ತುಮಕೂರು

'ವಲಸಿಗರಿಗೆ ಟಿಕೆಟ್ ಬೇಡ'

Published On :

ಕ.ಪ್ರ. ವಾರ್ತೆ   ಚಿಕ್ಕನಾಯಕನಹಳ್ಳಿ   ಏ.5
ಪಕ್ಷಾಂತರಿಗಳಿಗೆ ಟಿಕೆಟ್ ನೀಡುವುದನ್ನು ವಿರೋಧಿಸುವ ಸಲುವಾಗಿ ಒಗ್ಗಟ್ಟು ಪ್ರದರ್ಶಿಸಲು ಕರೆದಿದ್ದ ಸಭೆಯಲ್ಲಿ ಪರಸ್ಪರ ತಳ್ಳಾಟ ನೂಕಾಟದಿಂದಾಗಿ ಗೊಂದಲದ ವಾತಾವರಣ ಉಂಟಾಯಿತು.
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಪರಸ್ಪರ ನಂಬಿಕೆಯಿಲ್ಲ. ಯಾರನ್ನು ಯಾರು ನಂಬುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಸಭೆಯ ವೈಖರಿ ಸಾಕ್ಷಿಯಾಗಿತ್ತು.  
ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣರಾಗುತ್ತಿದ್ದು, ಹೊರಗಿನವರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಕಾಂಗ್ರೆಸ್ಸಿಗರ ಅಸಹನೆಗೆ ಕಾರಣವಾಗಿದೆ. ಜೆಡಿಎಸ್‌ನಿಂದ ವಲಸೆ ಬಂದ  ಸಾಸಲು ಗೊಲ್ಲರಹಟ್ಟಿಯ ಸತೀಶ್‌ಕುಮಾರ್‌ಗೆ ಟಿಕೆಟ್ ನೀಡಲಾಗುತ್ತದೆ ಎಂಬ ವಿಷಯ ಮೂಲ ಕಾಂಗ್ರೆಸ್ಸಿಗರನ್ನು ಕೆರಳಿಸಿದೆ.
ಇದನ್ನು ತೀವ್ರವಾಗಿ ಖಂಡಿಸಬೇಕೆಂದು ಸಭೆ ಕರೆದು ಪರಸ್ಪರ ಕೈಕೈಮಿಲಾಯಿಸುವ ಹಂತ ತಲುಪಿದ್ದು, ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಒಂದು ನಿರ್ದಿಷ್ಟ ನಾಯಕತ್ವವಿಲ್ಲದಿರುವುದು ಕಾರಣ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.  ಡಿಸಿಸಿ ಸದಸ್ಯರಾದ ಸಿ.ಎ.ರಮೇಶ್, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಸೀಮೆಎಣ್ಣೆ ಕೃಷ್ಣಯ್ಯ, ಸಿ.ಬಸವರಾಜು, ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಕೆ.ಜಿ.ಕೃಷ್ಣೇಗೌಡ, ಸಿ.ಕೆ.ಘನ್ನಿಸಾಬ್, ವಾಸು ಮತ್ತಿತರರು ಪಕ್ಷಾಂತರಿಗಳಿಗೆ ಟಿಕೆಟ್ ನೀಡುವುದನ್ನು ಖಂಡಿಸಿದರು. ಅಲ್ಲಿಯವರಗೆ ಎಲ್ಲವೂ ಸರಿದಾರಿಯಲ್ಲೇ ನಡೆಯುತ್ತಿತ್ತು.   ಈ ಮಧ್ಯೆ ಸಂತೋಷ್ ಜಯಚಂದ್ರ ಬೆಂಬಲಿಗರು ಸಂತೋಷ್‌ರವರಿಗೆ ಟಿಕೆಟ್ ನೀಡದಿದ್ದರೆ ನಾವು ಪಕ್ಷೇತರವಾಗಿ ನಿಲ್ಲಿಸುತ್ತೇವೆ ಎಂಬ ಹೇಳಿಕೆ ಮುಖಂಡರನ್ನು ಕೆರಳಿಸಿತು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ತಳ್ಳಾಟ ನೂಕಾಟ ಪ್ರಾರಂಭಿಸಿದರು. ಈ ಹಂತದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ಯಾರಿಗು ತಿಳಿಯದಾಯಿತು. ಕೆಲಹೊತ್ತಿನ ನಂತರ ಪರಿಸ್ಥಿತಿ ತಿಳಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.