ತುಮಕೂರು

ರಾಹುಲ್ಗೆ ದಂಡೋರ ಮನವಿ

Published On :

ಕ.ಪ್ರ.ವಾರ್ತೆ   ತುಮಕೂರು   ಏ. 30
ಮುಂಬರುವ ಪಾರ್ಲಿಮೆಂಟ್ ಅಧಿವೇಶನದಲ್ಲಿ ಒಳಮೀಸಲಾತಿ ಕುರಿತು ಚರ್ಚಿಸಿ ಜಾರಿಗೊಳಿಸಬೇಕೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಅವರಿಗೆ ಮಾದಿಗ ದಂಡೋರ ಮನವಿ ಸಲ್ಲಿಸಿದೆ.
ಮೀಸಲಾತಿ ತಾರತಮ್ಯ ಸರಿಪಡಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಬಯಸಿ ಮಾದಿಗ ದಂಡೋರ ಸಂಘಟನೆ ಅನೇಕ ರೀತಿ ಹೋರಾಟ ಮಾಡುತ್ತಾ ಯಶಸ್ವಿಯಾಗಿದೆ. ಒಳಮೀಸಲಾತಿ ಜಾರಿಯಾಗಿ ಆ ಮೂಲಕ ಮೀಸಲಾತಿ ಹಂಚಿಕೆಯಾಗಬೇಕು ಎಂಬುದು ದಂಡೋರದ ನಿರ್ಧಾರವಾಗಿದೆ. ಆದ್ದರಿಂದ ತಾವು ಈ ಬಗ್ಗೆ ಚರ್ಚಿಸಿ ಪಾರ್ಲಿಮೆಂಟ್ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಮೀಸಲಾತಿಯಿಂದ ವಂಚಿತವಾಗಿರುವ ಬಹುಸಂಖ್ಯಾತ ಮಾದಿಗ ಜನಾಂಗಕ್ಕೆ ಧ್ವನಿಯಾಗಬೇಕೆಂದು ದಂಡೋರದ ಜಿಲ್ಲಾಧ್ಯಕ್ಷ ಚಿಕ್ಕಹಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಆಟೋ ಶಿವರಾಜ್, ಗಂಗರಾಜು, ವಿಜಿಯಮ್ಮ, ಲಕ್ಷ್ಮೀದೇವಮ್ಮ ಆಗ್ರಹಿಸಿದ್ದಾರೆ.
ಬಾಲೇನಹಳ್ಳಿ ಶಿವಣ್ಣ ವಿರುದ್ಧ ಆಕ್ರೋಶ: ಮಧುಗಿರಿ ಕ್ಷೇತ್ರದಲ್ಲಿ ಒಕ್ಕಲಿಗ ಜನಾಂಗಕ್ಕೆ ದ್ರೋಹ ಬಗೆಯುತ್ತಿರುವ ಬಾಲೇನಹಳ್ಳಿ ಶಿವಣ್ಣ ಅವರನ್ನು ಕ್ಷೇತ್ರದಿಂದ ಹೊರಗೆ ಕಳುಹಿಸಬೇಕೆಂದು ಒಕ್ಕಲಿಗ ಜನಾಂಗದ ಮುಖಂಡರಾದ ತಿಮ್ಮೇಗೌಡ, ರಾಜಶೇಖರ್, ಗೋವಿಂದಪ್ಪ, ಆರ್. ದೊಡ್ಡಲಿಂಗಪ್ಪ, ಡಾ. ಮೋಹನ್, ರಾಜಶೇಖರ ರೆಡ್ಡಿ,  ಡಾ. ಜಯರಾಮ್ ತಿಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವ ಬಾಲೇನಹಳ್ಳಿ ಶಿವಣ್ಣ ಮಾತಿಗೆ ಮತದಾರರು ಮನ್ನಣೆ ನೀಡಬಾರದೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿಸಲು ಕರೆ: ಮೇ 5 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಶ್ರೀಧರ ಕಲಿವೀರ ಕರೆ ನೀಡಿದ್ದಾರೆ. ನರೇಂದ್ರಮೋದಿಯಂತಹ ಕೋಮುವಾದಿಗಳು ಪ್ರಧಾನಿಯಾಗದಂತೆ ತಡೆಯಲು ಮತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಮುಂದುವರೆಸುವ ಸಲುವಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಅವರು ಕರೆ ನೀಡಿದ್ದಾರೆ.
ಕಾಂಗ್ರೆಸ್ಗೆ ನೇಮಕ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗೋಕುಲ ಬಡಾವಣೆಯ ಕೆ.ಎಸ್. ಪ್ರಕಾಶ್ ಅವರನ್ನು ನೇಮಿಸಲಾಗಿದೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷವನ್ನು ಸಂಘಟಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.