'ಬಿಜೆಪಿ ಜನಪರ ಯೋಜನೆಗಳೇ
ಸೊರಬ: ಬಿ.ಎಸ್.ಯಡಿಯೂರಪ್ಪ ಗೆಲವಿಗೆ ಅವರ ಅಭಿವೃದ್ಧಿ ಪರ ಕಾರ್ಯಕ್ರಮ, ಕಾರ್ಯಕರ್ತರ ಶ್ರಮ ಕಾರಣ. ಜನತೆ ದೇಶಕ್ಕೆ ಸಮರ್ಥ ನಾಯಕತ್ವವನ್ನು ಬಯಸಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪನವರ ಗೆಲವು ರಾಜ್ಯಕ್ಕೆ ತಂದ ಗೆಲವು ಎಂದು ಮಾಜಿ ಶಾಸಕ ಹಾಲಪ್ಪ ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ಗೆಲವಿನ ವಿಜಯೋತ್ಸವ ಆಚರಿಸಿದ ಅವರು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ರಂಗನಾಥ ದೇಗುಲದ ಎದುರು ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ಹಾಲಿ ಸೊರಬ ಕ್ಷೇತ್ರದ ಶಾಸಕರು ಪ್ರಸ್ತುತ ಕೆರಳಿ ಕೆಂಡವಾಗಿದ್ದಾರೆ, ನಾವು ನೀರು ಹಾಕಿ ಮುಂದಿನ ವೇಳೆ ತಣಿಸೋಣ ಎಂದು ಕುಹಕವಾಡಿದ ಅವರು, ಸೊರಬ ಜನತೆ ವಿರೋಧ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿರುವ ಹಿನ್ನೆಲೆಯಲ್ಲಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದೆ ವೇಳೆ ಪಟ್ಟಣದ ಮುಖ್ಯರಸ್ತೆ ಅವ್ಯವಸ್ಥೆ, ಶಾಸಕರ ನಿಷ್ಕ್ರಿಯ ಚಟುವಟಿಕೆಗಳ ಕುರಿತಂತೆ ಕಿಡಿಕಾರಿ, ಈ ರಸ್ತೆ ಮಳೆಗಾಲದಲ್ಲಿ ಕೆರೆಬೇಟೆ ಮಾಡಲು ಪ್ರಶಸ್ತವಾಗಿದೆ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ ಮತ ಎಣಿಕೆ ವೀಕ್ಷಣೆ ಹಿನ್ನೆಲೆಯಲ್ಲಿ ಪಟ್ಟಣ ಬೀದಿಗಳು ಬಿಕೋ ಎನ್ನುತ್ತಿತ್ತು. ಬೆಳಗ್ಗೆಯಿಂದಲೇ ವ್ಯವಹಾರ, ವಹಿವಾಟು ಬದಿಗಿಟ್ಟು ದೂರದರ್ಶನದ ಮುಂದೆ ಕುತೂಹಲದಿಂದ ಸಮಯ ಕಳೆದ ಜನತೆ ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗುವ ತನಕವೂ ಜಾಗಬಿಟ್ಟು ಕದಲಲಿಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಬಿಜೆಪಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೊರಬಂದು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಲೂಕಿನ ಹೋಬಳಿ ಕೇಂದ್ರಗಳಾದ ಚಂದ್ರಗುತ್ತಿ, ಜಡೆ, ಆನವಟ್ಟಿ, ಉಳವಿ, ಕುಪ್ಪಗಡ್ಡೆ ಗ್ರಾಮಗಳಲ್ಲದೆ, ಅನೇಕ ಗ್ರಾಮಾಂತರ ಪ್ರದೇಶಗಳಲ್ಲೂ ಸಂಭ್ರಮಾಚರಣೆ ನಡೆಯಿತು. ಪಟ್ಟಣದಲ್ಲಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.
ವಿಜಯೋತ್ಸವದ ಬಹಿರಂಗ ಸಭೆಯಲ್ಲಿ ಪಕ್ಷ ಪ್ರಮುಖರಾದ ಎಂ.ಆರ್.ಪಾಟೀಲ್, ಪಾಣಿರಾಜಪ್ಪ, ಎಂ. ನಾಗಪ್ಪ ವಕೀಲ್, ಚಿಕ್ಕಾವಲಿ ನಾಗರಾಜಗೌಡ, ಶಿವಯೋಗಿ, ಡಾಕಪ್ಪ ವಕೀಲರು, ಉಮೇಶ್ ಉಡುಗಣಿ, ಗಜಾನನರಾವ್, ಜಿಪಂ ಸದಸ್ಯರಾದ ಹುನವಳ್ಳಿ ಗಂಗಾಧರಪ್ಪ, ಗುರುಕುಮಾರ್ ಪಾಟೀಲ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

