಿರ 11ರಂದು

Published On :

ಸೊರಬ:  ಶ್ರೀಸ್ವಾಮಿ ವಿವೇಕಾನಂದರ 151ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಮೇ 11ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಪಟ್ಟಣದ ಲಯನ್ಸ್ ಕಲ್ಯಾಣ ಮಂದಿರದಲ್ಲಿನ ಶಿಬಿರವನ್ನು ವಾಲ್ಮೀಕಿ ಗ್ರಾಮಾಭಿವೃದ್ಧಿ ಟ್ರಸ್ಟ್, ಸಾಗರದ ಸರ್ವಹಿತ ಟ್ರಸ್ಟ್, ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಸೊರಬ, ಜೆಸಿಐ ವೈಜಯಂತಿ, ನಮ್ಮೂರು ಸಮುದಾಯ ಅಭಿವೃದ್ಧಿ ಸಂಸ್ಥೆ, ರಾಷ್ಟ್ರೋತ್ಥಾನ ರಕ್ತನಿಧಿ ಬೆಂಗಳೂರು ಸಂಯುಕ್ತವಾಗಿ ಆಯೋಜಿಸಿದೆ. ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನಾಗೇಂದ್ರಪ್ಪ ಉದ್ಘಾಟಿಸಲಿದ್ದಾರೆ. ಮಾಹಿತಿಗೆ ಮೊ: 9880808847, 9902025607, 9902874692, 9901596443 ಸಂಪರ್ಕಿಸಿ, ಸಹಕರಿಸಬೇಕು ಎಂದು ಕೋರಲಾಗಿದೆ.
ಪಂಕ್ತಿಭೇದ: ಧರಣಿ ನಾಳೆ
ಶಿವಮೊಗ್ಗ: ಉಡುಪಿಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಪಂಕ್ತಿಬೇದ ಆಚರಣೆ ವಿರೋಧಿಸಿ ಭಾರತ ಕಮ್ಯೂನಿಷ್ಟ್ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿಯು ಮೇ 5ರಂದು ನಗರದ ಡಿಸಿ ಕಚೇರಿ ಎದುರು ಧರಣಿ ಆಯೋಜಿಸಿದೆ. ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಎಂದು ಶಿವಶಂಕರ್ ತಿಳಿಸಿದ್ದಾರೆ.


ಕೈ ಕೊಟ್ಟ ಇಂಟರ್ನೆಟ್: ಪರದಾಟ


ನರಸಿಂಹರಾಜಪುರ: ಇಲ್ಲಿನ ಎಸ್ಬಿಎಂ ಬ್ಯಾಂಕ್ನಲ್ಲಿ ಇಂಟರ್ನೆಟ್ ಕೈಕೊಟ್ಟಿದ್ದರಿಂದ ಬ್ಯಾಂಕಿನ ವ್ಯವಹಾರ ಸ್ಥಗಿತಗೊಂಡು ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು. ಬುಧವಾರ ಬೆಳಗ್ಗೆಯಿಂದಲೇ ಬ್ಯಾಂಕಿನಲ್ಲಿ ಇಂಟರ್ನೆಟ್ಟ್ ಸಮಸ್ಯೆ ಉಂಟಾಗಿದ್ದು, ಗ್ರಾಹಕರು ಮಧ್ಯಾಹ್ನದವರೆಗೂ ವ್ಯವಹಾರ ಮಾಡಲು ಸಾಧ್ಯವಾಗಿರಲಿಲ್ಲ. ಮಧ್ಯಾಹ್ನ 3ರ ನಂತರ ಇಂಟರ್ನೆಟ್ ವ್ಯವಸ್ಥೆ ಸರಿಯಾಗಿದ್ದು, ನಂತರ ವ್ಯವಹಾರ ಮುಂದುವರಿಸಲಾಯಿತು. ಗುರುವಾರ ಕಾರ್ಮಿಕರ ದಿನಾಚರಣೆ ಹಾಗೂ ಶುಕ್ರವಾರ ಬಸವ ಜಯಂತಿ ಪ್ರಯುಕ್ತ ಬ್ಯಾಂಕಿಗೆ ರಜೆಯಿತ್ತು. ಶನಿವಾರ ಗ್ರಾಹಕರು ಬ್ಯಾಂಕಿಗೆ ಬಂದರೆ ಮತ್ತೆ ಇದೇ ಸಮಸ್ಯೆ ಮುಂದುವರಿದಿದ್ದು, ಮಧ್ಯಾಹ್ನದವರೆಗೂ ಬಿಎಸ್ಎನ್ಎಲ್ ಅಧಿಕಾರಿಗಳು ಪ್ರಯತ್ನಪಟ್ಟರೂ ಸರಿಯಾಗಲಿಲ್ಲ. ಶನಿವಾರ ಬ್ಯಾಂಕಿಗೆ ಅರ್ಧ ದಿನ ಮಾತ್ರ ವ್ಯವಹಾರ ಇದ್ದು, ಮಧ್ಯಾಹ್ನದ ನಂತರ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲಾಗುತ್ತದೆ. ಭಾನುವಾರ ಬ್ಯಾಂಕಿಗೆ ರಜೆ. ಇದರಿಂದ ಎಸ್ಬಿಎಂ ಗ್ರಾಹಕರು ಪರದಾಡುವಂತಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.