ತುಮಕೂರು

'ಕುಮಾರಸ್ವಾಮಿ ಕೈ ಬಲಪಡಿಸಿ'

Published On :

ಪಾವಗಡ: ರೈತರು ಸೇರಿದಂತೆ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬೆಂಬಲಿಸಿ ಎಂದು ಶಾಸಕ ವೆಂಕಟರಮಣ ಪುತ್ರ, ಮುಖಂಡ ಎಚ್.ವಿ. ಕುಮಾರಸ್ವಾಮಿ ಮನವಿ ಮಾಡಿದರು.
ಅವರು ಸೋಮವಾರ ತಾ,ಓಬಳಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ರಾಜ್ಯದಲ್ಲಿ ರೈತರ ಬಡವ ಹಾಗೂ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರುವಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಡಳಿತ ಜಾರಿಗೆ ತನ್ನಿ ಎಂದ ಅವರು ಪಕ್ಷದ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸಲು ಕಂಕಣ ಬದ್ಧರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಗ್ರಾಮದ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ ಹಾಗೂ ಸತ್ಯನಾರಾಯಣರೆಡ್ಡಿ ನೇತೃತ್ವದಲ್ಲಿ  ನಾಗೇಂದ್ರಗೌಡ, ಶಿವಪದ್ಮ, ಆರ್‌ಎಂಪಿ ವೈದ್ಯ ಡಾ. ಮೂಡಲಗಿರಿಯಪ್ಪ, ಆರ್.ತಿಪ್ಪೇಸ್ವಾಮಿ ಎನ್.ವಿಶ್ವನಾಥ್, ದಲಿತ ಮುಖಂಡ ಮಲ್ಲೇಶ್, ಡಿ.ಎಸ್. ಓಬಯ್ಯ, ಮುಕುಂದಪ್ಪ, ಗೋವಿಂದರಾಜ್ ಗೋಪಾಲ್, ಶ್ರೀನಿವಾಸ್, ಕೆ.ಲೋಕೇಶ್, ವೆಂಕಟೇಶ್, ನರಸಿಂಹರೆಡ್ಡಿ, ರಾಮು, ಗೋವಿಂದರಾಜ್ ಸೇರಿದಂತೆ ಅನೇಕ ಮಂದಿ ಪ್ರಮುಖ ಕಾರ್ಯಕರ್ತರು ಬಿಜೆಪಿ, ಬಿಎಸ್‌ಆರ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.