ತುಮಕೂರು

ಸುದ್ದಿ ಸಂಕ್ಷೇಪ

Published On :

ಎಚ್‌ಡಿಕೆ ಪಾವಗಡ ಭೇಟಿ ಮುಂದೂಡಿಕೆ
ಪಾವಗಡ:
ಏ.20 ರಂದು ನಿಗದಿಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾವಗಡ ಭೇಟಿ ಮುಂದೂಡಲಾಗಿದೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು. ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶನಿವಾರ ತುಮಕೂರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಆದರೆ, ಅನಿವಾರ್ಯ ಕಾರಣದಿಂದ ಕಾರ್ಯಕ್ರಮ ಶನಿವಾರ ರದ್ದಾಗಿದ್ದು ಪ್ರವಾಸದ ದಿನಾಂಕ ಮುಂದೂಡಲಾಗಿದೆ. ಪಾವಗಡಕ್ಕೆ ಆಗಮನದ ಬಗ್ಗೆ ಇನ್ನೂ ಜೆಡಿಎಸ್ ರಾಜ್ಯ ಘಟಕದ ಮೂಲಗಳಿಂದ ಯಾವುದೇ ಸ್ವಷ್ಟ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.

ಚಂದ್ರಕಾಂತ್ ಕಾಡೆ ವೀಕ್ಷಕ
ಚಿಕ್ಕನಾಯಕನಹಳ್ಳಿ:
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರನ್ನಾಗಿ ಚಂದ್ರಕಾಂತ್ ಕಾಡೆ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣಾ ಸಂಬಂಧ ಏನಾದರು ಆಕ್ಷೇಪಣೆ ಮತ್ತು ಸಲಹೆಗಳಿದ್ದಲ್ಲಿ ಚಂದ್ರಕಾಂತ್ ಕಾಡೆ ಅವರನ್ನು ಪ್ರತಿದಿನ ಸಂಜೆ 4.00 ಗಂಟೆಯಿಂದ 5.00ಗಂಟೆಯವರಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.ಮೊ- 8277310941 ಇಲ್ಲಿಗೆ  ಸಂಪರ್ಕಿಸಬಹುದು.  

ದಲಿತರ ಜಮೀನು ಅತಿಕ್ರಮಣ: ಖಂಡನೆ
ಚಿಕ್ಕನಾಯಕನಹಳ್ಳಿ:
ಇಲ್ಲಿನ ಕಂದಿಕೆರೆ ಹೋಬಳಿ ಎಂ.ಹೆಚ್.ಕಾವಲು ಸರ್ವೆ ನಂಬರ್ 33ರಲ್ಲಿ  ನರಸಿಂಹಯ್ಯ ಎಂಬುವವರು ಸುಮಾರು 40 ವರ್ಷಗಳಿಂದ ಸಾಗುವಳಿ ಮಾಡಿ, ನಿಧನ ಹೊಂದಿದ ತರುವಾಯ ಆತನ ಹೆಂಡತಿ ಚಂದ್ರಮ್ಮ ಸದರಿ ಜಮೀನು ನೋಡಿಕೊಳ್ಳುತ್ತಿದ್ದರು.
ಆದರೆ, ಇತ್ತೀಚೆಗೆ ತಾಲೂಕು ಭೂ ಮಂಜೂರಾತಿ ಸಮಿತಿ, ಕಂದಾಯ ಇಲಾಖೆಯವರ ವರದಿಯನ್ನಾಧರಿಸಿ, ನರಸಿಂಹಯ್ಯನ ಪತ್ನಿ ಚಂದ್ರಮ್ಮನಿಗೆ 3-19 ಗುಂಟೆ ಜಮೀನನ್ನು ಮಂಜೂರು ಮಾಡಿ, ಸಾಗುವಳಿ ಪತ್ರವನ್ನೂ ನೀಡಿರುತ್ತಾರೆ.  ಆದರೆ, ಈ ಜಮೀನನ್ನು ಅತಿಕ್ರಮಣ ಮಾಡುವ  ಸಂಬಂಧ  ಮೊದಲಿನಿಂದಲೂ ಕಿರುಕುಳ ನೀಡುತ್ತಿದ್ದ ಮಹಮದ್ ಖಲಂದರ್ ಎಂಬ ವ್ಯಕ್ತಿ ಏ.19ರಂದು ಏಕಾಏಕಿ ದಲಿತ ಚಂದ್ರಮ್ಮನಿಗೆ ಸೇರಿದ ಜಮೀನನ್ನು ಜೆಸಿಬಿ ಯಂತ್ರದ ಮೂಲಕ ಉದಿ-ಬದು ಮಾಡಿಸಲು ಮುಂದಾಗಿದ್ದಾನೆ. ಈ ನಿಟ್ಟಿನಲ್ಲಿ ಚಂದ್ರಮ್ಮನ ತಮ್ಮ ಗೋವಿಂದರಾಜು, ದಲಿತ ಸಂಘಟನೆ ಮಲ್ಲಿಕಾರ್ಜುನ ಮುಂತಾದವರು ಖಲಂದರ್ ವರ್ತನೆ ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಮಹಮದ್ ಖಲಂದರ್ ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.