ಸರಗಳ್ಳನಿಗೆ ಧರ್ಮದೇಟು!
ಕ.ಪ್ರ.ವಾರ್ತೆ ಕುಣಿಗಲ್ ಏ.19
ಪಾನಿಪೂರಿ ಮೆಲ್ಲುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ ಚಿನ್ನದ ಸರ ದೋಚಲು ಯತ್ನಿಸಿದ ಸರಗಳ್ಳನನ್ನು ಸಾರ್ವಜನಿಕರು ಕಳ್ಳನ ಬೆದರಿಕೆಗೂ ಜಗ್ಗದೆ ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಶುಕ್ರವಾರ ಸಂಜೆ ಪಟ್ಟಣದ ಜನನಿಬಿಡ ಪ್ರದೇಶವಾದ ಹಳೇ ರಾ.ಹೆ. 48ರ ಮುಖ್ಯರಸ್ತೆಯ ಎಸ್‌ಬಿಎಂ ಬ್ಯಾಂಕ್ ಮುಂಭಾಗದ, ರಸ್ತೆಬದಿಯಲ್ಲಿನ ಪಾನಿಪೂನಿ ಅಂಗಡಿಯಲ್ಲಿ ಮಹಿಳೆಯೊಬ್ಬರು ಪಾನಿಪೂರಿ ಮೆಲ್ಲುತ್ತಿದ್ದರು. ಆ ಸಂದರ್ಭದಲ್ಲಿ ಪಲ್ಸರ್ ಬೈಕ್‌ನಲ್ಲಿ ತಲೆಗೆ ಹೆಲ್ಮೇಟ್ ಧರಿಸಿ ಆಗಮಿಸಿದ್ದ ಮೂವರು ಯುವಕರ ಪೈಕಿ ಒಬ್ಬಾತ ಕೆಳೆಗಿಳಿದು ಮಹಿಳೆಯಗಮನ ಬೇರೆಡೆ ಸೆಳೆದು ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಸರಗಳ್ಳ ಮುಂದಾದಾಗ, ಮಹಿಳೆ ಕೂಗಿಕೊಂಡಿದ್ದಾರೆ. ಆಗ ಸಹಾಯಕ್ಕೆ ಸಾರ್ವಜನಿಕರು ಧಾವಿಸಿದ್ದಾರೆ. ಇದರಿಂದ ಗಾಬರಿಗೊಂಡ ಸರಗಳ್ಳನ ಸಹಚರರು ಬೈಕ್‌ನೊಂದಿಗೆ ಪರಾರಿಯಾದರೆ, ಸರ ಕಸಿದ ದುಷ್ಕಮಿಯನ್ನು ಸಾರ್ವಜನಿಕರು ಹಿಡಿಯಲು ಯತ್ನಿಸಿದ್ದಾರೆ.
ಆಗ ಸರಗಳ್ಳ ಸಾರ್ವಜನಿಕರಿಗೆ ಲಾಂಗ್ ತೋರಿಸಲು ಬೆದರಿಸಲು ಯತ್ನಿಸಿದ, ಇದರಿಂದ ಕ್ರೋಧಗೊಂಡ ಸಾರ್ವಜನಿಕರು ಒಮ್ಮೆಲೆ ಸರಗಳ್ಳನ ಮೇಲೆರೆಗಿ ಹಿಡಿದು, ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರ ವಶಕ್ಕೆ ನೀಡಿ, ಬೈಕ್‌ನಲ್ಲಿ ಇವರ ಸಹಚರರು ತೆರಳಿದ ಮಾಹಿತಿ ಪೊಲೀಸರಿಗೆ ನೀಡಿದರು. ಪೊಲೀಸರ ವಶದಲ್ಲಿರುವ ಸರಗಳ್ಳರು ಬೆಂಗಳೂರು ಕಲಾಸಿಪಾಳ್ಯದ ಪವನ್, ರಾಜೇಶ್, ಗಿರೀಶ್ ಎಂದು ಗುರುತಿಸಲಾಗಿದೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

