ತುಮಕೂರು

ಸರ್ಕಾರಿ ನೌಕರರ ಆಕ್ರೋಶ

Published On :

ತುಮಕೂರು: ಚುನಾವಣೆ ಸಂಬಂಧ ಆಗಮಿಸಿದ್ದ ಸರ್ಕಾರಿ ನೌಕರರಿಗೆ ಕನಿಷ್ಠ ಸೌಲಭ್ಯ ನೀಡದೇ ಇರುವುದನ್ನು ವಿರೋಧಿಸಿ ನೌಕರರು ಪ್ರತಿಭಟನೆ ಮಾಡಿದ ಘಟನೆ ನಗರದ ಪ .ಪೂ. ಕಾಲೇಜಿನಲ್ಲಿ ಆವರಣದಲ್ಲಿ ನಡೆಯಿತು.
ಸೋಮವಾರ ಬೆಳಗ್ಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು 2 ಸಾವಿರಕ್ಕೂ ಅಧಿಕ ಸಿಬ್ಬಂದಿ ಚುನಾವಣೆಯ ತರಬೇತಿಗೆಂದು ಬಂದಿದ್ದರು. ಬೆಳ ಬೆಳಿಗ್ಗೆ ತರಬೇತಿಗೆ ಹಾಜರಾದ ಸಿಬ್ಬಂದಿಗೆ ಯಾವುದೇ ಕನಿಷ್ಠ ಸೌಲಭ್ಯಗಳನ್ನ ನೀಡದೇ ಇರುವುದು ಇವರನ್ನ ಆಕ್ರೋಶಭರಿತರನ್ನಾಗಿ ಮಾಡಿತ್ತು. ಸಂಜೆ ನಾಲ್ಕು ಗಂಟೆಯಾದರೂ ನೀರಿಲ್ಲ. ತಿಂಡಿ, ಕಾಫಿ, ಊಟ ಯಾವ ವ್ಯವಸ್ಥೆಯನ್ನು ಮಾಡಿಲ್ಲವೆಂದು ಆಕ್ರೋಶಗೊಂಡು ಪ್ರತಿಭಟನೆಗೆ ಇಳಿದಿದರು.
ನಂತರ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದರು. ಸ್ಥಳಕ್ಕೆ ತಹಸೀಲ್ದಾರ್ ಬಂದು ಆದ ಪ್ರಮಾದಕ್ಕೆ ಕ್ಷಮೆಯಾಚಿಸಿದರೂ ಕೇಳದ ಸಿಬ್ಬಂದಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಕೊನೆಗೆ ಕಂದಾಯ ಇಲಾಖೆಯವರು ಸ್ವಲ್ಪಮಟ್ಟಿನ ಆಹಾರ ಪೂರೈಕೆಗೆ ಮುಂದಾದರರು. ರೊಚ್ಚಿಗೆದ್ದ ಸಿಬ್ಬಂದಿ ಊಟ ತಂದಿದ್ದ ಹುಡುಗನೊಬ್ಬನಿಗೆ ಥಳಿಸಿಯೇ ಬಿಟ್ಟರು. ಕೂಡಲೇ ಕೆಲ ಸಿಬ್ಬಂದಿ ಹಾಗೂ ಪೊಲೀಸರು ಅವನನ್ನು ರಕ್ಷಿಸಿ ಹೊರಕಳುಹಿಸಿದರು.
ನಂತರ ಮಾತನಾಡಿದ ಸಿಬ್ಬಂದಿ ಮಹಿಳೆಯರಿಗೆ ಶೌಚಲಯದ ವ್ಯವಸ್ಥೆ ಇಲ್ಲ. ಕೆಲವರು ಶುಗರ್ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತಹ ಸಿಬ್ಬಂದಿ ಗತಿ ಏನು ಎಂದು ಪ್ರಶ್ನಿಸತೊಡಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.