ತುಮಕೂರು

ಕಾಂಗ್ರೆಸ್‌ಗೆ ಅಹಿಂದ ಬೆಂಬಲ

Published On :

ತಿಪಟೂರು: ಅಹಿಂದ ಮುಖಂಡ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ತಾಲೂಕು ಅಹಿಂದ ಮುಖಂಡ ಸೂರ್ಯಪ್ರಕಾಶ್ ಕೋಲಿ ತಿಳಿಸಿದ್ದಾರೆ.  ಯಾವುದೇ ಆಮಿಷಗಳಿಗೆ ಒಳಗಾಗದೆ ಅಹಿಂದ ವರ್ಗವು ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿಯವರನ್ನು  ಬೆಂಬಲಿಸುವ ಮುಖಾಂತರ ಅಹಿಂದ ನೇತಾರ ಸಿದ್ದರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಅವಿರತ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಇಂದು ಕಾಂಗ್ರೆಸ್ ರೋಡ್ ಶೋ
ತುಮಕೂರು:  ನಗರ ಯುವ ಕಾಂಗ್ರೆಸ್ ವತಿಯಿಂದ ಏ.28 ರಂದು ಭಾನುವಾರ ಸಂಜೆ 5 ಗಂಟೆಯಿಂದ ರೋಡ್ ಶೋ ನಡೆಸಲಾಗುವುದು. ತುಮಕೂರು ನಗರ ಪ್ರಮುಖ ರಸ್ತೆಗಳಾದ ಬಿ.ಹೆಚ್. ರಸ್ತೆಯ ಎಸ್‌ಐಟಿ ಕಾಲೇಜಿನ ಮುಖ್ಯ ಗೇಟ್‌ನಿಂದ ಗಂಗೋತ್ರಿ ರಸ್ತೆ ಮಾರ್ಗವಾಗಿ ಎಸ್‌ಐಟಿ, ಎಸ್.ಎಸ್. ಪುರಂ, ವಿದ್ಯಾನಿಕೇತನ ಶಾಲೆಯ ಮುಂಭಾಗದಿಂದ ಸಿಎಸ್‌ಐ ಲೇಔಟ್‌ನಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಗುಂಚಿಚೌಕ ಸರ್ಕಲ್‌ನ ಯುವ ಕಾಂಗ್ರೆಸ್ ಕಚೇರಿ ಬಳಿ ಮುಕ್ತಾಯಗೊಳ್ಳಲಿದೆ.

ಕೆಜೆಪಿಯಿಂದ ಕೀಳು ರಾಜಕೀಯ: ಆರೋಪ
ಚಿಕ್ಕನಾಯಕನಹಳ್ಳಿ: ಪಟ್ಟಣದ ಬಿಜೆಪಿ ಕಾರ್ಯಾಯದ ಮೇಲೆ ಕೆಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಪ್ರಚಾರದ ಬಲೂನು ಹಾರಿಸುವ ಮೂಲಕ ಗೂಂಡಾ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಿಲಿಟರಿ ಶಿವಣ್ಣ ಆರೋಪಿಸಿದ್ದಾರೆ. ಪಟ್ಟಣದ ತಾಲೂಕು ಪಂಚಾಯ್ತಿ ಕಾರ್ಯಾಲಯದ ಮುಂದಿರುವ ಕಟ್ಟಡದಲ್ಲಿ ಸುಮಾರು ನಾಲ್ಕು ವರ್ಷಗಳಿಂದಲು ಬಿಜೆಪಿ ಶಾಶ್ವತ ಕಚೇರಿಯನ್ನು ಹೊಂದಿದೆ. ಇಂದು ಏಕಾಏಕಿ ಕೆಜೆಪಿಯವರು ತಮ್ಮ ನಾಯಕ ಬಿ.ಎಸ್.ಯಡಿಯೂರಪ್ಪನವರ ಭಾವಚಿತ್ರವಿರುವ ಬಲೂನನ್ನು ತಂದು ಕಟ್ಟಿ ತಮ್ಮ ಕೀಳು ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. ಇನ್ನು ಚುನಾವಣೆ ಮುಗಿದು ಫಲಿತಾಂಶವೇ ಬಂದಿಲ್ಲ, ಈಗಲೇ ಹೀಗಾದರೆ ಇನ್ನು ಚುನಾವಣೆಯಲ್ಲಿ ಆಯ್ಕೆಯಾದರೆ ಏನು ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಸಂಬಂಧ ಪಟ್ಟಇಲಾಖೆ ಕೂಡಲೇ ಕೆಜೆಪಿ ಪ್ರಚಾರ ಬಲೂನನ್ನು ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.